ಸರ್ಕಾರಿ ನೌಕರರಿಗೆ ಹೊಸ ವರ್ಷದ ಗುಡ್ ನ್ಯೂಸ್ !ವೇತನ ಪರಿಷ್ಕರಣೆಗೆ ಹೊಸ ವ್ಯವಸ್ಥೆ !ಪ್ರತಿ ವರ್ಷವೂ ಆಗುವುದು ಸ್ಯಾಲರಿ ರಿವೈಸ್

Tue, 07 Jan 2025-9:25 am,

2025ರ ವರ್ಷವು ಕೇಂದ್ರ ಸರ್ಕಾರಿ ನೌಕರರಿಗೆ ಅದೃಷ್ಟದ ವರ್ಷವೇ ಆಗಿರಲಿದೆ.  ಈ ವರ್ಷದ ಆರಂಭದಲ್ಲಿ ಅವರ ವೇತನದಲ್ಲಿ ಭಾರೀ ಹೆಚ್ಚಳ ಕಂಡು ಬರುವುದು.  ಇದರ ಹೊರತಾಗಿ ಹೆಚ್ಚುವರಿ ಮೊತ್ತ ಕೂಡಾ ಕೈ ಸೇರುವುದು. 

ಜನವರಿ 2025ರ ದರ ಹೆಚ್ಚಳದ ಸುದ್ದಿಯನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ. ಅಕ್ಟೋಬರ್ 2024 ರವರೆಗಿನ AICPI ಸೂಚ್ಯಂಕ ಅಂಕಿಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ನವೆಂಬರ್ ಸಂಖ್ಯೆಗಳು ಸಹ ಲಭ್ಯವಿವೆ. ಡಿಸೆಂಬರ್‌ನ ಅಂಕಿಅಂಶಗಳು ಇನ್ನಷ್ಟೇ ಬರಬೇಕಿದೆ. ಆ ಬಳಿಕ 2025ರ ಜನವರಿಗೆ ದರ ಏರಿಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.

ಆದರೆ ಎಐಸಿಪಿಐ ಸೂಚ್ಯಂಕಗಳಲ್ಲಿನ ಟ್ರೆಂಡ್‌ಗಳ ಪ್ರಕಾರ, ಜನವರಿಯಲ್ಲಿ 3% ಡಿಎ ಹೆಚ್ಚಳ ಕಂಡುಬರುತ್ತಿದೆ. ಡಿಎ ಶೇ.3ರಷ್ಟು ಹೆಚ್ಚಾದರೆ, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಶೇ.56ಕ್ಕೆ ಏರಿಕೆಯಾಗಲಿದೆ.  

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-26ನೇ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಿದ್ದಾರೆ.ಇಲ್ಲಿಯೂ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕೆಲವು  ಸಿಹಿ ಸುದ್ದಿಗಳು ಸಿಗಲಿವೆ. 

ಕರೋನಾ ಅವಧಿಯಲ್ಲಿನ ಅಸಾಧಾರಣ ಪರಿಸ್ಥಿತಿಯಿಂದಾಗಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ತಡೆ ಹಿಡಿಯಲಾಗಿತ್ತು.  ಆಗ ತಡೆ ಹಿಡಿಯಲಾಗಿದ್ದ 18 ತಿಂಗಳ ಡಿಎ ಬಾಕಿ ಪಾವತಿ ಬಜೆಟ್ ನಲ್ಲಿ  ಘೋಷಣೆಯಾಗುವ ನಿರೀಕ್ಷೆ ಇದೆ.  

ಡಿಎ ಬಾಕಿಯ ಮೂಲಕ ಲಭ್ಯವಿರುವ ಮೊತ್ತವು ನೌಕರರ ವೇತನ ಮತ್ತು ದರ್ಜೆಯ ವೇತನವನ್ನು ಅವಲಂಬಿಸಿರುತ್ತದೆ. ಹಂತ 1 ಉದ್ಯೋಗಿಗಳು ಸರಿಸುಮಾರು 11,800 ರೂಪಾಯಿಯಿಂದ ಗರಿಷ್ಠ 37,554 ರೂಪಾಯಿವರೆಗೆ   ಪಡೆಯಬಹುದು. ಹಂತ 13 ನೌಕರರು 1,44,200ರೂಪಾಯಿಯಿಂದ 2,18,200 ರೂಪಾಯಿವರೆಗೆ ಪಡೆಯುವ ಸಾಧ್ಯತೆ ಇದೆ. 

ಇನ್ನು ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರು ಬಜೆಟ್ ನಲ್ಲಿ 8ನೇ ವೇತನ ಆಯೋಗದ ಮಾಹಿತಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.ಆದರೆ ಹೊಸ ವೇತನ ಆಯೋಗದ ಬದಲು ಖಾಸಗಿ ವಲಯದಲ್ಲಂತೂ ಪ್ರತಿ ವರ್ಷವೂ ವೇತನ ಪರಿಷ್ಕರಣೆ ಮಾಡಲಾಗುವುದು ಎನ್ನಲಾಗಿದೆ. ಪರ್ಫಾರ್ಮೆನ್ಸ್ ಬೇಸ್ಡ್ ಪೇ ಸಿಸ್ಟಮ್ ಎಂಬ ಹೊಸ ವ್ಯವಸ್ಥೆಯಲ್ಲಿ, ಉದ್ಯೋಗಿಗಳ ಕಾರ್ಯಕ್ಷಮತೆ ಮತ್ತು ಹಣದುಬ್ಬರವನ್ನು ಆಧರಿಸಿ ನೌಕರರ ವೇತನವನ್ನು ನಿರ್ಧರಿಸಬಹುದು. 

ವೇತನ ಹೆಚ್ಚಳವನ್ನು ಲೆಕ್ಕಾಚಾರ ಮಾಡಲು iCreot ಸೂತ್ರವನ್ನು ಬಳಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮೂಲವೊಂದು ತಿಳಿಸಿದೆ. ಈ ಹೊಸ ಸೂತ್ರವು ಉದ್ಯೋಗಿಗಳಿಗೆ ದೊಡ್ಡ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರ ಪ್ರಕಾರ ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿದಾರರ ಪಿಂಚಣಿಯಲ್ಲಿ ಭಾರಿ ಏರಿಕೆಯಾಗಲಿದೆ ಎಂದು ನಂಬಲಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link