Weight Loss: 10 ದಿನದಲ್ಲಿ ತೂಕ ಇಳಿಸಲು ನಿಂಬೆ ರಸಕ್ಕೆ ಈ ಬೀಜ ಸೇರಿಸಿ ಕುಡಿಯಿರಿ ಸಾಕು.. ಹೊಟ್ಟೆ ಬೊಜ್ಜು ಕರಗಿ ಕೆಟ್ಟ ಕೊಲೆಸ್ಟ್ರಾಲ್ ಕೂಡ ಕಡಿಮೆಯಾಗುತ್ತೆ!
)
ತೂಕ ಹೆಚ್ಚಾಗುವುದು ಇಂದಿನ ಜೀವನದಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ನೀವು ನೈಸರ್ಗಿಕ ರೀತಿಯಲ್ಲಿ ದೇಹದ ಬೊಜ್ಜನ್ನು ಕಡಿಮೆ ಮಾಡಲು ಕೆಲವು ನೈಸರ್ಗಿಕ ಪದಾರ್ಥಗಳು ನಿಮಗೆ ಸಹಾಯ ಮಾಡಬಹುದು.
)
ನಿಂಬೆಯು ಉತ್ಕರ್ಷಣ ನಿರೋಧಕ ಮತ್ತು ಸಿಟ್ರಿಕ್ ಆಮ್ಲದಿಂದ ಸಮೃದ್ಧವಾಗಿರುತ್ತದೆ. ಇದು ಸುಲಭವಾಗಿ ದೇಹದ ಕೊಬ್ಬನ್ನು ಕರಗಿಸುತ್ತದೆ. ಇದರೊಂದಿಗೆ ಚಿಯಾ ಬೀಜಗಳನ್ನು ಸೇವಿಸುವುದರಿಂದ ದುಪ್ಪಟ್ಟು ಪ್ರಯೋಜನಗಳಿವೆ. ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
)
ಮೊದಲು ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ನಿಂಬೆ ಹಣ್ಣಿನ ರಸ ಸೇರಿಸಿ ದ್ರಾವಣವನ್ನು ತಯಾರಿಸಿ. ಈಗ ಅದರಲ್ಲಿ ನೆನೆಸಿಟ್ಟ ಚಿಯಾ ಬೀಜಗಳನ್ನು ಹಾಕಿ. ಸ್ವಲ್ಪ ಜೇನುತುಪ್ಪ ಬೆರೆಸಿ ಈ ನೀರನ್ನು ಸೇವಿಸಿ.
ಪ್ರತಿನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುವುದು ಜೊತೆಗೆ ತೂಕ ಇಳಿಕೆಯಾಗಿ ಬೊಜ್ಜು ಸಮಸ್ಯೆಗೆ ಸಹ ಪರಿಹಾರ ಸಿಗುವುದು.
ಚಿಯಾ ಬೀಜಗಳನ್ನು ನಿಂಬೆ ನೀರಿನೊಂದಿಗೆ ಸೇವಿಸಿದರೆ ಮಲಬದ್ಧತೆ, ಗ್ಯಾಸ್, ಅಜೀರ್ಣಸಮಸ್ಯೆ ಗುಣವಾಗುತ್ತವೆ. ಚಿಯಾ ಬೀಜಗಳು ಫೈಬರ್‌ನಲ್ಲಿ ಸಮೃದ್ಧವಾಗಿವೆ. ಚಿಯಾ ಬೀಜಗಳು ದೇಹದಿಂದ ಕೊಬ್ಬನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.
ನಿಂಬೆ ಆಂಟಿವೈರಸ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ವೈರಸ್‌ಗಳು ಇತ್ಯಾದಿಗಳಿಂದ ರಕ್ಷಿಸುತ್ತದೆ ಮತ್ತು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಂಬೆ ನೀರು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
(ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.)