ಕನ್ನಡ ಆಯ್ತು.. ಈಗ ಹಿಂದಿ ಬಿಗ್‌ಬಾಸ್‌ಗೆ ಕರುನಾಡ ಕ್ರಶ್ ಎಂಟ್ರಿ..! ಎಲ್ಲೆಲ್ಲೂ ಜಗ್ಗಣ್ಣನದ್ದೇ ಹವಾ..?!
hindi bigg boss jagadish: ಕರ್ನಾಟಕ ಕ್ರಶ್ ಎಂದೆ ಖ್ಯಾತಿ ಪಡೆದಿರುವ ಲಾಯರ್ ಜಗದೀಶ್ ಅವರ ಇದೀಗ ಬಿಗ್‌ಬಾಸ್ ಹಿಂದಿಗೆ ಹೋಗಲಿದ್ದಾರಂತೆ ಈ ಕುರಿತು ಸ್ವತಃ ಜಗ್ಗಣ್ಣ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಜಗ್ಗಿ ಬಿಗ್‌ಬಾಸ್‌ಗೆ ಹೋುತ್ತಿರುವುದು ಯಾವಾಗ? ಏನಿದು ಸ್ಟೋರಿ ತಿಳಿಯಲು? ಮುಂದೆ ಓದಿ...
ಕನ್ನಡ ಬಿಗ್‌ಬಾಸ್ ಶುರುವಾಗಿ ಇನ್ನೇನು ಒಂದು ತಿಂಗಳು ಕಳೆಯುತ್ತಾ ಬಂದಿದೆ, ಈ ಭಾರಿಯ ಬಿಗ್‌ಬಾಸ್ ಸೀಸನ್‌ನಲ್ಲಿ ಜನರ ಮನಸ್ಸಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದ ಲಾಯರ್ ಜಗದೀಶ್, ಮನೆಯಿಂದ ಹೊರಬಿದ್ದು, ಹಲವು ದಿನಗಳೆ ಕಳೆದಿದೆ, ಹೀಗಿರುವಾಗ ಜಗ್ಗಣ್ಣನ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.
ಬಿಗ್‌ಬಾಸ್ ಮನೆಯಿಂದ ಹೊರಬಂದ ನಂತರ ಕರ್ನಾಟಕದ ಕ್ರಶ್ ಎಂದು ಕರೆಸಿಕೊಂಡಿರುವ ಲಾಯರ್ ಜಗದೀಶ್ ಅವರು ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರು ಎಷ್ಟೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು, ಅವರ ಅಭಿಮಾನಿಗಳಿಗೆ ಅವರನ್ನು ಬಿಗ್‌ಬಾಸ್ ಮೆನಯಲ್ಲಿ ನೋಡಿದಷ್ಟು ಸಂತೋಷವಾಗುತ್ತಿಲ್ಲ.
ಲಾಯರ್ ಜಗದೀಶ್ ಅವರು ಮನೆಯಿಂದ ಔಟ್ ಆದಮೇಲಂತೂ, ಜನರು ಬಿಗ್‌ಬಾಸ್ ನೋಡುವ ಇನ್ಟ್ರೆಂಸ್ಟ್ ಕಳೆದುಕೊಂಡಿದ್ದಾರೆ, ಜಗ್ಗಣ್ಣ ಮತ್ತೆ ವಾಪಸ್ ಆದ್ಯಾಗ ಬಿಗ್‌ಬಾಸ್ ಮನೆಗೆ ವಾಪಸ್ ಆಗುತ್ತಾರೋ ಅಂತ ಕಾತುರದಿಂದ ಕಾಯುತ್ತಿದ್ದಾರೆ.
ಹೀಗೆ ಜಗ್ಗಣ್ಣನನ್ನು ಬಿಗ್‌ಬಾಸ್ ಮನೆಯಲ್ಲಿ ನೋಡಬೇಕು ಎಂದುಕೊಂಡಿದ್ದ ಅಭಿಮಾನಿಗಳಿಗೆ ಒಂದಲ್ಲ ಡಬಲ್ ಗುಡ್ ನ್ಯೂಸ್ ಸಿಕ್ಕಿದೆ, ಲಾಯರ್ ಜಗದೀಶ್ ಅವರು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಷಯವನ್ನು ಸ್ವತಃ ಜಗ್ಗು ಖಾಸಗಿ ವಾಹಿನಿ ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದು, ಇಷ್ಟು ದಿನ ಜಗ್ಗು ದಾದ ಕಥೆ ಕಿಚ್ಚ ಸುದೀಪ್ ಅವರ ಜೊತೆಯಾಗತ್ತು, ಆದ್ರೆ ಇದೀಗ ಜಗ್ಗು ದಾದಾ ಕಥೆ ಸಲ್ಮಾನ್ ಖಾನ್ ಜೊತೆ ಗುವ ಸಮಯ ಬಂದಿದೆ, ಎಂದಿದ್ದಾರೆ.
ಲಕ್ಷ ದುಡಿಯಲು, ಲಕ್ಷ ಎಣಿಸಲು ಕಷ್ಟ ಪಡುತ್ತಿದ್ದೆ, ಆದರೆ ಈಗ ಕೋಟಿ ಎಣಿಸಲು ಕಷ್ಟ ಪಡುತ್ತಿದ್ದೇನೆ ಎಂದಿದ್ದಾರೆ.