ಕೊಹ್ಲಿ, ಬೂಮ್ರಾ ಅಲ್ಲ..ಟೆಸ್ಟ್‌ ಪಂದ್ಯದ ಎಕ್ಸ್‌ ಫ್ಯಾಕ್ಟರ್‌ ಇವರೇ..ಟೀಂ ಇಂಡಿಯಾದ ಮಾಜಿ ಕೋಚ್‌ ಶಾಕಿಂಗ್‌ ಹೇಳಿಕೆ

Mon, 29 Jul 2024-10:45 am,

ಮಾಜಿ ಮುಖ್ಯ ಕೋಚ್ ಲಾಲಚಂದ್ ರಜಪೂತ್ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಹಾಡಿ ಹೊಗಳಿದ್ದಾರೆ. ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಎಕ್ಸ್-ಫ್ಯಾಕ್ಟರ್ ಎಂದಿದ್ದಾರೆ.  ಟಿ 20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಗಿ ಅದ್ಭುತ ಪ್ರದರ್ಶನ ನೀಡಿದರು. ಟಿ20 ವಿಶ್ವಕಪ್‌ನಲ್ಲಿ ಉಪನಾಯಕನಾಗಿ ಕಾರ್ಯನಿರ್ವಹಿಸಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ನಾಯಕತ್ವದಿಂದ ವಜಾಗೊಳಿಸಿದ್ದಾರೆ. ಆದರೆ ಈ ನಿರ್ಧಾರವನ್ನು ಲಾಲಚಂದ್ ರಜಪೂತ್ ಸಮರ್ಥಿಸಿಕೊಂಡರು.

ಲಾಲ್ ಚಂದ್ ರಜಪೂತ್ ಅವರು ಧೋನಿ ನಾಯಕತ್ವದಲ್ಲಿ ಮೊದಲ T20 ವಿಶ್ವಕಪ್ 2007 ಗೆದ್ದ ಭಾರತ ತಂಡಕ್ಕೆ ಕೋಚ್ ಆಗಿದ್ದರು. ಇತ್ತೀಚೆಗಷ್ಟೇ ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಾಂಡ್ಯ ಬಗ್ಗೆ ಹಾರ್ದಿಕ್ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ರೆಡ್ ಬಾಲ್ ಕ್ರಿಕೆಟ್ ಗೆ ರೀ ಎಂಟ್ರಿ ಕೊಟ್ಟರೆ ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್ ಮೂರು ವಿಭಾಗಗಳಲ್ಲಿ ಟೀಂ ಇಂಡಿಯಾ ಬಲಿಷ್ಠವಾಗಲಿದೆ ಎಂದಿದ್ದಾರೆ.  

2018ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಸಮಸ್ಯೆಯಿಂದಾಗಿ ರೆಡ್ ಬಾಲ್ ಮಾದರಿಯಿಂದ ದೂರ ಉಳಿದಿದ್ದಾರೆ. ಹಾರ್ದಿಕ್ ಪಾಂಡ್ಯ ಅವರನ್ನು ನಾಯಕತ್ವದ ಜವಾಬ್ದಾರಿಯಿಂದ ತೆಗೆದುಹಾಕಿರುವುದು ಉತ್ತಮ ನಿರ್ಧಾರ ಎಂದು ಲಾಲ್‌ಚಂದ್ ಅಭಿಪ್ರಾಯಪಟ್ಟಿದ್ದಾರೆ. ನಾಯಕತ್ವದ ಜವಾಬ್ದಾರಿ ಇಲ್ಲದಿರುವುದರಿಂದ ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಆಡಬಲ್ಲೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.  

ಪತ್ರಿಕಾಗೋಷ್ಠಿಯಲ್ಲಿ ಅಜಿತ್ ಅಗರ್ಕರ್ ಅವರ ಹೇಳಿಕೆಗಳನ್ನು ನಾನು ಕೇಳಿದೆ. ಹಾರ್ದಿಕ್ ಪಾಂಡ್ಯ ಹೆಚ್ಚಾಗಿ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಅವರಿಗೆ ಎಲ್ಲ ಪಂದ್ಯಗಳನ್ನು ಆಡುವ ನಾಯಕ ಬೇಕಿತ್ತು. ಹಾಗಾಗಿಯೇ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ನಾಯಕನಾಗಿ ಅಪಾರ ಅನುಭವ ಹೊಂದಿದ್ದಾರೆ' ಎಂದು ಲಾಲಚಂದ್ ರಜಪೂತ್ ಸಿಂಗ್ ಹೇಳಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತೆ ಟೆಸ್ಟ್ ಗೆ ಎಂಟ್ರಿ ಕೊಟ್ಟರೆ ಟೀಂ ಇಂಡಿಯಾ ಸುಲಭವಾಗಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆಲ್ಲಲಿದೆ ಎಂದೂ ಸುನಿಲ್ ಗವಾಸ್ಕರ್ ಹೇಳಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link