ನಿಜವಾಗಿಯೂ ಇದೆಯಾ ಸಾವಿನ ನಂತರದ ಜಗತ್ತು..! ಮಹಿಳೆಗಾದ ಅನುಭವ ಏನು..?
ಸಾವಿನ ನಂತರದ ಕಥೆ ಏನು ಎಂಬುದಕ್ಕೆಇಲ್ಲಿಯವರೆಗೆ ವಿಜ್ಞಾನದಲ್ಲಿ ಯಾವುದೇ ಉತ್ತರ ಇಲ್ಲ. ಪ್ರತಿಯೊಂದು ಧರ್ಮವೂ ಅದರ ನಂಬಿಕೆಗೆ ಅನುಗುಣವಾಗಿ ಅದರದೇ ಆದ ಉತ್ತರ ನೀಡಬಹುದು. ಆದರೆ ಬ್ರಿಟನಿನ ಒಬ್ಬ ಮಹಿಳೆ ತಾನು ಸಾವಿನ ನಂತರದ ಜಗತ್ತನ್ನು ನೋಡಿದ್ದೇನೆ ಎನ್ನುತ್ತಾರೆ..
ಈ ಮಹಿಳೆಯ ಹೆಸರು ರೋನ್ಡಾ. ಇವರು ಹೊಸ ವರ್ಷಾಚರಣೆ ವೇಳೆ ಅತಿಯಾಗಿ ಮದ್ಯಪಾನ ಮಾಡಿದ್ದರು. ಇದಾದ ನಂತರ ರೋನ್ಡಾ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಇದಾದ ನಂತರ ಕೆಲ ದಿನಗಳ ನಂತರ ಇವರಿಗೆ ಪ್ರಜ್ಞೆ ಬಂದಿದ್ದು, ಈ ಮಹಿಳೆ ಹೇಳುತ್ತಿದ್ದ ಮಾತು ಕೇಳಿ ಎಲ್ಲರೂ ಆಶ್ಚರ್ಯಗೊಂಡಿದ್ದಾರೆ. ಈ ಮಹಿಳೆಯ ಪ್ರಕಾರ ಅವರ ಆತ್ಮ ದೇಹವನ್ನು ಬಿಟ್ಟು ಬೇರೊಂದು ಜಗತ್ತನ್ನು ಪ್ರವೇಶಿಸಿತ್ತಂತೆ..ಆ ಜಗತ್ತು ಸಂಪೂರ್ಣ ಭಿನ್ನವಾಗಿತ್ತಂತೆ. ಇಲ್ಲಿನ ಅನುಭವವೇ ಬೇರೆ ಎಂದು ವಿವರಿಸಿದ್ದಾರೆ ಈ ಮಹಿಳೆ. ನಿಯರ್ ಡೆತ್ ಎಕ್ಸ್ ಪೀರಿಯನ್ಸ್ ರಿಸರ್ಚ್ ಫೌಂಡೇಶನ್ ಜೊತೆ ಮಾತನಾಡಿದ ಮಹಿಳೆ ತನ್ನ ಅನುಭವಗಳನ್ನು ಹೇಳಿದ್ದಾರೆ.
ರೋನ್ಡಾಅವರಿಗೆ ದೊಡ್ಡದಾದ ಸುರಂಗದಲ್ಲಿ ಬಿದ್ದ ಅನುಭವವಾಗಿತ್ತಂತೆ. ಕಣ್ಣು ಬಿಡುತ್ತಿದ್ದಂತೆ ಸುತ್ತಲೂ ಕತ್ತಲೆ ಆವರಿಸಿತ್ತಂತೆ.. ಆದರೆ ಸ್ವಲ್ಪ ದೂರದರಲ್ಲೇ ಮತ್ತೆ ಬಣ್ಣಗಳಿಂದ ಕೂಡಿದ ಸುರಂಗವೊಂದು ಅವರ ಕಣ್ಣಿಗೆ ಬಿದ್ದಿದೆ. ಸಂಪೂರ್ಣ ಗೋಲಾಕಾರದಲ್ಲಿದ್ದ ಈ ಸುರಂಗ ರೋನ್ಡಾ ಅವರ ಹತ್ತಿರಕ್ಕೆ ಬರುತ್ತಿತಂತೆ.. ಈ ಸುರಂಗದ ಗೋಡೆಗಳು ತಿರುಗುತ್ತಿದ್ದು, ಈ ಸುರಂಗದ ಕೊನೆ ಭಾಗದಿಂದ ಬೆಳಕು ಹೊರಹೊಮ್ಮುತ್ತಿತ್ತು ಎಂದು ಮಹಿಳೆ ಹೇಳಿದ್ದಾರೆ.
ಈ ಸುರಂಗದೊಳಗೆ ಕಾಲಿಡುತ್ತಿದ್ದಂತೆ, ಸುರಂಗದ ಮೇಲ್ಬಾಗಕ್ಕೆ ನೋಡಿದಾಗ ಅಲ್ಲಿ ಎಲ್ಲರೂ ಪಿಸುಗುಟ್ಟುತ್ತಿರುವ ಅನುಭವವಾಗಿದೆ ಎನ್ನುತ್ತಾರೆ ರೋನ್ಡಾ.. ಆದರೆ ಅವರೆಲ್ಲಾ ಏನು ಮಾತನಾಡಿಕೊಳ್ಳುತ್ತಿದ್ದರು ಎನ್ನುವುದು ಅರ್ಥವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಇಷ್ಟಾದ ನಂತರ ಸುರಂಗದ ಗೋಡೆಗಳಿಂದ ಕಪ್ಪಗಿನ ಕೈಗಳು ಹೊರಬಂದಿದ್ದು, ತನ್ನತ್ತ ಬರುತ್ತಿತ್ತು. ಆದರೆ ಆ ಕೈಗಳು ನನ್ನನ್ನು ತಲುಪುವ ಮುನ್ನವೇ ಯಾರೋ ಆ ಸುರಂಗದಿಂದ ಹೊರಗೆಳೆದಿದ್ದಾರೆ. ಒಳಗಡೆ ಏನಾಗುತ್ತಿತ್ತು ಎಂದು ನೋಡುವುದು ನನ್ನಿಂದ ಸಾಧ್ಯವಾಗಿಲ್ಲ. ಯಾಕೆಂದರೆ ಅಷ್ಟರಲ್ಲಿ ನನ್ನ ಆತ್ಮ ಮತ್ತೆ ನನ್ನ ದೇಹವನ್ನು ಪ್ರವೇಶಿಸಿತ್ತು ಎಂದಿದ್ದಾರೆ. ಈ ಅನುಭವವಾದ ನಂತರ ಶಾಂತಿಯಿಂದ ಇರಲು ಸಾಧ್ಯವಾಗುತ್ತಿಲ್ಲ.. ಆದರೆ ಅದು ಸಾವಿನ ನಂತರ ಜಗತ್ತು ಎನ್ನುವುದು ಸತ್ಯ ಎಂಬುವುದು ರೋನ್ಡಾ ಅವರ ವಾದ..