ಬಿಗ್ ಬಾಸ್ ನಿಂದ ಲಾಯರ್ ಜಗದೀಶ್ ಔಟ್.! ಇಂದಿನ ಕಿಚ್ಚನ ಪಂಚಾಯಿತಿಯ ಹೈಲೈಟ್ ಇದೇ...
ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೊದಲ ಕಿಚ್ಚನ ಪಂಚಾಯಿತಿಯ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.
ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ. ಬಿಗ್ ಬಾಸ್ ಅಸಲಿ ಮುಖವನ್ನ ಬಯಲಿಗೆ ತರುವೆ, ನಿಮ್ಮ ಶೋ ಹಾಳು ಮಾಡುವೆ ಎಂದೆಲ್ಲ ಕಾರ್ಯಕ್ರಮಕ್ಕೇ ಅವಾಜ್ ಹಾಕಿದ್ದರು.
ಆ ಬಳಿಕ ಮಾನಸ ಅವರ ಜೊತೆ ಕಿರಿಕ್ ಮಾಡಿಕೊಂಡಾಗ ಹೆಣ್ಣು ಮಕ್ಕಳನ್ನು ಅಗೌರವದಿಂದ ನಡೆಸಿಕೊಳ್ಳಬೇಡಿ ಎಂದು ಮನೆಯ ಉಳಿದ ಸ್ಪರ್ಧಿಗಳು ಲಾಯರ್ ಜಗದೀಶ್ ಮೇಲೆ ದಂಡೆತ್ತಿ ಹೋಗಿದ್ದರು.
ಆ ಬಳಿಕ ಮಹಿಳೆಯರ ಒಳಉಡುಪಿನ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ಚರ್ಚೆ ಆಗುತ್ತಿದೆ.
ವಕೀಲ ಜಗದೀಶ್ ಅವರ ಈ ವರ್ತನೆ ಬಗ್ಗೆ ಸುದೀಪ್ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಲು ಕಾಯುತ್ತಿದ್ದಾರೆ.
ಬಿಗ್ ಬಾಸ್ 11 ಕನ್ನಡದ ಮೊದಲ ಕಿಚ್ಚನ ಪಂಚಾಯಿತಿಯಲ್ಲಿ ಜಗದೀಶ್ ಅವರನ್ನು ಮನೆಯಿಂದ ಆಚೆ ಕಳಿಸಿದರು ಅಚ್ಚರಿಯಿಲ್ಲ ಎನ್ನುತ್ತಿದ್ದಾರೆ ನೆಟ್ಟಿಜನ್.
ಸಲ್ಮಾನ್ ಖಾನ್ ಹಿಂದಿ ಬಿಗ್ ಬಾಸ್ ನಲ್ಲಿ ಶೋ ಗೆ ಅವಮಾನ ಮಾಡಿದ್ದ ಕಂಟೆಸ್ಟಂಟ್ ಒಬ್ಬರನ್ನು ಮುಲಾಜಿಲ್ಲದೇ ಆಚೆ ಕಳಿಸಿದ್ದರು. ಅಲ್ಲಿಯೂ ಅವರು ಬಿಗ್‌ಬಾಸ್ ಶೋ ಬಗ್ಗೆ ಅವಹೇಳನ ಮಾಡಿದ್ದರು.
ಲಾಯರ್ ಜಗದೀಶ್ ಕೂಡ ಈಗ ಕನ್ನಡ ಬಿಗ್ ಬಾಸ್ 11 ರಲ್ಲಿ ಶೋ ಬಗ್ಗೆ ಅವಹೇಳನಕಾರಿ ಆಗಿಯೇ ಮಾತನಾಡಿದ್ದಾರೆ. ಶೋ ಬಗ್ಗೆ ಪದೆ ಪದೇ ಅಗೌರವ ತೋರುತ್ತಿದ್ದಾರೆ.
ಕಿಚ್ಚ ಸುದೀಪ್ vs ಲಾಯರ್ ಜಗದೀಶ್ ನಡುವಿನ ಜಟಾಪಟಿ ಹೇಗಿರಲಿದೆ. ಸುದೀಪ್ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಬಿಗ್ ಬಾಸ್ ವೀಕ್ಷಕರು ನಿರೀಕ್ಷಿಸುತ್ತಿದ್ದಾರೆ.