Lakshmi Yoga: ಶ್ರಾವಣ ಮಾಸದಲ್ಲಿ ಲಕ್ಷ್ಮಿ ಯೋಗದಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ!
ಮೇಷ ರಾಶಿಯ 4 & 5ನೇ ಸ್ಥಾನಗಳಲ್ಲಿ ಶುಭ ಗ್ರಹಗಳ ಸಂಚಾರದಿಂದ ಶ್ರಾವಣ ಮಾಸವು ಚೆನ್ನಾಗಿರುತ್ತದೆ. ಆದಾಯವು ಅನೇಕ ಪಟ್ಟು ಬೆಳೆಯುತ್ತದೆ. ಆರ್ಥಿಕ ಪ್ರಗತಿ, ಉದ್ಯೋಗದಲ್ಲಿ ಯಶಸ್ಸು, ಸುಖ-ಸಂತೋಷ ನಿಮ್ಮದಾಗಲಿದೆ. ಉದ್ಯೋಗದಲ್ಲಿ ನೀವು ಭಡ್ತಿ ಪಡೆಯುತ್ತೀರಿ. ವೃತ್ತಿ-ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಇರುತ್ತದೆ. ನಿಮ್ಮ ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದೆ.
ವೃಷಭ ರಾಶಿಯವರಿಗೆ 4ನೇ ಸ್ಥಾನದಲ್ಲಿ ಎಲ್ಲಾ ಶುಭ ಗ್ರಹಗಳು ಇರುವುದರಿಂದ ಗೃಹ, ವಾಹನ ಯೋಗ ಬರುವ ಸಾಧ್ಯತೆಯಿದೆ. ಆಂತರಿಕ ಮತ್ತು ಬಾಹ್ಯ ಒತ್ತಡ ಕಡಿಮೆಯಾಗುತ್ತದೆ. ನಿಮಗೆ ಮಾನಸಿಕ ಪರಿಹಾರ ಸಿಗಲಿದೆ. ನಿಮ್ಮ ಉದ್ಯೋಗದ ಸ್ಥಿತಿ ಉತ್ತಮವಾಗಲಿದೆ. ಆದಾಯ ದಿನದಿಂದ ದಿನಕ್ಕೆ ಹೆಚ್ಚಾಗಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ನಿರೀಕ್ಷಿತ ಆರ್ಥಿಕ ಪ್ರಗತಿ ಇರಲಿದೆ. ನಿರುದ್ಯೋಗಿಗಳಿಗೆ ಹಲವು ಅವಕಾಶಗಳು ದೊರೆಯಲಿವೆ. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಕರ್ಕಾಟಕ ರಾಶಿಯಲ್ಲಿ ಶುಭ ಗ್ರಹಗಳ ಸಂಚಾರ ಮತ್ತು ಹಣದ ಸ್ಥಾನದಲ್ಲಿ ಅಧಿಕವಾಗಿರುವುದರಿಂದ ಅನೇಕ ರೀತಿಯಲ್ಲಿ ಆದಾಯ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಶುಭಕಾರ್ಯಗಳು ನಡೆಯಲಿವೆ. ಶುಭ ಕಾರ್ಯಗಳಿಗೆ ಹೆಚ್ಚು ಖರ್ಚು ಮಾಡುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ನೀವು ಉನ್ನತ ಸ್ಥಾನ ತಲುಪುವುದು. ನಿಮ್ಮ ಸಂಸಾರ ಮತ್ತು ದಾಂಪತ್ಯ ಜೀವನ ಸುಖಮಯವಾಗಲಿದೆ. ನಿರುದ್ಯೋಗಿಗಳಿಗೆ ವಿದೇಶದಿಂದ ಆಫರ್ ಬರುವ ಸಾಧ್ಯತೆಯಿದೆ. ನಿಮ್ಮ ಆರೋಗ್ಯಕ್ಕೆ ಯಾವುದೇ ರೀತಿ ಹಾನಿಯಾಗಲ್ಲ.
ಶ್ರಾವಣ ಮಾಸ ಪೂರ್ತಿ ಸಿಂಹ ರಾಶಿಯಲ್ಲಿ ಅಧಿಪತಿ ರವಿ, ಶುಕ್ರ ಮತ್ತು ಬುಧ ಸಂಕ್ರಮಿಸುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಬೆಳೆಯುವ ಅವಕಾಶ ಸಿಗಲಿದೆ. ಹಠಾತ್ ಆರ್ಥಿಕ ಲಾಭದ ಅವಕಾಶವಿರುತ್ತದೆ. ನಿಮ್ಮ ಎಲ್ಲಾ ಪ್ರಮುಖ ಆಸೆಗಳು ಈಡೇರಲಿವೆ. ಉದ್ಯೋಗದಲ್ಲಿ ಉತ್ತಮ ಬೆಳವಣಿಗೆ ಕಂಡುಬರಲಿದೆ. ವೃತ್ತಿ ಮತ್ತು ವ್ಯವಹಾರ ಕೈಗೂಡಲಿವೆ. ಉದ್ಯೋಗ & ಆರ್ಥಿಕ ಪ್ರಗತಿಯಾಗಲಿದೆ. ನಿಮ್ಮ ಆದಾಯವು ಅನೇಕ ರೀತಿಯಲ್ಲಿ ಹೆಚ್ಚಾಗಲಿದ್ದು, ಹಣಕಾಸಿನ ಸಮಸ್ಯೆ ಕಡಿಮೆಯಾಗಲಿವೆ.
ತುಲಾ ರಾಶಿಯವರಿಗೆ ಲಾಭಸ್ಥಾನದಲ್ಲಿ ಶುಭ ಗ್ರಹಗಳು ಮತ್ತು ಲಾಭದಾಯಕ ಅಧಿಪತಿಗಳ ಸಂಚಾರದಿಂದ ರಾಜಯೋಗ ಉಂಟಾಗಲಿದೆ. ಯಾವುದೇ ಕ್ಷೇತ್ರದಲ್ಲಿ ಅನಿರೀಕ್ಷಿತ ಪ್ರಗತಿ ಸಾಧಿಸಬಹುದು. ಉದ್ಯೋಗದಲ್ಲಿ ಬಡ್ತಿ ದೊರೆಯುತ್ತದೆ. ವೃತ್ತಿ ಮತ್ತು ವ್ಯವಹಾರ ವಿಸ್ತರಿಸಲು ಪ್ರಯತ್ನ ಮಾಡಲಾಗುತ್ತದೆ. ನಿಮ್ಮ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗಲಿವೆ. ನಿಮ್ಮ ಆದಾಯವು ಹೆಚ್ಚಾಗಲಿದ್ದು, ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ವೃಶ್ಚಿಕ ರಾಶಿಯವರಿಗೆ 9 & 10ನೇ ಸ್ಥಾನಗಳಲ್ಲಿ ಶುಭ ಗ್ರಹಗಳ ಸಂಚಾರದಿಂದ ಅನಿರೀಕ್ಷಿತ ಧನಯೋಗ ಉಂಟಾಗಲಿದೆ. ಹಠಾತ್ ಆರ್ಥಿಕ ಲಾಭದ ಜೊತೆಗೆ ಅನೇಕ ರೀತಿಯಲ್ಲಿ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ. ಪ್ರಮುಖ ಅಗತ್ಯ ಪೂರೈಸುವುದರ ಜೊತೆಗೆ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿ ಪರಿಹಾರವಾಗಲಿವೆ. ಉದ್ಯೋಗದಲ್ಲಿ ಸಂಬಳ ಮತ್ತು ಆದಾಯದಲ್ಲಿ ಉತ್ತಮ ಹೆಚ್ಚಳದ ಸೂಚನೆಗಳಿರುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ.