Dangerous Apps: ತಕ್ಷಣವೇ ನಿಮ್ಮ ಮೊಬೈಲ್‌ನಲ್ಲಿರುವ ಈ 5 ಅಪ್ಲಿಕೇಶನ್‌ಗಳನ್ನು ಅನ್‌ಇನ್ಸ್ಟಾಲ್ ಮಾಡಿ!
ರಿಲೇಶನ್‌ಶಿಪ್ ಆಪ್‌ಗಳು ಇತ್ತೀಚಿನ ದಿನಗಳಲ್ಲಿ ತುಂಬಾ ಸಾಮಾನ್ಯವಾಗಿದೆ. ಇವುಗಳನ್ನು ಬಳಸುವ ಅನೇಕ ಜನರು ಪರಸ್ಪರ ಮಾತನಾಡಿ ಸ್ನೇಹ ಬೆಳೆಸುತ್ತಾರೆ. ಆದರೆ ನೀವು ಇಂತಹ ಅಪ್ಲಿಕೇಶನ್‌ಗಳಿಂದ ದೂರವಿರಬೇಕು. ಏಕೆಂದರೆ ನಿಮ್ಮ ಎಲ್ಲಾ ಮಾಹಿತಿಯನ್ನು ಈ ಅಪ್ಲಿಕೇಶನ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ನಂತರ ಆ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳಬಹುದು. ಆದ್ದರಿಂದ ನೀವು ಆದಷ್ಟು ಈ ಆಪ್‍ಗಳಿಂದ ದೂರವಿರುವುದು ಉತ್ತಮ.
ನಕಲಿ ಚಾಟಿಂಗ್ ಅಪ್ಲಿಕೇಶನ್‌ಗಳು ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಟ್ರೆಂಡಿಂಗ್ ಆಗಿವೆ. ನೀವು ಇವುಗಳನ್ನು ಒಮ್ಮೆ ಡೌನ್‌ಲೋಡ್ ಮಾಡಿದ್ರೆ ಅವರು ನಿಮ್ಮ ಲೊಕೇಶನ್ ಮಾಹಿತಿ ಕೇಳುತ್ತಾರೆ. ಆದರೆ ಇದಕ್ಕೆ ನಿಮ್ಮ ಲೊಕೇಶನ್ ಮಾಹಿತಿ ಅಗತ್ಯವಿರುವುದಿಲ್ಲ. ನೀವು ಈ ಅಪ್ಲಿಕೇಶನ್‌ಗಳಿಗೆ ನಿಮ್ಮ ಲೊಕೇಶನ್ ಮಾಹಿತಿ ನೀಡಿದ್ರೆ ಅಪಾಯಕಾರಿ. ಏಕೆಂದರೆ ಇಂತಹ ಅಪ್ಲಿಕೇಶನ್‌ಗಳು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು. ಇಂತಹ ಚಾಟಿಂಗ್ ಆಪ್‍ಗಳನ್ನು ಕೂಡಲೇ ಡಿಲೀಟ್ ಮಾಡುವುದು ಉತ್ತಮ.
ವಂಚನೆಯ ಗೇಮ್‍ಗಳು(Fraud games) ನಿಮಗೆ ದೊಡ್ಡ ನಷ್ಟವನ್ನುಂಟು ಮಾಡಬಹುದು. ಇವುಗಳನ್ನು ಇನ್‍ಸ್ಟಾಲ್ ಮಾಡಿ ಆಟವಾಡಿದ್ರೆ ಮುಗಿತು ನಿಮ್ಮ ಬ್ಯಾಂಕ್ ಖಾತೆ ಶೀಘ್ರವೇ ಖಾಲಿಯಾಗುತ್ತದೆ. ಈ ವಂಚನೆಯ ಆನ್‍ಲೈನ್ ಗೇಮ್ ಚಟವಾಗಿ ಪರಿಣಮಿಸಿದ್ರೆ ನಿಮಗೆ ಮುಂದೆ ದೊಡ್ಡ ಸಮಸ್ಯೆ ಎದುರಾಗುತ್ತದೆ. ಹೆಚ್ಚು ಹಣ ಗಳಿಸುವ ಆಸೆಯಿಂದ ನೀವು ನಿಮ್ಮ ಬಳಿಯಿರುವ ಎಲ್ಲಾ ಹಣ ಕಳೆದುಕೊಳ್ಳುವ ಅಪಾಯ ಎದುರಾಗುತ್ತದೆ. ಹೀಗಾಗಿ ಈ ರೀತಿಯ ಆಪ್‍ಗಳಿಂದ ಆದಷ್ಟು ದೂರವಿರುವುದು ಉತ್ತಮ.
ಇತ್ತೀಚಿನ ದಿನಗಳಲ್ಲಿ ಒರಿಜಿನಲ್ ಆಪ್ ಹೆಸರಲ್ಲಿ ನಕಲಿ ಆಪ್‍ಗಳ ಹಾವಳಿ ಜೋರಾಗಿದೆ. ಅಪ್ಪಿತಪ್ಪಿ ನೀವು ಈ ಆಪ್‍ಗಳನ್ನು ಡೌನ್ ಲೋಡ್ ಮಾಡಿಕೊಂಡರೆ ನಿಮ್ಮ ಲೊಕೇಶನ್ ಕೇಳಿ ನಂತರ ನಿಮ್ಮ ವೈಯಕ್ತಿಕ ಮಾಹಿತಿಯನ್ನೂ ಕೇಳುತ್ತದೆ. ಈ ಮಾಹಿತಿಯನ್ನು ನೀವು ಶೇರ್ ಮಾಡಿದರೆ ಅದು ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಿದಂತಾಗುತ್ತದೆ. ಇದು ತುಂಬಾ ಅಪಾಯಕಾರಿ. ಮುಂದೆ ನಿಮ್ಮ ಖಾತೆಯಿಂದ ಹಣವನ್ನು ಎಗರಿಸಬಹುದು. ಹೀಗಾಗಿ ಎಚ್ಚರವಹಿಸುವುದು ಸೂಕ್ತ.
ನಿಮಗೆ ಸಾಲ ಒದಗಿಸುವ ಮತ್ತು ನಿಮ್ಮಿಂದ ವೈಯಕ್ತಿಕ ಮಾಹಿತಿಯನ್ನು ಕೇಳುವ ಅನೇಕ ಅಪ್ಲಿಕೇಶನ್‌ಗಳು ಮಾರುಕಟ್ಟೆಯಲ್ಲಿವೆ. ನೀವು ಇಂತಹ ಪ್ರತಿಯೊಂದು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ್ರೆ ದೊಡ್ಡ ಸಮಸ್ಯೆಗೆ ಸಿಲುಕುತ್ತೀರಿ. ಹೀಗಾಗಿ ನೀವು ಅವುಗಳನ್ನು ಡಿಲೀಟ್ ಮಾಡುವುದು ಉತ್ತಮ. ಇವುಗಳ ನಿಮ್ಮ ವೈಯಕ್ತಿಕ ಮಾಹಿತಿ ಕದ್ದು ವಂಚನೆ ಎಸಗಬಹುದು.