Lexus NX 350h: ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಮತ್ತೊಂದು ಐಷಾರಾಮಿ ಕಾರು!
ಹೊಸ Lexus NX 350h 2.5 ಲೀಟರ್, ನಾಲ್ಕು ಸಿಲಿಂಡರ್ ಎಂಜಿನ್ ಮತ್ತು ಲಿಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಸಿವಿಟಿ ಜೊತೆಗೆ ಎಂಜಿನ್ 240bhp 270Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೇ ಬ್ಯಾಟರಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಲೆಕ್ಸಸ್‌ನಲ್ಲಿ ಕಾರ್ಯಕ್ಷಮತೆ ಹೆಚ್ಚಿಸಲು aerrodynamics ಅಳವಡಿಸಲಾಗಿದೆ.
Lexus NX 350h ಐಷಾರಾಮಿ ವೈಶಿಷ್ಟ್ಯತೆಯ ವಾಹನವಾಗಿದೆ. ಇದರೊಳಗೆ ಜಿಯೋ ಲೇಯರ್ ಡೋರ್ ಟ್ರಿಮ್‌ನೊಂದಿಗೆ ಮೊನೊಲಿತ್ ಪ್ಯಾಲೆಟ್ ಒಳಾಂಗಣ ಹೊಂದಿದೆ. ಇದು ಸುರಕ್ಷಾ ಫೀಚರ್ಸ್ ಅನ್ನು ಒಳಗೊಂಡಿದ್ದು, ಕಾರಿನಲ್ಲಿ ಇ-ಕಾಲ್, ಇಳ್ಳತನವಾದರೆ ವಾಹನದ ಟ್ರ್ಯಾಕಿಂಗ್, ಡ್ರೈವರ್ ಅಲರ್ಟ್ ಮತ್ತು ಫೈಂಡ್ ಮೈ ಕಾರ್ ಆಪ್ಶನ್‌ಗಳನ್ನು ಬಳಸಬಹುದಾಗಿದೆ.
Lexus NX 350hನಲ್ಲಿ ಸರ್ವೀಸ್ ಹಿಸ್ಟರಿ, ಸರ್ವೀಸ್ ಎಸ್ಟಿಮೇಟ್, ಸರ್ವೀಸ್ ರಿಮೈಂಡರ್, ಎಂಜಿನ್ ಸ್ಟಾರ್ಟ್, ಡೋರ್‌ಲಾಕ್, ಅನ್‌ಲಾಕ್, ರಿಮೋಟ್ ಎಸಿ, ರಿಮೋಟ್ ಪವರ್ ವಿಂಡೋಸ್ ಫೀಚರ್ಸ್ ಸೇರಿದಂತೆ ಹಲವಾರು ಉನ್ನತ ವೈಶಿಷ್ಟ್ಯಗಳನ್ನು ಹೊಂದಿದೆ.
ನೂತನ ಐಷಾರಾಮಿ ಕಾರು ಬಿಡುಗಡೆ ಬಗ್ಗೆ ಮಾತನಾಡಿರುವ ಲೆಕ್ಸಸ್ ಇಂಡಿಯಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ತನ್ಮಯ್ ಭಟ್ಟಾಚಾರ್ಯ, ಭಾರತೀಯ ಮಾರುಕಟ್ಟೆಗೆ ಹೊಸ Lexus NX 350h ಬಿಡುಗಡೆಗೊಳಿಸಲು ತುಂಬಾ ಖುಷಿಯಾಗುತ್ತಿದೆ. ಈ ಐಷಾರಾಮಿ SUV ಹಲವಾರು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದ್ದು, ಭಾರತೀಯರಿಗೆ ಇಷ್ಟವಾಗಲಿದೆ ಅಂತಾ ಹೇಳಿದ್ದಾರೆ.