ಇಂದು ಗೋಚರಿಸಲಿದೆ ವರ್ಷದ ಅತಿ ದೊಡ್ಡ ಸೂಪರ್ ಮೂನ್

Wed, 13 Jul 2022-11:05 am,

Mississippi State University's Deer Ecology and Management Lab ಪ್ರಕಾರ, ಜುಲೈ ತಿಂಗಳಲ್ಲಿ ಬರುವ ಈ ಸೂಪರ್‌ಮೂನ್ ಅನ್ನು ಬಕ್ ಮೂನ್ ಎಂದು ಕರೆಯಲಾಗುತ್ತದೆ. ಏಕೆಂದರೆ ಜೂನ್-ಜುಲೈ ತಿಂಗಳಲ್ಲಿ ಗಂಡು ಜಿಂಕೆಗಳ ಕೊಂಬುಗಳು ವೇಗವಾಗಿ ಬೆಳೆಯುತ್ತವೆ. ಈ ಸಂದರ್ಭದಲ್ಲಿ ಅತ್ಯುತ್ತಮ ಗಾತ್ರವನ್ನು ಅದು ಹೊಂದುತ್ತದೆ. ಅವುಗಳ ಕೊಂಬುಗಳು ಪ್ರತಿ ವಾರ ಸುಮಾರು 2 -2 ಇಂಚುಗಳವರೆಗೆ ಬೆಳೆಯುತ್ತವೆ.

NASA ಪ್ರಕಾರ, 2022 ರ ಈ ಅತಿದೊಡ್ಡ ಮತ್ತು ಎರಡನೇ ಸೂಪರ್‌ಮೂನ್ ಈ ವಾರ ಮೂರು ದಿನಗಳವರೆಗೆ ಇರುತ್ತದೆ. ಯುಎಸ್ ಬಾಹ್ಯಾಕಾಶ ಸಂಸ್ಥೆ ಹೇಳಿಕೆಯಲ್ಲಿ, 'ಮಂಗಳವಾರ ಬೆಳಿಗ್ಗೆಯಿಂದ ಶುಕ್ರವಾರ ಬೆಳಗಿನವರೆಗೆ ಸುಮಾರು ಮೂರು ದಿನಗಳ ಕಾಲ ಸೂಪರ್ ಮೂನ್ ಗೋಚರಿಸಲಿದೆ. ಬುಧವಾರ ಅಂದರೆ ಇಂದು ಬೆಳಗ್ಗೆ 5:00 ಗಂಟೆಗೆ  ಚಂದ್ರನು ಭೂಮಿಗೆ ಹತ್ತಿರದ ಬಿಂದುವನ್ನು ತಲುಪಿದ್ದಾನೆ.   ಬುಧವಾರ ಸಂಜೆ 9:44 ರವರೆಗೆ ಪೂರ್ಣ ಚಂದ್ರನು ಆಗ್ನೇಯ ದಿಗಂತದಿಂದ 5 ಡಿಗ್ರಿಗಳಷ್ಟು ದೂರದಲ್ಲಿ ಗೋಚರಿಸುತ್ತದೆ ಎಂದು NASA ಹೇಳಿದೆ.

ಜುಲೈನ ಫುಲ್ ಬಕ್ ಮೂನ್ ಹುಣ್ಣಿಮೆಯ ದಿನಕ್ಕಿಂತಲೂ ಭೂಮಿಯ  ಹತ್ತಿರದಲ್ಲಿ ಪರಿಕ್ರಮಿಸುತ್ತದೆ. ಇದು 2022 ರ ಅತಿದೊಡ್ಡ ಮತ್ತು ಪ್ರಕಾಶಮಾನವಾದ ಸೂಪರ್‌ಮೂನ್ ಆಗಿದೆ. ಬಕ್ ಮೂನ್ ಭೂಮಿಯಿಂದ 357,264 ಕಿಮೀ ದೂರದಲ್ಲಿ ಗೋಚರಿಸುತ್ತದೆ. 

ಭೂಮಿಗೆ ಹತ್ತಿರವಿರುವ ದೀರ್ಘವೃತ್ತದ ಕಕ್ಷೆಯಲ್ಲಿ ಚಂದ್ರನ ಆಗಮನದೊಂದಿಗೆ ಹುಣ್ಣಿಮೆಯು ಹೊಂದಿಕೆಯಾದಾಗ ಸೂಪರ್‌ಮೂನ್‌ಗಳನ್ನು ವೀಕ್ಷಿಸಬಹುದು. ಹತ್ತಿರದ ಬಿಂದುವನ್ನು ಪೆರಿಜಿ ಎಂದು ಕರೆಯಲಾಗುತ್ತದೆ. 'ಸೂಪರ್‌ಮೂನ್' ಎಂಬ ಪದವನ್ನು ಜ್ಯೋತಿಷಿ ರಿಚರ್ಡ್ ನಾಲ್ ಅವರು 1979 ರಲ್ಲಿ ಸೃಷ್ಟಿಸಿದರು. ಆದರೆ ಇದನ್ನು ಅಧಿಕೃತ ಖಗೋಳಶಾಸ್ತ್ರದ ಪದವೆಂದು ಪರಿಗಣಿಸಲಾಗುವುದಿಲ್ಲ. ಈ ಪದದ ಸಾಮಾನ್ಯ ತಿಳುವಳಿಕೆಯಂತೆ, 'ಸೂಪರ್‌ಮೂನ್' ಚಂದ್ರನು ಸುತ್ತಳತೆಯ 90% ನಷ್ಟು ಇರುವಾಗ ಸಂಭವಿಸುವ ಅಮಾವಾಸ್ಯೆ ಅಥವಾ ಹುಣ್ಣಿಮೆಯನ್ನು ಸೂಚಿಸುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link