Indian Cricketers: ಜನಪ್ರಿಯ ಕ್ರಿಕೆಟಿಗರ 5 ಸ್ಟಾರ್ ಹೋಟೆಲ್‌ನಂತೆ ಕಾಣುವ ಐಶಾರಾಮಿ ಬಂಗಲೆಯ ಸಣ್ಣ ಝಲಕ್
ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಮನೆ ಬಾಂದ್ರಾ ವೆಸ್ಟ್ ನ ಪೆರ್ರಿ ಕ್ರಾಸ್ ರಸ್ತೆಯಲ್ಲಿದೆ. ಸಚಿನ್ ತನ್ನ ಇಡೀ ಕುಟುಂಬದೊಂದಿಗೆ ಈ ಬಂಗಲೆಯಲ್ಲಿ ವಾಸಿಸುತ್ತಾರೆ. ಈ ಮನೆಯನ್ನು ಮಾಸ್ಟರ್ ಬ್ಲಾಸ್ಟರ್ ಅವರು 2007 ರಲ್ಲಿ 39 ಕೋಟಿ ರೂ. ಗೆ ಖರೀದಿಸಿದರು. ಸಚಿನ್ ತೆಂಡೂಲ್ಕರ್ ಅವರ ಈ ಮನೆಯನ್ನು 6000 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. ಈಗ ಈ ಇಡೀ ಮನೆಯ ಬೆಲೆ ಸುಮಾರು 100 ಕೋಟಿ ರೂ. ಆಗಿದೆ.
ಯುವರಾಜ್ ಸಿಂಗ್ ತಮ್ಮ ಪತ್ನಿ ಮತ್ತು ಬಾಲಿವುಡ್ ನಟಿ ಹ್ಯಾಜೆಲ್ ಕೀಚ್ ಅವರೊಂದಿಗೆ 'ಓಂಕರ್ 1973' ಟವರ್ಸ್ ನಲ್ಲಿ ಮುಂಬೈನ ವರ್ಲಿಯಲ್ಲಿ ವಾಸಿಸುತ್ತಿದ್ದಾರೆ. ಯುವರಾಜ್ ಸಿಂಗ್ (Yuvraj Singh) ಈ ಐಷಾರಾಮಿ ಅಪಾರ್ಟ್ಮೆಂಟ್ ಅನ್ನು 2013 ರಲ್ಲಿ 64 ಕೋಟಿ ರೂ.ಗೆ ಖರೀದಿಸಿದರು. ಯುವರಾಜ್ ಸಿಂಗ್ ಅವರ ಮನೆಯಲ್ಲಿ ಐಷಾರಾಮಿ ಲಿವಿಂಗ್ ರೂಮ್, ವಿಶ್ವ ದರ್ಜೆಯ ಏಕವರ್ಣದ ಅಡುಗೆಮನೆ ಮತ್ತು ಸುಂದರವಾದ ಕೋಣೆಗಳಿವೆ.
ವಿರಾಟ್ ಕೊಹ್ಲಿಯನ್ನು (Virat Kohli) ಕಿಂಗ್ ಕೊಹ್ಲಿ ಎಂದೂ ಕರೆಯುತ್ತಾರೆ. ವಿರಾಟ್ ಕೊಹ್ಲಿ ಕೂಡ ಐಶಾರಾಮಿ ಮನೆಯಲ್ಲಿ ಜೀವಿಸುತ್ತಾರೆ. ಇದರಲ್ಲಿ 4 ಬೆಡ್ ರೂಮ್‌ಗಳ ಹೊರತಾಗಿ ದೊಡ್ಡ ಹಾಲ್ ಇದೆ. ವಿರಾಟ್-ಅನುಷ್ಕಾ ಅವರ ಈ ಮನೆಯ ಒಟ್ಟು ವೆಚ್ಚ 34 ಕೋಟಿ ರೂ. ಎಂದು ಹೇಳಲಾಗಿದೆ. ವಿರಾಟ್ ಮತ್ತು ಅನುಷ್ಕಾ ಅವರ ಐಷಾರಾಮಿ ಮನೆ ಮುಂಬೈನ ವರ್ಲಿಯಲ್ಲಿದೆ. ಅವರ ಅಪಾರ್ಟ್‌ಮೆಂಟ್‌ನ ಹೆಸರು 'ಓಂಕರ್ 1973'. ಮದುವೆಯ ನಂತರ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017 ರಲ್ಲಿ ಈ ಮನೆಗೆ ಸ್ಥಳಾಂತರಗೊಂಡರು.
ಇದನ್ನೂ ಓದಿ- Indian Cricketers: ಕೊಹ್ಲಿಯಿಂದ ಬುಮ್ರಾವರೆಗೆ ತಮಗಿಂತ ಹಿರಿಯರನ್ನು ವಿವಾಹವಾದ ಭಾರತೀಯ ಕ್ರಿಕೆಟಿಗರಿವರು
ರವೀಂದ್ರ ಜಡೇಜಾ ಅವರು ಜಮ್ನಗರದಲ್ಲಿ ಅವರ 4 ಅಂತಸ್ತಿನ ಬಂಗಲೆಯನ್ನು ಹೊಂದಿದ್ದಾರೆ. ರವೀಂದ್ರ ಜಡೇಜಾ ಅವರ ಬಂಗಲೆ ರಾಜಮನೆತನದಂತೆ ಕಾಣುತ್ತದೆ, ದೊಡ್ಡ ಬಾಗಿಲುಗಳು ಮತ್ತು ವಿಂಟೇಜ್ ಪೀಠೋಪಕರಣಗಳು ಬಹಳ ಅದ್ಭುತವಾಗಿವೆ. ಅವರ ಈ ಮನೆಯ ಬೆಲೆ ಸುಮಾರು 10 ಕೋಟಿ ಎಂದು ಅಂದಾಜಿಸಲಾಗಿದೆ.
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ತಮ್ಮ ಅದ್ಭುತ ಆಟದಿಂದ ಸಾಕಷ್ಟು ಹೆಸರು ಗಳಿಸಿದ್ದಾರೆ. ಇದರೊಂದಿಗೆ ಅವರ ಸಂಪತ್ತು ಕೂಡ ಭಾರಿ ಹೆಚ್ಚಾಗಿದೆ. ವಡೋದರಾದಲ್ಲಿ 6,000 ಚದರ ಅಡಿ ಬಂಗಲೆ ಖರೀದಿಸಲು ಇದು ಕಾರಣವಾಗಿದೆ. ಅವರ ಈ ಮನೆಯ ಬೆಲೆ ಸುಮಾರು 3.6 ಕೋಟಿ ರೂ.
ಇದನ್ನೂ ಓದಿ- ಸುರೇಶ್ ರೈನಾ ಐಶಾರಾಮಿ ಬಂಗಲೆ ಹೇಗಿದೆ ಮತ್ತು ಬೆಲೆ ಎಷ್ಟು ಗೊತ್ತಾ?
ಸುರೇಶ್ ರೈನಾ ಈ ಐಷಾರಾಮಿ ಬಂಗಲೆ ಉತ್ತರ ಪ್ರದೇಶದ ಘಜಿಯಾಬಾದ್‌ನ ಐಷಾರಾಮಿ ಪ್ರದೇಶವಾದ ರಾಜ್ ನಗರದಲ್ಲಿದೆ. ಗಾಜಿಯಾಬಾದ್‌ನ ಹೊರತಾಗಿ, ರೈನಾ ದೆಹಲಿ ಮತ್ತು ಲಕ್ನೋದಲ್ಲಿ ಮನೆಗಳನ್ನು ಹೊಂದಿದ್ದಾರೆ. ಸುರೇಶ್ ರೈನಾ (Suresh Raina) ಅವರ ಈ ಮನೆಯ ಬೆಲೆ ಸುಮಾರು 18 ಕೋಟಿ, ಇದು ನೋಡಲು ಸಾಕಷ್ಟು ಐಷಾರಾಮಿ ಆಗಿದೆ.