Diwali 2022: ಈ ರೀತಿಯ ದೀಪ ಬೆಳಗಿಸಿದ್ರೆ ಮನೆಗೆ ಸಂತೋಷ ಮತ್ತು ಸಮೃದ್ಧಿಯು ಬೆಳಕು ಬರುತ್ತದೆ
ದೀಪಾವಳಿ ಹಬ್ಬದಂದು ನಿಯಮಗಳ ಪ್ರಕಾರ ದೀಪಗಳನ್ನು ಸರಿಯಾದ ಸ್ಥಳದಲ್ಲಿ ಇರಿಸಿಬೇಕು. ಇದರಿಂದ ಮನೆಯಲ್ಲಿ ಸಮೃದ್ಧಿಯ ಜೊತೆಗೆ, ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆ. ದೀಪದಲ್ಲಿ ಸುರಿಯುವ ಎಣ್ಣೆಯು ಮನುಷ್ಯನ ಋಣಾತ್ಮಕ ಚೈತನ್ಯವನ್ನು ಮತ್ತು ಆತ್ಮದ ಬತ್ತಿಯನ್ನು ಪ್ರತಿನಿಧಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉರಿಯುವ ದೀಪದಿಂದ ಆತ್ಮವು ಶುದ್ಧವಾಗುತ್ತದೆ ಎಂದು ಹೇಳಲಾಗುತ್ತದೆ.
ಮನೆಯಲ್ಲಿ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ದೀಪಗಳನ್ನು ಬೆಳಗಿಸಿದರೆ ಶುಭ ಫಲಿತಾಂಶಗಳು ದೊರೆಯುತ್ತವೆ. ಯಾವುದೇ ರೀತಿಯ ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ನೀವು ದೀಪಗಳನ್ನು ಇರಿಸುವ ತಟ್ಟೆಯಲ್ಲಿ ಇರಿಸಿ. ಮನೆಯ ಹತ್ತಿರ ದೇವಸ್ಥಾನವಿದ್ದರೆ ಮೊದಲು ದೀಪಗಳನ್ನು ಹಚ್ಚಿ ಅಲ್ಲಿಗೆ ಕೊಂಡೊಯ್ಯಿರಿ, ದೇವಸ್ಥಾನದಲ್ಲಿ ಕೆಲವು ದೀಪಗಳನ್ನು ಇರಿಸಿ, ನಂತರ ಮನೆಯಲ್ಲಿ ಉಳಿದ ದೀಪಗಳನ್ನು ತಂದು ವಿವಿಧ ಸ್ಥಳಗಳಲ್ಲಿ ಇರಿಸಬೇಕು.
ದೀಪಾವಳಿಯ ದೀಪವನ್ನು ದೇವಸ್ಥಾನದ ನಂತರ ಮನೆಯ ಪೂಜಾ ಸ್ಥಳದಲ್ಲಿ ಮೊದಲು ಇಡಬೇಕು. ಮನೆಯ ಪೂಜಾ ಸ್ಥಳವನ್ನು ಈಶಾನ್ಯದಲ್ಲಿ ಮಾಡದಿದ್ದರೆ, ಮನೆಯ ಈಶಾನ್ಯ ಮೂಲೆಯಲ್ಲಿ ದೀಪವನ್ನು ಇಡಬಹುದು.
ಮನೆಯ ಪೂಜಾ ಸ್ಥಳದ ನಂತರ ತುಳಸಿ ಗಿಡದ ಬಳಿ 2ನೇ ದೀಪವನ್ನು ಇರಿಸಿ. ತುಳಸಿ ಸಸ್ಯವು ಈಶಾನ್ಯದಲ್ಲಿ ಇದ್ದರೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಮನೆಯ ಅಡುಗೆ ಮನೆಯಲ್ಲೂ ದೀಪ ಇಡಬೇಕು. ಇದರಿಂದ ತಾಯಿ ಅನ್ನಪೂರ್ಣ ಸಂತಸಗೊಳ್ಳುತ್ತಾಳಂತೆ.
ಮನೆಯಲ್ಲಿ ದೀಪವನ್ನು ಪಶ್ಚಿಮ ಕೋನದಲ್ಲಿ ಮತ್ತು ದಕ್ಷಿಣ ದಿಕ್ಕಿನಲ್ಲಿಯೂ ಇಡಬೇಕು. ದಕ್ಷಿಣ ದಿಕ್ಕನ್ನು ಯಮ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಪೂರ್ವಜರ ಆಶೀರ್ವಾದ ದೊರೆಯುತ್ತದೆ. ದೀಪಾವಳಿಯಂದು ದೀಪವನ್ನು ಹಚ್ಚುವಾಗ ಎಣ್ಣೆಯನ್ನು ಮಾತ್ರ ಬಳಸಿ ಮತ್ತು ಬತ್ತಿಯು ಯಾವಾಗಲೂ ಉದ್ದವಾಗಿರಬೇಕು, ಗುಂಡಾಗಿರಬೇಕು.