Saral Pension Yojana: LICಯ ಈ ಯೋಜನೆಯಲ್ಲಿ ಜೀವನಪೂರ್ತಿ ಸಿಗಲಿದೆ ಪಿಂಚಣಿ, ಸುಗಮವಾಗಲಿದೆ ನಿವೃತ್ತಿ ಜೀವನ

Mon, 09 Aug 2021-8:56 pm,

ನೀವು ಈ ಯೋಜನೆಯನ್ನು ಸಿಂಗಲ್ ಲೈಫ್ ಮತ್ತು joint life  ಎರಡು ರೀತಿಯಲ್ಲಿ ತೆಗೆದುಕೊಳ್ಳಬಹುದು. ಸಿಂಗಲ್ ಲೈಫ್ ಪಾಲಿಸಿಯಲ್ಲಿ, ಈ ಪಿಂಚಣಿ ಯಾರಾದರೂ ಒಬ್ಬರ ಹೆಸರಿನಲ್ಲಿರುತ್ತದೆ.  ಜೀವಂತವಾಗಿರುವವರೆಗೂ, ಅವರು ಪಿಂಚಣಿ ಪಡೆಯುತ್ತಾರೆ. ಆದರೆ ಸಾವಿನ ನಂತರ, ನಾಮಿನಿಗೆ ಮೂಲ ಬೆಲೆ ಸಿಗುತ್ತದೆ.  joint life ಇಬ್ಬರೂ ಸಂಗಾತಿಗಳಿಗೆ ಕವರೇಜ್ ನೀಡುತ್ತದೆ. ಇದರಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಪಿಂಚಣಿ ಪಡೆಯಬಹುದು. ಯಾವುದೇ ಕಾರಣದಿಂದ ಇಬ್ಬರೂ ಮೃತಪಟ್ಟರೆ, ನಾಮಿನಿಗೆ ಈ ಮೊತ್ತ ಸಿಗುತ್ತದೆ.

 ಈ ಯೋಜನೆಯ ಲಾಭ ಪಡೆಯಬೇಕಾದರೆ, ನಿಮ್ಮ ವಯಸ್ಸು 40-80 ವರ್ಷಗಳ ನಡುವೆ ಇರಬೇಕು. ಈ ಯೋಜನೆಯಡಿ,  ಜೀವನ ಪೂರ್ತಿ ಪಿಂಚಣಿ ಪಡೆಯಬಹುದು. ಯಾವುದೇ ಕಾರಣದಿಂದ ಪಿಂಚಣಿದಾರರು ಮೃತಪಟ್ಟರೆ, ನಾಮಿನಿಗೆ ಈ ಮೂಲ ಬೆಲೆ ಸಿಗುತ್ತದೆ. ಈ ಯೋಜನೆಯನ್ನು ತೆಗೆದುಕೊಂಡ ನಂತರ ನಿಮಗೆ ಇಷ್ಟವಾಗದಿದ್ದರೆ, ಅದನ್ನು ತೆಗೆದುಕೊಂಡ ದಿನಾಂಕದಿಂದ 6 ತಿಂಗಳವರೆಗೆ ನೀವು ಯಾವಾಗ ಬೇಕಾದರೂ ಸರೆಂಡರ್ ಮಾಡಬಹುದು.   

ಈ ಪಿಂಚಣಿ ತ್ರೈಮಾಸಿಕ, ಅರ್ಧವಾರ್ಷಿಕ, ಮಾಸಿಕ ಅಥವಾ ವಾರ್ಷಿಕವಾಗಿ ಬೇಕಾದರೆ, ನೀವೇ ನಿರ್ಧರಿಸಬೇಕಾಗುತ್ತದೆ. ಇದರಲ್ಲಿ ನಿಮಗೆ 4 ಆಯ್ಕೆಗಳಿವೆ. ನೀವು ಪ್ರತಿ ತಿಂಗಳು, 3 ತಿಂಗಳಿಗೊಮ್ಮೆ,  6 ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ  ಈ ಪಿಂಚಣಿಯನ್ನು ತೆಗೆದುಕೊಳ್ಳಬಹುದು. ನೀವು ಯಾವ ಆಯ್ಕೆಯನ್ನು ಆರಿಸುತ್ತಿರೋ, ಪಿಂಚಣಿ ಆ ಅವಧಿಯಲ್ಲಿ ಮಾತ್ರ ಸಿಗುತ್ತದೆ.

ನಿಮಗೆ ಎಷ್ಟು ಪಿಂಚಣಿ ಬೇಕು ಎಂಬುದನ್ನು ನೀವೇ ನಿರ್ಧರಿಸಬೇಕು. ಇದರರ್ಥ ನಿಮಗೆ ಎಷ್ಟು ಪಿಂಚಣಿ ಬೇಕು  ಅದಕ್ಕೆ ತಕ್ಕಂತೆ ನೀವು ಪಾವತಿಸಬೇಕಾಗುತ್ತದೆ. ನಿಮಗೆ 40 ವರ್ಷ ವಯಸ್ಸಾಗಿದೆ ಮತ್ತು ನೀವು 10 ಲಕ್ಷ ರೂಪಾಯಿಗಳ ಪ್ರೀಮಿಯಂ ಅನ್ನು ಠೇವಣಿ ಇಟ್ಟಿದ್ದೀರಿ ಎಂದಿಟ್ಟುಕೊಳ್ಳಿ, ಆಗ ನೀವು ವಾರ್ಷಿಕವಾಗಿ 50,250 ರೂಗಳನ್ನು ಪಡೆಯಲು ಪ್ರಾರಂಭಿಸುತ್ತೀರಿ.

ಗಂಭೀರ ಅನಾರೋಗ್ಯ ಎದುರಾಗಿ, ನಿಮಗೆ ಹಣದ ಅಗತ್ಯವಿದ್ದಲ್ಲಿ, ಸರಳ ಪಿಂಚಣಿ ಯೋಜನೆಯಲ್ಲಿ ಠೇವಣಿ ಇಟ್ಟಿರುವ ಹಣವನ್ನು ಹಿಂಪಡೆಯಬಹುದು. ಪಾಲಿಸಿಯನ್ನು ಸರೆಂಡರ್ ಮಾಡಿದ ನಂತರ, 95% ಮರುಪಾವತಿಯನ್ನು ಪಡೆಯಬಹುದು. ಇದರ ಹೊರತಾಗಿ, ಈ ಯೋಜನೆಯ ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link