ಬಿಗ್ ಬಾಸ್ ಮನೆಗೆ ಜಗದೀಶ್ ರೀ ಎಂಟ್ರಿ !ಈ ಬಾರಿ ಟಾರ್ಗೆಟ್ ಇಟ್ಟುಕೊಂಡೇ ಮನೆ ಪ್ರವೇಶಿಸುತ್ತಿರುವ ಲಾಯರ್!ಮತ್ತೆ ರಣಾಂಗಣವಾಗುವುದು ದೊಡ್ಮನೆ !
ಬಿಗ್ ಬಾಸ್ ಮನೆಗೆ ಈ ಬಾರಿ ಪ್ರವೇಶ ಪಡೆದಿದ್ದು ಒಟ್ಟು 17 ಮಂದಿ ಸ್ಪರ್ಧಿಗಳು. ಈ ಪೈಕಿ ವೀಕ್ಷಕರ ಮತಗಳ ಆಧಾರದ ಮೇಲೆ ಒಬ್ಬ ಸ್ಪರ್ಧಿ ವೀಕೆಂಡ್ ನಂದು ಮನೆಯಿಂದ ಹೊರ ಬಂದರು. ಅವರೇ ಯಮುನಾ.
ಇದಾದ ನಂತರ ದಸರಾ ಹಿನ್ನೆಲೆಯಲ್ಲಿ ನೋ ಎಲಿಮಿನೇಶನ್ ವಾರ ಎಂದು ಕಿಚ್ಚ ಸುದೀಪ ಘೋಷಿಸಿದ್ದರು. ಆಗ ಮುಂದಿನ ವಾರ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರ ಬರುತ್ತಾರೆ ಎನ್ನುವ ಲೆಕ್ಕಾಚಾರ ನಡೆದಿತ್ತು.
ಅಂತೆಯೇ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರಗೂ ಬಂದರು. ಆದರೆ ಇದು ವೀಕ್ಷಕರ ಮತಗಳ ಆಧಾರದ ಮೇಲೆ ನಡೆದ ಎಲಿಮಿನೆಶನ್ ಅಲ್ಲ. ಬದಲಾಗಿ ಬಿಗ್ ಬಾಸ್ ನೀಡಿದ ಶಿಕ್ಷೆಯ ಕಾರಣದಿಂದ ನಡೆದ ಎಲಿಮಿನೇಶನ್.
ನಂತರ ಗಾಯಕ ಹನುಮಂತು ವೈಲ್ಡ್ ಕಾರ್ಡ್ ಮೂಲಕ ಬಿಗ್ ಮನೆಯೊಳಗೆ ಎಂಟ್ರಿ ಪಡೆಯುತ್ತಾರೆ. ಹನುಮಂತು ಮನೆ ಪ್ರವೇಶ ಮಾಡುತ್ತಿದ್ದ ಹಾಗೆ ಧನರಾಜ್ ಗೆ ಒಂದು ಜೋಡಿ ಸಿಕ್ಕಿದ ಹಾಗೆ ಆಯಿತು.
ಆದರೆ ಇದೀಗ ಮನೆಯಿಂದ ಹೊರ ಹಾಕಲ್ಪತ್ತಿದ್ದ ಲಾಯರ್ ಜಗದೀಶ್ ಮತ್ತೆ ಮನೆಯೊಳಗೆ ಎಂಟ್ರಿಯಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಆಪ್ತ ಮೂಲಗಳಿಂದ ಸಿಕ್ಕಿರೋ ಮಾಹಿತಿ ಪ್ರಕಾರ ಮತ್ತೆ ದೊಡ್ಮನೆಯಲ್ಲಿ ಜಗದೀಶ್ ಘರ್ಜಿಸಲಿದ್ದಾರೆ.
ಜಗದೀಶ್ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ವಿಲನ್ ರೀತಿ ಕಂಡರೂ, ವೀಕ್ಷಕರಿಗೆ ಮಾತ್ರ ಬಿಗ್ ಬಾಸ್ ಹಿರೋನಂತೆಯೇ ಕಾಣಿಸಿಕೊಂಡಿದ್ದಾರೆ. ಜಗದೀಶ್ ಪರ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲದ ಮಾತುಗಳು ಕೇಳಿ ಬಂದಿತ್ತು.
ಇದೀಗ ಮತ್ತೆ ಜಗದೀಶ್ bigboss ಮನೆಗೆ ಈಗಾಗಲೇ ಹೋಗಿದ್ದಾರೆ ಜಗದೀಶ್ ಅನ್ನೋ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.