Chaitra Achar: ಶ್ವೇತ ವರ್ಣದ ಡ್ರೆಸ್‌ನಲ್ಲಿ ಸಪ್ತ ಸಾಗರದಾಚೆಯ ಎಲ್ಲೋ ಸುಂದರಿ!
ಸ್ಯಾಂಡಲ್‌ವುಡ್ ನಟಿ ಚೈತ್ರಾ ಆಚಾರ್ ಶ್ವೇತ ವರ್ಣದ ಬೆಟ್ಟೆ ತೊಟ್ಟು ಇನ್ನೂ ಸುಂದರವಾಗಿ ಆಕರ್ಷಿತರಾಗಿ ಕಾಣಿಸುತ್ತಿದ್ದಾರೆ.
ನಟಿ ಚೈತ್ರಾ ಬಿಳಿ ಬಣ್ಣದಲ್ಲಿ ಡ್ರೆಸ್‌ನಲ್ಲಿ ವಿಭಿನ್ನವಾಗಿಯೇ ಇದ್ದು, ಹಾಗಾಗಿಯೇ ಹೊಸ ರೀತಿಯ ಹೊಸ ಪರಿಕಲ್ಪನೆಯಲ್ಲಿ ಕಾಣಿಸುತ್ತಾರೆ.
ಚೈತ್ರಾ ಆಚಾರ್ ತಮ್ಮ ಈ ಸ್ಪೆಷಲ್ ಫೋಟೋ ಶೂಟ್‌ನ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್‌ಗೆ ʻಈ ಚಿಕ್ಕ ಜೀವನವನ್ನು ಇಷ್ಟ ಪಡುತ್ತೇನೆಂದುʼ ಬರೆದುಕೊಂಡಿದ್ದಾರೆ.
ಈ ನಟಿ ಒಂದು ಕಂಫರ್ಟ್ ಕಾಸ್ಟೂಮ್‌ನಲ್ಲಿ ತುಂಬಾ ಚೆನ್ನಾಗಿಯೇ ಕಾಣಿಸುತ್ತಿದ್ದು, ಇದು ದಿ ಬೆಸ್ಟ್ ಅನ್ನುವ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ಕೃಷ್ಣ ಸುಂದರ ಸದ್ಯ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಚಿತ್ರದ ಸುರಭಿ ಪಾತ್ರದಿಂದಲೇ ಗಮನ ಸೆಳೆಯುತ್ತಿದ್ದಾರೆ.
ಇದೇ ವರ್ಷ ಚೈತ್ರಾ ಇದಕ್ಕೂ ಮೊದಲು ಟೋಬಿ ಸಿನಿಮಾದ ಜನ್ನಿ ರೋಲ್‌ನಲ್ಲಿಯೇ ಹೆಚ್ಚು ಹಿಟ್ ಆಗಿದ್ದರು.
ಚೈತ್ರಾ ಆಚಾರ್ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಬಳಿಕ, ಸ್ಟ್ರಾಬೆರಿ , ಬ್ಲಿಂಕ್, ಹ್ಯಾಪಿ ಬರ್ತ್ ಡೇ ಟು ಮಿ ಚಿತ್ರಗಳಲ್ಲಿ ಅಭಿನಯಿಸಿದ್ದು, ಈ ಸಿನಿಮಾಗಳು ಇನ್ನೇನು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿಯೇ ಇದ್ದು, ತೆರೆಮೇಲೆ ಬರಲು ಸಜ್ಜಾಗುತ್ತಿವೆ.