ನಿಂಬೆ ರಸವನ್ನು ಇದರೊಂದಿಗೆ ಬೆರೆಸಿ ಈ ಸಮಯದಲ್ಲಿಯೇ ಸೇವಿಸಿ ! ಬೊಜ್ಜು ಕರಗಿ ಹೊಟ್ಟೆ ಚಪ್ಪಟೆಯಾಗುವುದು ಗ್ಯಾರಂಟಿ
ತೂಕವನ್ನು ಕಳೆದುಕೊಳ್ಳಲು ಕೆಲವು ಸರಳ ನೈಸರ್ಗಿಕ ಮಾರ್ಗಗಳಿವೆ. ಅವುಗಳನ್ನು ಸರಿಯಾಗಿ ಅನುಸರಿಸಿಕೊಂಡು ಬಂದರೆ ಬೊಜ್ಜು ಕರಗಿಸುವುದು ಕಷ್ಟದಾಯಕವಲ್ಲ.
ತೂಕ ಇಳಿಸಲು ಅಥವಾ ಬೊಜ್ಜು ಕರಗಿಸಲು ಇರುವ ನೈಸರ್ಗಿಕ ಉಪಾಯವೆಂದರೆ ನಿಂಬೆ ರಸ. ನಿಂಬೆ ರಸವನ್ನು ಸರಿಯಾದ ಸಮಯದಲ್ಲಿ ಸರಿಯಾದ ವಿಧಾನದಲ್ಲಿ ಕುಡಿದರೆ ಹೊಟ್ಟೆ ಮತ್ತು ಸೊಂಟದ ಭಾಗದ ಬೊಜ್ಜು ಸುಲಭವಾಗಿ ಕರಗಿ ಬಿಡುತ್ತದೆ.
ಪ್ರತಿದಿನ ನಿಂಬೆ ನೀರು ಕುಡಿದರೂ ತೂಕ ಕಡಿಮೆಯಾಗುವುದಿಲ್ಲ ಎಂದು ಹಲವರು ದೂರುತ್ತಾರೆ.ನಿಂಬೆ ನೀರನ್ನು ಸರಿಯಾಗಿ ಕುಡಿಯದ ಕಾರಣ ಹೀಗಾಗುತ್ತದೆ.ಯಾವುದೇ ಪರಿಹಾರವನ್ನು ಸರಿಯಾದ ರೀತಿಯಲ್ಲಿ ಅನುಸರಿಸದಿದ್ದರೆ ಅದು ಫಲಕಾರಿಯಾಗುವುದಿಲ್ಲ.
ನಿಂಬೆ ರಸವನ್ನು ಬಿಸಿ ನೀರಿನಲ್ಲಿ ಬೆರೆಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಮಾತ್ರ ದೇಹದಿಂದ ಹೆಚ್ಚುವರಿ ಕೊಬ್ಬನ್ನು ಹೊರಹಾಕಲು ಸಹಾಯ ಮಾಡುತ್ತದೆ.ಇದು ನಮ್ಮ ಚರ್ಮ ಮತ್ತು ಕೂದಲು ಸೇರಿದಂತೆ ದೇಹದ ಅನೇಕ ಭಾಗಗಳಿಗೆ ಪ್ರಯೋಜನಕಾರಿಯಾಗಿದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಮತ್ತು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಚಯಾಪಚಯವನ್ನು ಹೆಚ್ಚಿಸುತ್ತದೆ.ಇದು ದೇಹದಲ್ಲಿ ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ಸುಧಾರಿಸುತ್ತದೆ.
ನಿಂಬೆಯಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಇದನ್ನು ಸೇವಿಸಿದಾಗ ದೇಹದ ತೂಕ ಕಡಿಮೆಯಾಗಿ ನಮ್ಮ ದೇಹದಲ್ಲಿರುವ ಕಲ್ಮಶಗಳು ಹೊರಬರುತ್ತದೆ.ಈ ಕಾರಣದಿಂದಾಗಿ ದೇಹದ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.