ಹಿಮಾಚಲ ಪ್ರದೇಶದ ಹಲವೆಡೆ ಭೂಕುಸಿತ; ಬಂಡೆಗಳ ನಡುವೆ ಸಿಲುಕಿದ ತೈಲ ಟ್ಯಾಂಕರ್

Tue, 20 Aug 2019-11:20 am,

ಮಳೆಯಿಂದಾಗಿ ಹಿಮಾಚಲ ಪ್ರದೇಶದ ಮನಾಲಿ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ದೊಡ್ಡ ಅಪಘಾತ ಸಂಭವಿಸಿದೆ. ಕುಲ್ಲು ಜಿಲ್ಲೆಯ ರೋಹ್ಟಾಂಗ್ ಬಳಿಯ ಮಾರ್ಹಿಯಲ್ಲಿ ಭೂಕುಸಿತ ಸಂಭವಿಸಿದ ನಂತರ ರಸ್ತೆ ಬಂದ್ ಆಗಿದೆ.

ಭೂಕುಸಿತದಿಂದಾಗಿ ತೈಲ ಟ್ಯಾಂಕರ್ ಬಂಡೆಗಳ ಕೆಳಗೆ ಸಿಕ್ಕಿಬಿದ್ದಿದೆ. ಆದರೆ, ಟ್ಯಾಂಕರ್ ಚಾಲಕನ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ. ಸುದ್ದಿ ಸಂಸ್ಥೆಯ ಪ್ರಕಾರ, ಮಳೆಯಿಂದಾಗಿ ಹಿಮಾಚಲ ಪ್ರದೇಶದ ಅನೇಕ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸಿದೆ. ಚಿತ್ರಗಳಲ್ಲಿ, ಪರ್ವತದ ಒಂದು ಭಾಗದಲ್ಲಿ ತೈಲ ಟ್ಯಾಂಕರ್ ಹೇಗೆ ಸಿಲುಕಿದೆ ಎಂಬುದನ್ನು ನೀವು ನೋಡಬಹುದು.

ಭಾರಿ ಮಳೆಯಿಂದಾಗಿ ರೋಹ್ತಂಗ್-ಮನಾಲಿ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಕೊಕ್ಸಾರ್ ಚೌಕಿ ಬಳಿ ಚರಂಡಿಯಲ್ಲಿ ನೀರಿನ ಮಟ್ಟ ಏರಿದ ನಂತರ ರಸ್ತೆಗೆ ಅಡಚಣೆಯಾಗಿದೆ ಎಂದು ಕುಲ್ಲು ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಸಿಂಗ್ ತಿಳಿಸಿದ್ದಾರೆ. ರಸ್ತೆ ಅಡಚಣೆಯಿಂದಾಗಿ ಅನೇಕ ವಾಹನಗಳು ನಡು ರಸ್ತೆಯಲ್ಲಿ ಸಿಲುಕಿಕೊಂಡಿವೆ. ಆದರೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟವಾಗಿಲ್ಲ ಎಂದು ಅವರು ಹೇಳಿದರು.

Photo Courtesy: ANI

ZEENEWS TRENDING STORIES

By continuing to use the site, you agree to the use of cookies. You can find out more by Tapping this link