ನಿಂಬೆ ರಸಕ್ಕೆ ಈ ಎಲೆ ಸೇರಿಸಿ ಕುಡಿಯಿರಿ ಯೂರಿಕ್ ಆಸಿಡ್ ಕರಗಿ ದೇಹದಿಂದ ಹೊರಬರುವುದು!ಕೀಲು ನೋವಿನಿಂದಲೂ ಸಿಗುವುದು ಪರಿಹಾರ
ಆಹಾರದಲ್ಲಿ ಮಾಡಿಕೊಳ್ಳುವ ಸ್ವಲ್ಪ ಮಟ್ಟಿನ ಬದಲಾವಣೆ ಮತ್ತು ಮನೆ ಮದ್ದಿನ ಮೂಲಕ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿಂಬೆ ನೀರು ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಪ್ಯೂರಿನ್ ಮತ್ತು ಯೂರಿಕ್ ಆಸಿಡ್ ಅನ್ನು ಶುದ್ಧೀಕರಿಸುವ ಮನೆಮದ್ದು.
ಹಾಗಾಗಿ ನಿಂಬೆ ರಸವನ್ನು ಬೆರೆಸಿದ ನೀರನ್ನು ಸೇವಿಸುವ ಮೂಲಕ ದೇಹದಲ್ಲಿ ಅಥವಾ ರಕ್ತದಲ್ಲಿ ಸೇರಿಕೊಂಡಿರುವ ಅಧಿಕ ಯೂರಿಕ್ ಆಸಿಡ್ ಅನ್ನು ಕರಗಿಸಬಹುದು.
ಇನ್ನು ನಿಂಬೆ ನೀರನ್ನು ಸ್ವಲ್ಪ ಪುದೀನ ಎಲೆಗಳೊಂದಿಗೆ ಬೆರೆಸಿ ಕುಡಿಯುವುದರಿಂದ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿಂಬೆ ನೀರಿಗೆ ಪುದಿನಾ ಬೆರೆಸಿ ಸೇವಿಸುವುದರಿಂದ ಯೂರಿಕ್ ಆಸಿಡ್ ಸಂಗ್ರಹದಿಂದ ಉಂಟಾಗುವ ಕೀಲು ನೋವು ಕೂಡಾ ನಿವಾರಣೆಯಾಗುತ್ತದೆ.
ಒಂದು ಲೋಟ ತಣ್ಣೀರನ್ನು ತೆಗೆದುಕೊಂಡು ಅದಕ್ಕೆ ಒಂದು ನಿಂಬೆಹಣ್ಣಿನ ರಸವನ್ನು ಸೇರಿಸಿ. ಅದಕ್ಕೆ ಒಂದು ಚಮಚ ಪುದೀನಾ ಸೊಪ್ಪಿನ ಪೇಸ್ಟ್ ಸೇರಿಸಿ. ನಂತರ ಬ್ಲಾಕ್ ಸಾಲ್ಟ್ ಅಥವಾ ಜೇನುತುಪ್ಪವನ್ನು ಸೇರಿಸಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.