ತೆಂಗಿನೆಣ್ಣೆಗೆ ಈ ರಸ ಬೆರೆಸಿ ಹಚ್ಚಿದ್ರೆ ಬಿಳಿ ಕೂದಲು ಗಾಢ ಕಪ್ಪಾಗಿ, ಮೊಣಕಾಲುದ್ದ ಬೆಳೆಯುತ್ತೆ...
ಬಿಳಿ ಕೂದಲಿನ ಸಮಸ್ಯೆಗೆ ತೆಂಗಿನೆಣ್ಣೆ ನೈಸರ್ಗಿಕ ಮನೆಮದ್ದಾಗಿದೆ. ತೆಂಗಿನೆಣ್ಣೆಯಲ್ಲಿ ಒಂದು ವಿಶೇಷ ರಸವನ್ನು ಬೆರೆಸಿ ಹಚ್ಚಿದ್ರೆ ಕೂದಲು ಕಪ್ಪಾಗುವುದು ಮಾತ್ರವಲ್ಲ, ಮೊಣಕಾಲಿನವರೆಗೂ ಬೆಳೆಯುತ್ತದೆ.
ತೆಂಗಿನೆಣ್ಣೆ ನೆತ್ತಿಯ ಆರೋಗ್ಯಕ್ಕೆ ಪೋಷಣೆ ನೀಡುವ ಮೂಲಕ ನೆತ್ತಿಯನ್ನು ತೇವಗೊಳಿಸಿ, ತಲೆಹೊಟ್ಟು ನಿವಾರಿಸುತ್ತದೆ. ಅಷ್ಟೇ ಅಲ್ಲ, ಕೂದಲಿಗೆ ನೈಸರ್ಗಿಕ ಬಣ್ಣವನ್ನು ನೀಡುತ್ತದೆ.
ನಿಂಬೆ ರಸ ಕೂದಲಿಗೆ ನೈಸರ್ಗಿಕ ಗಾಢ ಬಣ್ಣವನ್ನು ಒದಗಿಸಿ, ಕಾಂತಿಯುತವಾಗಿಸುತ್ತದೆ.
ತೆಂಗಿನೆಣ್ಣೆ ಮತ್ತು ನಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ಸ್ವಲ್ಪ ಬಿಸಿ ಮಾಡಿ. ಎಣ್ಣೆ ಬೆಚ್ಚಗಿರುವಾಗಲೇ ಕೂದಲಿಗೆ ಹಚ್ಚಿ ಮಸಾಜ್ ಮಾಡಿ. ಅರ್ಧಗಂಟೆ ಬಳಿಕ ಶಾಂಪೂ ಬಳಸಿ ಹೇರ್ ವಾಶ್ ಮಾಡಿ.
ವಾರದಲ್ಲಿ ಒಮ್ಮೆ ಈ ರೀತಿ ಎಣ್ಣೆ ಹಾಕಿ ಮಸಾಜ್ ಮಾಡಿ ಬಳಿಕ ಹೇರ್ ವಾಶ್ ಮಾಡುವುದರಿಂದ ಬಿಳಿ ಕೂದಲು ಕಪ್ಪಾಗಿ, ಉದ್ದವಾಗಿ ಬೆಳೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.