17 ವರ್ಷಗಳ ಕ್ರಿಕೆಟ್ ಕೆರಿಯರ್’ಗೆ ಸ್ಟಾರ್ ಬ್ಯಾಟರ್ ನಿವೃತ್ತಿ ಘೋಷಣೆ: ಕೊಹ್ಲಿ ಜೊತೆ ವಿಶ್ವಕಪ್ ಗೆದ್ದಿದ್ದ ಟೀಂ ಇಂಡಿಯಾದ ದಿಗ್ಗಜನೀತ!

Tue, 13 Feb 2024-12:52 pm,

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗಿರದ ಎಡಗೈ ಬ್ಯಾಟ್ಸ್‌ಮನ್ ಸೌರಭ್ ತಿವಾರಿ ವೃತ್ತಿಪರ ಕ್ರಿಕೆಟ್‌’ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ.

ಸೌರಭ್ ತಿವಾರಿ ತಮ್ಮ 17 ವರ್ಷಗಳ ವೃತ್ತಿಜೀವನದಲ್ಲಿ ಜಾರ್ಖಂಡ್ ಅನ್ನು ಪ್ರತಿನಿಧಿಸಿದ್ದರು. ಇನ್ನು ಟೀಂ ಇಂಡಿಯಾ ಪರ ಮೂರು ಏಕದಿನ ಪಂದ್ಯಗಳನ್ನು ಆಡಿದ್ದು, ಐಪಿಎಲ್‌’ನಲ್ಲಿ ನಾಲ್ಕು ಫ್ರಾಂಚೈಸಿ ತಂಡಗಳನ್ನು ಪ್ರತಿನಿಧಿಸಿದ್ದಾರೆ.

ESPN ಕ್ರಿಕ್‌ ಇನ್‌ಫೋ ಪ್ರಕಾರ “ನಾನು ನನ್ನ ಶಾಲಾ ಶಿಕ್ಷಣಕ್ಕೂ ಮೊದಲು ಪ್ರಾರಂಭಿಸಿದ ಈ ಪ್ರಯಾಣಕ್ಕೆ ವಿದಾಯ ಹೇಳುವುದು ಸ್ವಲ್ಪ ಕಷ್ಟ. ಆದರೆ ಇದು ಅದಕ್ಕೆ ಸರಿಯಾದ ಸಮಯ ಎಂದು ನಾನು ನಂಬುತ್ತೇನೆ. ರಾಷ್ಟ್ರೀಯ ತಂಡ ಮತ್ತು ಐಪಿಎಲ್‌’ನಲ್ಲಿ ಆಡದಿದ್ದರೆ, ರಾಜ್ಯ ತಂಡದಲ್ಲಿ ಯುವ ಆಟಗಾರನಿಗೆ ಜಾಗವನ್ನು ಮುಕ್ತಗೊಳಿಸುವುದು ಸರಿ ಎಂದು ನನಗೆ ಅನಿಸುತ್ತದೆ. ನಮ್ಮ ಟೆಸ್ಟ್ ತಂಡದಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ಸಿಗುತ್ತಿದೆ ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ತಿವಾರಿ ವಿದಾಯ ಘೋಷಣೆ ಮಾಡಿದ್ದಾರೆ.

ಸೌರಭ್ ತಿವಾರಿ ಅವರು 2010 ರಲ್ಲಿ ಭಾರತದ ಮೂರು ODI ಪಂದ್ಯಗಳನ್ನು ಆಡಿದ್ದರು. ಇದರಲ್ಲಿ ಅವರು 49 ರನ್ ಗಳಿಸಿದ್ದಾರೆ. 115 ಪ್ರಥಮ ದರ್ಜೆ ಪಂದ್ಯಗಳಲ್ಲಿ 47.51 ಸರಾಸರಿಯಲ್ಲಿ 8030 ರನ್ ಗಳಿಸಿದ್ದಾರೆ.ಇದರಲ್ಲಿ 22 ಶತಕಗಳು ಮತ್ತು 34 ಅರ್ಧ ಶತಕಗಳು ಸೇರಿವೆ.

ಐಪಿಎಲ್‌’ನಲ್ಲಿ 93 ಪಂದ್ಯಗಳಲ್ಲಿ 28.73 ಸರಾಸರಿಯಲ್ಲಿ 1494 ರನ್ ಗಳಿಸಿದ್ದಾರೆ. ಇನ್ನು 181 ಟಿ20 ಪಂದ್ಯಗಳನ್ನಾಡಿದ್ದು 3454 ರನ್ ಗಳಿಸಿದ್ದಾರೆ. ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಸೌರಭ್ ತಿವಾರಿ ನಾಲ್ಕು ಪಂದ್ಯಗಳನ್ನು ಆಡಿದ್ದು, ಜಾರ್ಖಂಡ್ ತಂಡ ಈಗಾಗಲೇ ನಾಕೌಟ್‌ ರೇಸ್‌’ನಿಂದ ಹೊರಗುಳಿದಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link