ಲೀಲಾವತಿಯವರು ʼವಿನೋದ್ ರಾಜ್ ಮದುವೆʼ ಎಲ್ಲಿ ಮಾಡಿದ್ರು ಗೊತ್ತೆ..? ʼಆ ಕೊರಗು ಇನ್ನೂ ಇತ್ತುʼ
ಇಂದು ಸಂಜೆ 4 ಗಂಟೆಗೆ ಸೋಲದೇವನಹಳ್ಳಿಯ ಅವರ ತೋಟದಲ್ಲಿ ಲೀಲಾವತಿಯವರ ಅಂತ್ಯಕ್ರಿಯೆ ನಡೆಯಲಿದೆ.
ಲೀಲಾವತಿಯವರು ಇನ್ನಿಲ್ಲ ಎನ್ನುವ ವೇಳೆ ಅವರ ಅದ್ಭುತ ನಟನೆ, ಮುಗ್ದ ನಗು, ಇನ್ನೊಬ್ಬರ ಕಷ್ಟಕ್ಕೆ ಮರುಗುವ ಅವರ ದಯಾಗುಣ ಕಣ್ಮುಂದೆ ಬರುತ್ತದೆ.
ಲೀಲಾವತಿಯವರಿಗೆ ಅವರ ಮಗನ ಮದುವೆಯನ್ನು ಬಹಳ ಅದ್ಧೂರಿಯಾಗಿ ಮಾಡಬೇಕು ಅಂತ ಆಸೆ ಇತ್ತು. ಆದರೆ ಕಾರಣಾಂತರದಿಂದ ಅವರ ಆಸೆ ಈಡೇರಲಿಲ್ಲ.
ವಿನೋದ್ ರಾಜ್ ಅವರ ಮದುವೆಯನ್ನು ಲೀಲಮ್ಮ ತಿರುಪತಿ ವೆಂಕಟೇಶ್ವರನ ಸನ್ನಿದಾನದಲ್ಲಿ ನೇರವೇರಿಸಿದ್ದರು. ಈ ಕುರಿತು ಅವರೇ ಹೇಳಿಕೊಂಡಿದ್ದರು.
ವಿನೋದ್ ರಾಜ್ ಅವರ ಪತ್ನಿಯ ಹೆಸರು ಅನು.ಬಿ. ಮತ್ತು ಮಗನ ಹೆಸರು ಯುವರಾಜ್.ವಿ.
ಸ್ವತಃ ವಿನೋದ್ ರಾಜ್ ಕೂಡ ತಮ್ಮ ಮದುವೆಯ ಬಗ್ಗೆ ಪ್ರತಿಕ್ರಿಯೆ ನೀಡುವ ಮೂಲಕ ವಿವಾಹವಾಗಿದ್ದಾಗಿ ಹೇಳಿಕೊಂಡಿದ್ದರು.
ಚಂದನವನದ ಹಿರಿಯ ನಟಿ ಲೀಲಾವತಿ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅಮ್ಮನ ಕಳೆದುಕೊಂಡಿರುವ ವಿನೋದ್ ಅಕ್ಷರಶಃ ಒಂಟಿಯಾಗಿದ್ದಾರೆ್
ಸಧ್ಯ ವಿನೋದ್ ರಾಜ್ ಮತ್ತು ಪತ್ನಿ ಅನು ಹಾಘೂ ಯುವರಾಜ್ ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ.