Li-Fi Technology: ಇನ್ಮುಂದೆ Li-Fi ತಂತ್ರಜ್ಞಾನದ ಮೂಲಕ Internet ಬಳಸಿ... ಏನಿದು Li-Fi?

Fri, 18 Dec 2020-2:43 pm,

ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ಗೂಗಲ್ ಭಾರತದಲ್ಲಿ Project X ಅಡಿಯಲ್ಲಿ Li-Fi ತಂತ್ರಜ್ಞಾನವನ್ನು ಆಂಧ್ರಪ್ರದೇಶದಲ್ಲಿ ಯಶಸ್ವಿ ಪರೀಕ್ಷೆ ಕೈಗೊಂಡಿದೆ.

ತಂತ್ರಜ್ಞಾನದ ದೈತ್ಯ ಕಂಪನಿಯಾಗಿರುವ Google ತನ್ನ ನೂತನ Li-Fi ತಂತ್ರಜ್ಞಾನವನ್ನು ಭಾರತದಲ್ಲಿ ಬಿಡುಗಡೆಗೊಳಿಸಲು Airtel ಹಾಗೂ Reliance Jio ಜೊತೆಗೆ ಮಾತುಕತೆ ನಡೆಸುತ್ತಿದೆ. ET ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಶೀಘ್ರದಲ್ಲಿಯೇ Airtel ಹಾಗೂ Reliance Jio ಇಡೀ ದೇಶಾದ್ಯಂತ ಈ ಸೇವೆಯನ್ನು ಆರಂಭಿಸುವ ಕಾರ್ಯ ಶುರು ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ.

Li-Fi ಒಂದು ಹೊಸ ತಲೆಮಾರಿನ ತಂತ್ರಜ್ನಾನವಾಗಿದ್ದು, ಇದರಲ್ಲಿ ಇಂಟರ್ನೆಟ್ ಡೇಟಾ ಅನ್ನು ಫೈಬರ್ ಅಥವಾ ಸ್ಯಾಟಲೈಟ್ ಬದಲು ಲೈಟ್ ಬೀಮ್ಸ್ ಮೂಲಕ ವರ್ಗಾಯಿಸಲಾಗುತ್ತದೆ. ಲೈಟ್ ಬೀಮ್ಸ್ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೇಬಲ್ ಅಥವಾ ಕನೆಕ್ಷನ್ ಇಲ್ಲದೆಯೇ ದತ್ತಾಂಶ ವರ್ಗಾವಣೆ ಮಾಡುತ್ತದೆ. ಇದು ಗುಡ್ಡಗಾಡು ಪ್ರದೇಶಗಳಲ್ಲಿಯೂ ಕೂಡ ಇಂಟರ್ನೆಟ್ ಸೇವೆನನ್ನು ತಲುಪಿಸಲು ತುಂಬಾ ಪರಿಣಾಮಕಾರಿಯಾಗಿದೆ.

Project X ಅಡಿಯಲ್ಲಿ Li-Fi ಇಂಟರ್ನೆಟ್ ವೇಗ 20GB ಗಳಷ್ಟು ಹೆಚ್ಚಾಗಲಿದೆ. ಪ್ರಸ್ತುತ ದೇಶದಲ್ಲಿ 1 GB ಗೆ ಇಂಟರ್ನೆಟ್ ಸ್ಪೀಡ್ ಸೀಮಿತವಾಗಿದೆ.

ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ Li-Fiನ ಒಂದು ಸೆಟ್ ಅಪ್ ಅಳವಡಿಸಿ ಸರಿ ಸುಮಾರು 20 ಕಿ.ಮೀ ಪರದಿಯನ್ನು ಕವರ್ ಮಾಡಬಹುದಾಗಿದೆ. ಈ 20 ಕಿ.ಮೀ ಪರಧಿಯಲ್ಲಿ ಬಳಕೆದಾರರು ಹೈ ಸ್ಪೀಡ್ ಇಂಟರ್ನೆಟ್ ಲಾಭವನ್ನು ಪಡೆಯಬಹುದಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link