Lakshmi Nivasa Serial: ಲಕ್ಷ್ಮೀ ನಿವಾಸದಲ್ಲಿ ತುಂಬಾನೆ ಇಂಪ್ರೆಸ್ ಮಾಡಿದ ಜಯಂತ್ ಪಾತ್ರಧಾರಿ ಯಾರು ಗೊತ್ತಾ? ಈತನ ರಿಯಲ್‌ ಲೈಫ್‌ ಕಹಾನಿ ಕೇಳಿದ್ರೆ ಶಾಕ್‌ ಆಗ್ತೀರಾ!!

Tue, 26 Mar 2024-12:48 pm,

ವಿಭಿನ್ನ ಕಥೆಯ ಮೂಲಕ ಜನಪ್ರಿಯತೆ ಗಳಿಸಿಸರುವ ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಸದ್ಯ ಜಾಹ್ನವಿಯನ್ನು ಮದುವೆಯಾಗಿರುವ ಜಯಂತ್ ಪಾತ್ರ ಅಭಿಮಾನಿಗಳಿಗೆ ಸಖತ್‌ ಇಷ್ಟವಾಗಿದೆ..   

ಜಾಹ್ನವಿಯನ್ನು ಕಾಲೇಜಿನ ಸಮಾರಂಭವೊಂದರಲ್ಲಿ ನೋಡಿ, ಅದೇ ದಿನ ಆಕೆಯ ಮನೆಗೆ ಹೋಗಿ, ಎಂಗ್ನೇಜ್ ಮೆಂಟ್ ಮಾಡಿಕೊಂಡು ಅತೀ ವಿನಯದಿಂದ ಎಲ್ಲರೊಂದಿಗೆ ಹೊಂದಿಕೊಳ್ಳುತ್ತಿರುವ ಜಯಂತ್‌ ಅವರ ನಿಜವಾದ ಹೆಸರು ದೀಪಕ್ ಸುಬ್ರಹ್ಮಣ್ಯ (Deepak Subramanya).   

ಅತೀ ವಿನಯದಿಂದ ಜಾಹ್ನವಿ ಮನೆಯವರನ್ನು ಇಂಪ್ರೆಸ್‌ ಮಾಡಿರುವ ಜಯಂತ್‌, ಆಕೆಯ ಆಸೆಗಳನ್ನೆಲ್ಲ ತಿಳಿದು ಈಡೇರಿಸುತ್ತಾ ಅವಳ ಮನಸ್ಸನ್ನು ಗೆದ್ದಿರುವ, ಹಾಗೇ ಅತೀ ವಿನಯದಿಂದಿರುವ ಈ ವ್ಯಕ್ತಿಯೇ ಜಾಹ್ನವಿ ಬಾಳಿಗೆ ಮುಳ್ಳಾಗಬಹುದು ಎನ್ನುವ ಸಣ್ಣ ಅನುಮಾನವೂ ಪ್ರೇಕ್ಷರಲ್ಲಿದೆ..   

ಈ ಜಯಂತ್‌ ಅನಾಥನಾಗಿ ಬೆಳೆದ ಅತಿ ದೊಡ್ಡ ಬ್ಯುಸಿನೆಸ್ ಮೆನ್, ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿ ವಿನಯವನ್ನೂ ತನ್ನದಾಗಿಸಿಕೊಂಡಿರುವ ಮತ್ತು ಪಟಾಕಿ ಜಾಹ್ನವಿಗೆ ಜೋಡಿಯಾಗಿರುವ ಜಂಯಂತ್‌ ತಮ್ಮ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸುತ್ತಿದ್ದಾರೆ..   

 ಇನ್ನು ಜಯಂತ್ ಅಲಿಯಾಸ್‌ ದೀಪಕ್ ಸುಬ್ರಹ್ಮಣ್ಯ ಈ ಹಿಂದೆ ದಾಸ ಪುರಂದರ ಸಿರೀಯಲ್‌ನಲ್ಲಿ ಶ್ರೀನಿವಾಸ ನಾಯ್ಕ್ ಆಗಿ ಮಿಂಚಿದ್ದರು.. ಇವರು ಸಾಫ್ಟ್ ವೇರ್ ಇಂಜಿನಿಯರ್.. ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಈತ 20 ವರ್ಷಗಳಿಂದ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದಾರೆ.. ನೂರಾರು ನಾಟಕಗಳಲ್ಲಿ ನಟಿಸಿ ಮೆಚ್ಚುಗೆ ಪಡೆದುಕೊಂಡಿದ್ದಾರೆ..   

ಸೀರಿಯಲ್‌ ಮಾತ್ರವಲ್ಲದೇ ಬೆಳ್ಳಿತೆರೆಗೂ ಕಾಲಿಟ್ಟಿರುವ ಜಯಂತ್‌ ನ್ನಡದಲ್ಲಿ ಸಾಲಗಾರ, ಜಾರುಬಂಡೆ, ಸುದ್ದಿ, ಆಯಾನ, ಸಾರಾಂಶ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link