ಎರಡೇ ಎರಡು ಹನಿ ಈ ಹಣ್ಣಿನ ರಸ ಮತ್ತು ತುಳಸಿ ಇದ್ದರೆ ಯೂರಿಕ್ ಆಸಿಡ್ ರಾತ್ರಿ ಬೆಳಗಾಗುವುದರೊಳಗೆ ಕರಗುವುದು !ಕಿಡ್ನಿ ಸ್ಟೋನ್ ಕೂಡಾ ಒಡೆಯುವುದು
ಯೂರಿಕ್ ಆಸಿಡ್ ಹೆಚ್ಚಾದಾಗ ಮೊದಲು ಕೈ ಕಾಲುಗಳ ಗಂಟು, ಕೀಲುಗಳು ಊದಿ ಕೊಳ್ಳುತ್ತದೆ. ಜೊತೆಗೆ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಈ ನೋವು ಸ್ವಲ್ಪ ಹೆಚ್ಚಾಗಿಯೇ ಕಾಡುತ್ತದೆ.
ಕೆಲವು ಆಹಾರ ಪದಾರ್ಥಗಳನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ಸೇವಿಸುವ ಮೂಲಕ ಯೂರಿಕ್ ಆಸಿಡ್ ಅನ್ನು ಸುಲಭವಾಗಿ ಕರಗಿಸಬಹುದು.
ಕೆಲವು ಮನೆ ಮದ್ದು ಯುರಿಕ್ ಆಸಿಡ್ ಅನ್ನು ಕರಗಿಸಿ ಮೂತ್ರದ ಮೂಲಕವೇ ದೇಹದಿಂದ ಹೊರ ಹೋಗಲು ಸಹಾಯ ಮಾಡುತ್ತದೆ.
ಪ್ರತಿದಿನ ನಿಂಬೆ ರಸ ಕುಡಿಯುವುದರಿಂದ ರಕ್ತದಲ್ಲಿನ ಯೂರಿಕ್ ಆಸಿಡ್ ನ್ನು ಕಡಿಮೆ ಮಾಡಬಹುದು. ಇದು ಸಂಧಿವಾತದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಕೆಲವು ಅಧ್ಯಯನಗಳು ತೋರಿಸಿವೆ.
ನಿಂಬೆ ಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಕಂಡುಬರುತ್ತವೆ. ಇದು ದೇಹದಲ್ಲಿ ಯೂರಿಕ್ ಆಸಿಡ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಒಂದು ಲೋಟ ನೀರು, 1 ಟೀಸ್ಪೂನ್ ನಿಂಬೆ ರಸ ಮತ್ತು 5 ರಿಂದ 10 ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಈ ನೀರನ್ನು ಹಾಗೆಯೇ ತಣ್ಣಗಾಗಲು ಬಿಡಿ. ಸ್ವಲ್ಪ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
ನಿತ್ಯ ಈ ನೀರನ್ನು ಕುಡಿಯುತ್ತಾ ಬಂದರೆ ಯೂರಿಕ್ ಆಸಿಡ್ ಕರಗುವುದರೊಂದಿಗೆ ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗುವುದು. ಒಂದೇ ಔಷಧಿಯಲ್ಲಿ ಎರಡು ಕಾಯಿಲೆಯನ್ನು ಸುಲಭವಾಗಿ ಗುಣಪಡಿಸಬಹುದು.
ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ZEE KANNADA NEWS ಅದನ್ನು ಅನುಮೋದಿಸುವುದಿಲ್ಲ.