ದಿನಕ್ಕೆ 199 ರೂಪಾಯಿ, ಕೊನೆಗೆ ಸಿಗುತ್ತೆ 94ಲಕ್ಷ.! ಇಲ್ಲಿದೆ LICಯ ಹೊಸ ಪಾಲಿಸಿ

Wed, 20 Jan 2021-11:57 am,

ಯಾವುದೇ ಭಯವಿಲ್ಲದೆ  ಹೂಡಿಕೆ ಮಾಡಲು ಬಯಸಿದರೆ, ಎಲ್ಐಸಿಯ ಜೀವನ್ ಉಮಂಗ್ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.  ಇದರಲ್ಲಿ, ನೀವು ಲೈಫ್ ಕವರ್ ಜೊತೆಗೆ ಪಾಲಿಸಿ ಮುಕ್ತಾಯದ ವೇಳೆ   ಒಂದು ದೊಡ್ಡ ಮೊತ್ತವನ್ನು ಪಡೆಯಬಹುದು. ಈ ಪಾಲಿಸಿಯನ್ನು 15 ವರ್ಷದಿಂದ 55 ವರ್ಷಗಳವರೆಗೆ ಒಬ್ಬ ವ್ಯಕ್ತಿ ಖರೀದಿಸಬಹುದು.ಇನ್ನೊಂದು ಪ್ರಮುಖ ವಿಚಾರ ಎಂದರೆ, ಈ ಯೋಜನೆಯಲ್ಲಿ ನೀವು 100 ವರ್ಷಗಳ ಕಾಲ ಸುರಕ್ಷೆ ಪಡೆಯಲು ಸಾಧ್ಯ. 

ಪಾಲಿಸಿದಾರ ಸಾವಿಗೀಡಾದರೆ, ಅಂಥಹ ಸಂದರ್ಭದಲ್ಲಿ ಆತನ  ಕುಟುಂಬಕ್ಕೆ  ಹಣವನ್ನು ನೀಡಲಾಗುತ್ತದೆ. ಅಂದರೆ ಪಾಲಿಸಿದಾರನ ಮರಣದ ನಂತರ ಪಾವತಿಸಿದ ಪ್ರೀಮಿಯಂ ಅನ್ನು ನಾಮಿನಿಗೆ ನೀಡಲಾಗುತ್ತದೆ.  ಈ ಪಾಲಿಸಿಯಲ್ಲಿ ಪ್ರೀಮಿಯಂ ಪಾವತಿಸುವ ಅವಧಿ 15, 20, 25 ಮತ್ತು 30 ವರ್ಷಗಳವರೆಗೆ ಇರುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ, ಅವಧಿಯನ್ನು ಆಯ್ಕೆ ಮಾಡಬಹುದು. ನೀವು ಪಾಲಿಸಿಯ ಸಂಪೂರ್ಣ ಪ್ರೀಮಿಯಂ ಅನ್ನು ಸಮಯಕ್ಕೆ ಪೂರ್ಣಗೊಳಿಸಿದರೆ, ಪಾಲಿಸಿಯ ಮೊತ್ತವನ್ನು ನೀಡಲಾಗುತ್ತದೆ. ಅಂದರೆ, ಸಂಪೂರ್ಣ ಕಂತು ಪಾವತಿಸಿದ ನಂತರ ರಿಟರ್ನ್ ಪಡೆಯುತ್ತೀರಿ..

ನೀವು  25 ವರ್ಷ ವಯಸ್ಸಿನವರಾಗಿದ್ದು, 15 ವರ್ಷಗಳ ಪ್ರೀಮಿಯಂ ಪಾವತಿಸುವ ಅವಧಿಯ ಯೋಜನೆ  ಆಯ್ಕೆಯನ್ನು ಆರಿಸಿದ್ದೀರಿ ಅಂದುಕೊಂಡರೆ,  ನೀವು ಒಟ್ಟು  10,93,406 ರೂಗಳನ್ನು ಪಾವತಿಸಬೇಕಾಗುತ್ತದೆ. ಈ ಅವಧಿಯಲ್ಲಿ, ಪ್ರತಿದಿನ 199 ರೂ. ಹೂಡಿಕೆ ಮಾಡಿದರೆ ಒಟ್ಟು ಅಂದಾಜು 94,72,500 ರೂ ರಿಟರ್ನ್ ಸಿಗುತ್ತದೆ. 15 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಿದ ನಂತರ ಈ ಮೊತ್ತದ 8 %ದಷ್ಟು ಪ್ರತಿ ವರ್ಷ ನೀವು  ಪಡೆಯುತ್ತೀರಿ. ಅಂದರೆವರ್ಷಕ್ಕೆ 72ಸಾವಿರ ರೂ. 

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ,  ಪ್ರೀಮಿಯಂನಲ್ಲಿ 1.5 ಲಕ್ಷ ರೂ.ವರೆಗೆ ತೆರಿಗೆ ರಿಯಾಯಿತಿ ಪಡೆಯುತ್ತೀರಿ. ಇದಲ್ಲದೆ, ಮೆಚ್ಯೂರಿಟಿ ಮೊತ್ತವನ್ನು ಪಡೆಯುವಾಗ ಪಾಲಿಸಿದಾರರಿಗೆ ಸೆಕ್ಷನ್ 10 ಡಿ ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ.

ಪಾಲಿಸಿ ಸ್ಟೇಟಸ್ ತಿಳಿಯಲು  ಎಲ್ಐಸಿ ವೆಬ್‌ಸೈಟ್ https://www.licindia.in/ ಗೆ ಭೇಟಿ ನೀಡಿ. ಇದಕ್ಕಾಗಿ,  ಮೊದಲು  ನೋಂದಣಿಯನ್ನು ಮಾಡಿಕೊಳ್ಳಬೇಕು. ನೋಂದಾಯಿಸಲು, ವೆಬ್‌ಸೈಟ್ ಲಿಂಕ್ https://ebiz.licindia.in/D2CPM/#Register ಗೆ ಭೇಟಿ ನೀಡಿ. ಇಲ್ಲಿ ನಿಮ್ಮ ಹೆಸರು, ಪಾಲಿಸಿ ಸಂಖ್ಯೆ, ಹುಟ್ಟಿದ ದಿನಾಂಕವನ್ನು ನಮೂದಿಸಿ. ಇದರ ನಂತರ, ನೀವು ನೋಂದಾಯಿಸಿದಾಗ, ನಿಮ್ಮ ಎಲ್ಐಸಿ ಖಾತೆಯನ್ನು ತೆರೆಯಬಹುದು ಮತ್ತು ಸ್ಟೇಟಸ್ ಪರಿಶೀಲಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link