ನಿಂಬೆ ಹಣ್ಣಿಗೆ ಈ ಎಲೆಯ ರಸ ಬೆರೆಸಿ ಸೇವಿಸಿ ಸಾಕು.. ಮೂಳೆಗಳಲ್ಲಿ ಸಂಗ್ರಹವಾದ ಯುರಿಕ್ ಆಸಿಡ್ ಕರಗಿ ಹೊರ ಹೋಗುವುದು!
ಯುರಿಕ್ ಆಸಿಡ್ ಅಧಿಕ ಪ್ರಮಾಣದಲ್ಲಿದ್ದರೆ ಅದಕ್ಕೆ ಹೈಪರ್ಯುರಿಸೆಮಿಯಾ ಎಂದು ಕರೆಯುತ್ತಾರೆ. ಈ ಸಮಸ್ಯೆಯಿಂದಾಗಿ ಕಿಡ್ನಿ ಸ್ಟೋನ್ ಮತ್ತು ಸಂಧಿವಾತದಂತಹ ಗಂಭೀರ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ.
ನಿಂಬೆ ಮತ್ತು ಪುದೀನಾ ನೀರನ್ನು ಕುಡಿಯುವುದು ಹೆಚ್ಚಿನ ಯುರಿಕ್ ಆಮ್ಲವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.
ನಿಂಬೆಯಲ್ಲಿ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲವಿದೆ. ಪುದೀನಾ ಆಂಟಿ-ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇವರಡನ್ನು ಸೇರಿಸಿ ಕುಡಿದಾಗ ಯುರಿಕ್ ಆಸಿಡ್ ಮಟ್ಟ ಕಡಿಮೆ ಆಗುತ್ತದೆ.
ಬೆಳಿಗ್ಗೆ ನಿಯಮಿತವಾಗಿ ನಿಂಬೆ ಮತ್ತು ಪದೀನಾ ನೀರು ಸೇವಿಸುವುದರಿಂದ ಯುರಿಕ್ ಆಸಿಡ್ ನಿಂದ ಬರುವ ಕೀಲು ನೋವಿಗೂ ಪರಿಹಾರ ಸಿಗುತ್ತದೆ.
ನಿಂಬೆ ಮತ್ತು ಪುದೀನಾ ದೇಹವನ್ನು ನಿರ್ವಿಷಗೊಳಿಸಲು ತುಂಬಾ ಪ್ರಯೋಜನಕಾರಿ. ಇದನ್ನು ಸೇವಿಸುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ದೂರವಾಗುತ್ತವೆ.
ಪುದೀನ ಮತ್ತು ನಿಂಬೆ ನೀರು ಕುಡಿಯುವುದರಿಂದ ಸಂಧಿವಾತದಿಂದ ಉಂಟಾಗುವ ಊತ ಮತ್ತು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.