ಕಿಡ್ನಿ ಸ್ಟೋನ್‌ ಕೂಡ ಪುಡಿ ಮಾಡುವ ಅದ್ಭುತ ಹಣ್ಣು.. ಬೆಳಗೆದ್ದು ನೀರಿಗೆ 4 ಹನಿ ರಸ ಹಿಂಡಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್‌ ಆಸಿಡ್‌ ಕರಗಿ ಹೋಗುತ್ತೆ!

Sat, 26 Oct 2024-9:12 am,

Uric Acid Control Home Remedies: ಕಿಡ್ನಿ ಸ್ಟೋನ್‌ ಕೂಡ ಪುಡಿ ಮಾಡುವ ಅದ್ಭುತ ಹಣ್ಣು ಇದಾಗಿದೆ. ಬೆಳಗೆದ್ದು ನೀರಿಗೆ 4 ಹನಿ ರಸ ಹಿಂಡಿ ಕುಡಿದರೆ ಯೂರಿಕ್‌ ಆಸಿಡ್ಡ ಮಟ್ಟ ಕಡಿಮೆಯಾಗಿ ಕೀಲು ನೋವು ಗುಣವಾಗುವುದು. 

ಯೂರಿಕ್ ಆಸಿಡ್‌ ದೇಹದಲ್ಲಿ ಉತ್ಪತ್ತಿಯಾಗುವ ವಿಷವಾಗಿದ್ದು ಅದು ಸಂಧಿವಾತವನ್ನು ಉಂಟುಮಾಡುತ್ತದೆ. ರಕ್ತದಲ್ಲಿ ಯೂರಿಕ್ ಆಸಿಡ್‌ ಪ್ರಮಾಣ ಹೆಚ್ಚಾಗಲು ಪ್ರಾರಂಭಿಸಿದರೆ ಮೂತ್ರಪಿಂಡಗಳ ಮೇಲೆ ಒತ್ತಡ ಹೆಚ್ಚುತ್ತದೆ. 

ಯೂರಿಕ್ ಆಸಿಡ್‌ ಹರಳುಗಳ ರೂಪದಲ್ಲಿ ಕೀಲುಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದು ಸಂಧಿವಾತಕ್ಕೆ ಕಾರಣವಾಗುತ್ತದೆ. ಕೀಲುಗಳಲ್ಲಿ ನೋವು ಮತ್ತು ಬಿಗಿತವನ್ನು ಉಂಟುಮಾಡುತ್ತದೆ. 

ಯೂರಿಕ್ ಆಸಿಡ್‌ ಹೆಚ್ಚಾದಾಗ  ಕೈ ಮತ್ತು ಕಾಲುಗಳ ಕೀಲುಗಳಲ್ಲಿ ನೋವನ್ನು ಉಂಟುಮಾಡುತ್ತದೆ. ಊತವನ್ನು ಉಂಟುಮಾಡುತ್ತದೆ. ಇದರಿಂದ ಮೂತ್ರಪಿಂಡದ ಕಾಯಿಲೆಯ ಅಪಾಯವು ಹೆಚ್ಚಾಗುತ್ತದೆ. ಕಿಡ್ನಿ ಸ್ಟೋನ್‌ ಗೂ ಕಾರಣವಾಗಬಹುದು.

ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಆಹಾರದಲ್ಲಿ ಬದಲಾವಣೆ ಬಹಳ ಮುಖ್ಯ. ನಿಮ್ಮ ಆಹಾರಕ್ರಮವನ್ನು ಬದಲಾಯಿಸುವ ಮೂಲಕ ಮತ್ತು ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ, ನೀವು ಯೂರಿಕ್ ಆಸಿಡ್‌ ನಿಂದ ಪರಿಹಾರವನ್ನು ಪಡೆಯಬಹುದು.

ಯೂರಿಕ್ ಆಸಿಡ್‌ ನಿಯಂತ್ರಿಸಲು ನಿಂಬೆ ರಸ ತುಂಬಾ ಪರಿಣಾಮಕಾರಿಯಾಗಿದೆ. ನಿಂಬೆ ರಸ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ರಸವನ್ನು ಸೇವಿಸುವುದರಿಂದ ಕಿಡ್ನಿ ಸ್ಟೋನ್‌ ಅಂತಹ ಮೂತ್ರಪಿಂಡದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. 

ನಿಂಬೆ ರಸವು ಯೂರಿಕ್ ಆಮ್ಲದ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಏಕೆಂದರೆ ಇದು ದೇಹವನ್ನು ಹೆಚ್ಚು ಕ್ಷಾರೀಯವಾಗಿಸಲು ಸಹಾಯ ಮಾಡುತ್ತದೆ. ಇದರರ್ಥ ಇದು ರಕ್ತ ಮತ್ತು ಇತರ ದ್ರವಗಳ pH ಮಟ್ಟವನ್ನು ಸ್ವಲ್ಪ ಹೆಚ್ಚಿಸುತ್ತದೆ. ನಿಂಬೆ ರಸವು ಮೂತ್ರವನ್ನು ಹೆಚ್ಚು ಕ್ಷಾರೀಯವಾಗಿಸುತ್ತದೆ.

ನಿಂಬೆ ಮತ್ತು ಅಜ್ವಾನವನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಯೂರಿಕ್‌ ಆಸಿಡ್‌ ಕರಗಿ ಹೋಗುತ್ತದೆ.  ಪ್ರತಿದಿನ ಬೆಳಗ್ಗೆ ಅಜ್ವಾನದ ನೀರಿಗೆ 4 ಹನಿ ನಿಂಬೆ ರಸ ಬೆರೆಸಿ ಸೇವಿಸುವುದರಿಂದ ಯೂರಿಕ್ ಆಸಿಡ್ ಜೊತೆ ಕಿಡ್ನಿ ಸ್ಟೋನ್‌ ಸಮಸ್ಯೆ ಸಹ ಗುಣವಾಗುತ್ತದೆ. 

ನಿಂಬೆಯಲ್ಲಿರುವ ಉತ್ಕರ್ಷಣ ನಿರೋಧಕವಿದ್ದು, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಸುತ್ತದೆ.  ಒಂದು ಚಮಚ ನಿಂಬೆ ರಸ ಮತ್ತು ಒಂದು ಚಮಚ ಅಜ್ವಾನ ತೆಗೆದುಕೊಂಡು ಉಗುರುಬೆಚ್ಚಗಿನ ನೀರಿನಲ್ಲಿ ಬೆರೆಸಿ ಪ್ರತಿದಿನ ಬೆಳಿಗ್ಗೆ ಸೇವಿಸಿದರೆ ಕೀಲು ನೋವು ಕಡಿಮೆಯಾಗುವುದು.

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link