CSK ತಂಡದಲ್ಲಿದ್ದೇ ನಾಯಕ ಧೋನಿಗಿಂತಲೂ ಹೆಚ್ಚು ಸಂಭಾವನೆ ಪಡೆಯುವ ಆ 3 ಕ್ರಿಕೆಟಿಗರು ಯಾರು?
ಐದು ಬಾರಿಯ ಐಪಿಎಲ್ ಚಾಂಪಿಯನ್ ಪಟ್ಟ ಪಡೆದುಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಮುಂದಾಳತ್ವ ಕ್ಯಾಪ್ಟನ್ ಕೂಲ್ ಎಂ ಎಸ್ ಧೋನಿ ಕೈಯಲ್ಲಿದೆ. ಅತೀ ಹೆಚ್ಚು ಬಾರಿ ಐಪಿಎಲ್ ಪಟ್ಟ ಮುಡಿಗೇರಿಸಿಕೊಂಡ ಖ್ಯಾತಿ ಎರಡು ತಂಡಗಳ ತೆಕ್ಕೆಯಲ್ಲಿದೆ. ಅವುಗಳಲ್ಲಿ ಒಂದು ಚೆನ್ನೈ ಸೂಪರ್ ಕಿಂಗ್ಸ್, ಮತ್ತೊಂದು ಮುಂಬೈ ಇಂಡಿಯನ್ಸ್.
ಇನ್ನು ಸಿಎಸ್’ಕೆ ತಂಡದಲ್ಲಿರುವ ಕೆಲ ಕ್ರಿಕೆಟಿಗರು ಎಂಎಸ್ ಧೋನಿಗಿಂತಲೂ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ. ಆ ಕ್ರಿಕೆಟಿಗರು ಯಾರೆಂದು ತಿಳಿದುಕೊಳ್ಳೋಣ,
ರವೀಂದ್ರ ಜಡೇಜಾ: ಟೀಂ ಇಂಡಿಯಾದ ಸ್ಟಾರ್ ಆಲ್’ರೌಂಡರ್, ಸಿಎಸ್’ಕೆಯ ಮ್ಯಾಚ್ ವಿನ್ನರ್ ರವೀಂದ್ರ ಜಡೇಜಾ ರೂ 16 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಇದು ನಾಯಕನಿಗಿಂತ ಸುಮಾರು $ 4 ಮಿಲಿಯನ್ ಹೆಚ್ಚು ಸಂಭಾವನೆ ಪಡೆದಂತಾಗಿದೆ.
ಬೆನ್ ಸ್ಟೋಕ್ಸ್: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಎಲ್ಲೋ ಆರ್ಮಿ 16.25 ಕೋಟಿ ರೂ.ಗೆ ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ.
ದೀಪಕ್ ಚಹಾರ್: ಐಪಿಎಲ್ 2022 ರ ಮೆಗಾ-ಹರಾಜಿನಲ್ಲಿ ದೀಪಕ್ ಚಹಾರ್ ಅವರನ್ನು ಸ್ವಾಧೀನಪಡಿಸಿಕೊಳ್ಳಲು CSK ಫ್ರಂಟ್ ಆಫೀಸ್ 14 ಕೋಟಿ ನೀಡಿ ಖರೀದಿಸಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜಿನ ಇತಿಹಾಸದಲ್ಲಿ ಅತಿದೊಡ್ಡ ಖರೀದಿಯಾಗಿತ್ತು.