ಇನ್ನೆರಡು ವಾರದಲ್ಲಿ ವರ್ಷದ ಕೊನೆಯ ಚಂದ್ರಗ್ರಹಣ: ಈ 3 ರಾಶಿಯವರಿಗೆ ಧನಸಂಪತ್ತಿನ ಹೊನಲು, ಕೀರ್ತಿ ಜೊತೆ ಆಯಸ್ಸು ವೃದ್ಧಿ

Wed, 11 Oct 2023-2:23 pm,

ಈ ವರ್ಷದ ಕೊನೆಯ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣವು ಅಕ್ಟೋಬರ್‌’ನಲ್ಲಿ ಸಂಭವಿಸಲಿದೆ. ವೈದಿಕ ವಿದ್ವಾಂಸರ ಪ್ರಕಾರ, ಎಲ್ಲಾ 12 ರಾಶಿಗಳು ಒಂದೇ ತಿಂಗಳಲ್ಲಿ ಎರಡು ಬಾರಿ ಗ್ರಹಣದಿಂದಾಗಿ ಪ್ರಭಾವಕ್ಕೆ ಒಳಗಾಗಲಿವೆ.

 ಈ ಗ್ರಹಣಗಳು ಪ್ರಮುಖವಾಗಿ 3 ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಇದರಿಂದಾಗಿ ಈ ಜನರ ಮನೆಯಲ್ಲಿ ಸಂಪತ್ತಿನ ಹರಿವು ಹೆಚ್ಚಾಗುತ್ತದೆ. ಜೊತೆಗೆ ಅನೇಕ ಶುಭ ಕಾರ್ಯಕ್ರಮಗಳು ನಡೆಯುತ್ತವೆ.

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ವರ್ಷದ ಕೊನೆಯ ಸೂರ್ಯಗ್ರಹಣವು ಅಕ್ಟೋಬರ್ 14 ರಂದು ಸಂಭವಿಸಿದರೆ, ಚಂದ್ರಗ್ರಹಣವು ಅಕ್ಟೋಬರ್ 29 ರಂದು ಸಂಭವಿಸಲಿದೆ. ವರ್ಷದ ಕೊನೆಯ ಚಂದ್ರಗ್ರಹಣವು ಭಾರತದಲ್ಲಿಯೂ ಗೋಚರಿಸುತ್ತದೆ. ಈ ಕಾರಣದಿಂದಾಗಿ ಸೂತಕ ಅವಧಿಯು ದೇಶದಲ್ಲಿ ಮಾನ್ಯವಾಗಿರುತ್ತದೆ.

ಮಿಥುನ ರಾಶಿ: ವೈದಿಕ ವಿದ್ವಾಂಸರ ಪ್ರಕಾರ, ಸೂರ್ಯ- ಚಂದ್ರ ಗ್ರಹಣ 2023 ಈ ರಾಶಿಯವರಿಗೆ ಅನೇಕ ಅವಕಾಶಗಳನ್ನು ನೀಡಲಿದೆ. ನಿಮ್ಮ ಕೆಲಸದ ಸ್ಥಳದಲ್ಲಿ ನೀವು ಪ್ರಗತಿ ಮತ್ತು ಸಮಾಜದಲ್ಲಿ ಗೌರವವನ್ನು ಪಡೆಯುತ್ತೀರಿ. ಹೊಸ ಕೆಲಸಗಳಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಮನೆಯಲ್ಲಿ ಒಂದು ಶುಭ ಕಾರ್ಯಕ್ರಮವಿರಬಹುದು

ಸಿಂಹ ರಾಶಿ: ಈ ಬಾರಿಯ ಗ್ರಹಣವು ನಿಮಗೆ ಒಳ್ಳೆಯ ಸುದ್ದಿಯನ್ನು ತರುತ್ತವೆ. ಉದ್ಯೋಗಸ್ಥರಿಗೆ ಉತ್ತಮ ಅವಕಾಶ ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ವ್ಯಾಪಾರ ಮಾಡುವವರು ಲಾಭವನ್ನು ಪಡೆಯುತ್ತಾರೆ. ಪೋಷಕರ ಆರೋಗ್ಯ ಉತ್ತಮವಾಗಿರುತ್ತದೆ.

ತುಲಾ ರಾಶಿ: ಅಕ್ಟೋಬರ್ ತಿಂಗಳು ಈ ರಾಶಿಯವರಿಗೆ ಸಂತೋಷವನ್ನು ತರುತ್ತದೆ. ನಿಮ್ಮ ಎಲ್ಲಾ ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ವ್ಯವಹಾರದಲ್ಲಿ ನೀವು ಪ್ರಗತಿಯನ್ನು ಪಡೆಯುತ್ತೀರಿ. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ಹಣಕ್ಕೆ ಸಂಬಂಧಿಸಿದ ಒಳ್ಳೆಯ ಸುದ್ದಿಯನ್ನು ಪಡೆಯಬಹುದು.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link