ಲಕ್ಷ್ಮೀ ನಿವಾಸ ಅತ್ತಿಗೆ ವೀಣಾ ರಿಯಲ್‌ ಲೈಪ್‌ ಹೇಗಿದೆ ಗೊತ್ತಾ? ಇವರು ಬರೀ ನಟಿ ಮಾತ್ರವಲ್ಲ!!

Mon, 19 Aug 2024-3:35 pm,

ಲಕ್ಷ್ಮೀ ನಿವಾಸ ಧಾರವಾಹಿಯಲ್ಲಿ ಒಂದಕ್ಕಿಂತ ಒಂದು ಪಾತ್ರ ವಿಭಿನ್ನವಾಗಿದ್ದು, ಸಿರೀಯಲ್‌ ಪ್ರಿಯರಿಗೆ ಸಖತ್‌ ಇಷ್ಟವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ..   

ಇದೀಗ ಈ ಲಕ್ಷ್ಮೀ ನಿವಾಸ ಸಿರೀಯಲ್‌ನಲ್ಲಿ ವೀಣಾ ಪಾತ್ರದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿರುವ ನಟಿಯ ಬಗ್ಗೆ ತಿಳಿದುಕೊಳ್ಳೋಣ..  

ವೀಣಾ ಪಾತ್ರಧಾರಿಯಾಗಿ ಮಿಂಚುತ್ತಿರುವ ನಟಿಯ ಹೆಸರು ಲಕ್ಷ್ಮಿ ಹೆಗಡೆ.. ಇವರು ಈಗಾಗಲೇ ಹಲವಾರು ಸಿರೀಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.. ಆದರೆ ಲಕ್ಷ್ಮೀ ನಿವಾಸ ಸಿರೀಯಲ್‌ ಇವರಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿದೆ.. ವೀಣಾ ಪಾತ್ರವನ್ನು ಇಷ್ಟಪಡದವರೇ ಇಲ್ಲ ಎಂದರೇ ಅತಿಶಯೋಕ್ತಿಯಲ್ಲ..   

ನಟಿ ಲಕ್ಷ್ಮೀ ಹೆಗಡೆ ಅವರ ವೈಯಕ್ತಿಕ ಜೀವನವನ್ನು ನೋಡುವುದಾದರೇ ಮೂಲತಃ ಶಿರಸಿಯವರಾದ ಅವರು ಡಿಗ್ರಿ ಶಿಕ್ಷಣ ಪಡೆದಿದ್ದಾರೆ..  

ವೀಣಾ ಅಲಿಯಾಸ್‌ ಲಕ್ಷ್ಮೀ ಹೆಗಡೆ ಹಲವು ಸಿನಿಮಾ ಹಾಗೂ ಸೀರಿಯಲ್‌ಗಳಲ್ಲಿ ಅಭಿನಯಿಸುವ ಮೂಲಕ ಬಣ್ಣದ ಲೋಕದಲ್ಲಿ ಸಕ್ರಿಯವಾಗಿದ್ದಾರೆ..  

ವಿಶೇಷ ಏನಪ್ಪಾ ಅಂದ್ರೆ ಲಕ್ಷ್ಮೀ ಹೆಗಡೆಯವರು ಬರೀ ನಟಿ ಮಾತ್ರವಲ್ಲ.. ಮೂಲತಃ ಗಾಯಕಿಯೂ ಹೌದು.. ಜೊತೆಗೆ ಟ್ಯಾಬ್‌, ಜೊತೆಗಾತಿಯಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ..   

ಹಲವಾರು ಸಿರೀಯಲ್‌ಗಳಲ್ಲಿ ಮಿಂಚಿರುವ ನಟಿ ವಿಭಿನ್ನ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.. ಆದರೆ ಇವರಿಗೆ ಲಕ್ಷ್ಮೀ ನಿವಾಸದ ಅತ್ತಿಗೆ ವೀಣಾ ಪಾತ್ರ ಮಾತ್ರ ಹೇಳಿ ಮಾಡಿಸಿದಂತಿದೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link