Lakshmi Nivasa Serial: ‘ಲಕ್ಷ್ಮಿ ನಿವಾಸ’ ಧಾರಾವಾಹಿ ಶ್ರೀನಿವಾಸ ಪಾತ್ರಧಾರಿಯ ನಿಜವಾದ ಹೆಸರೇನು? ಇವರ ಹಿನ್ನಲೇ ಗೊತ್ತಾದ್ರೆ ಶಾಕ್ ಆಗ್ತೀರಾ!!
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಪ್ರಧಾನ ಪಾತ್ರಧಾರಿ ಶ್ರೀನಿವಾಸ ಪಾತ್ರದಲ್ಲಿ ನಟಿಸುತ್ತಿರುವವರ ಹೆಸರು ಅಶೋಕ ಜೆಂಬೆ..
ಅಶೋಕ್ ಜೆಂಬೆ ಅವರು ಮೂಲತಃ ರಂಗಭೂಮಿ ಕಲಾವಿದರು.. ಇದರೊಂದಿಗೆ ಸಿನಿಮಾ, ಸಿರೀಯಲ್‌ಗಳೊಂದಿಗೂ ಇವರು ನಂಟು ಹೊಂದಿದ್ದಾರೆ..
ಶ್ರೀನಿವಾಸ ಅಲಿಯಾಸ್ ಅಶೋಕ್ ಜೆಂಬೆ ಈ ಹಿಂದೆ ಖಾಸಗಿವಾಹಿನಿಯಲ್ಲಿ ಪ್ರಸಾರವಾಗಿದ್ದ ಅನೂರೂಪ ಹಾಗೂ ಪದ್ಮಾವತಿ ಧಾರವಾಹಿಗಳಲ್ಲಿ ನಟಿಸಿ ಮಿಂಚಿದ್ದರು.
ಅಶೋಕ್ ಅವರು ರಂಗಕರ್ಮಿ ಮಾತ್ರವಲ್ಲದೇ ಸಂಗೀತ ಕ್ಷೇತ್ರದಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.. ವಿಶೇಷವೆಂದರೇ ಇವರ ಹೆಸರಿನ ಮುಂದೆ ಜೆಂಬೆ ಎಂದು ಸೇರಿಕೊಳ್ಳುವುದಕ್ಕೂ ಇದೇ ಕಾರಣ..
ನಟ ಅಶೋಕ್ ಧಾರವಾಹಿಗಳು ಮಾತ್ರವಲ್ಲದೇ ಶೇಕ್ಸ್‌ಪೀಯರ್, ಪಂಪ ಭಾರತದಂತಹ ಅನೇಕ ನಾಟಕಗಳಲ್ಲಿ ಮಿಂಚಿದ್ದಾರೆ..
ಹೀಗೆ ನಟನೆ, ಸಂಗೀತ, ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಣ್ಣದ ಲೋಕದಲ್ಲಿ ದಶಕಗಳಿಂದ ಸಕ್ರಿಯವಾಗಿದ್ದಾರೆ.