ಒಂದು ಲೋಟ ನಿಂಬೆ ಜ್ಯೂಸ್ ಗೆ ಅರ್ಧ ಚಮಚ ಈ ಪುಡಿ ಬೆರೆಸಿ ಕುಡಿದರೆ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್ !
ಮಧುಮೇಹ ರೋಗಿಗಳು ಅಧಿಕ ಫೈಬರ್, ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರಗಳನ್ನು ಸೇವಿಸಬೇಕು. ಇದು ಬ್ಲಡ್ ಶುಗರ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕೆಲವು ಗಿಡಮೂಲಿಕೆಗಳು ಮತ್ತು ಮಸಾಲೆಗಳ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಏರಿಕೆಯಾಗದಂತೆ ತಡೆಯಬಹುದು.
ಹೌದು, ನಾವಿಲ್ಲಿ ಹೇಳುತ್ತಿರುವುದು ದಾಲ್ಚಿನ್ನಿ ಬಗ್ಗೆ. ಇದು ಬ್ಲಡ್ ಶುಗರ್ ಅನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ಸಹಾಯ ಮಾಡುವ ಮಸಾಲೆಯಾಗಿದೆ. ಮಧುಮೇಹಿಗಳಿಗೆ ಇದೊಂದು ಸೂಪರ್‌ಫುಡ್.
ನಿಂಬೆ ದಾಲ್ಚಿನ್ನಿಯನ್ನು ಬೆರೆಸಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಶಾಶ್ವತವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಾಧ್ಯವಾಗುತ್ತದೆ.
ಉಗುರು ಬೆಚ್ಚಗಿನ ನೀರಿಗೆ ನಿಂಬೆ ರಸ ಸೇರಿಸಿ ಅದಕ್ಕೆ ಅರ್ಧ ಚಮಚ ಚೆಕ್ಕೆ ಪುಡಿ ಮತ್ತು ಅರ್ಧ ಇಂಚು ಶುಂಠಿಯನ್ನು ತುರಿದು ಬೆರೆಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಿ.
ಈ ಮಿಶ್ರಣವನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಬ್ಲಡ್ ಶುಗರ್ ನಾರ್ಮಲ್ ಆಗಿಯೇ ಉಳಿಯುತ್ತದೆ ಎಂದು ಹೇಳಲಾಗುತ್ತದೆ. (ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)