ಒಂದೇ ಒಂದು ವಿಶ್ವಕಪ್ ಗೆಲ್ಲದೆ 300ಕ್ಕೂ ಅಧಿಕ ಏಕದಿನ ಪಂದ್ಯಗಳನ್ನಾಡಿದ ಆಟಗಾರರು ಯಾರು ಗೊತ್ತಾ?

Sat, 30 Sep 2023-10:35 am,

ಈ ಬಾರಿಯ ವಿಶ್ವಕಪ್ ಗೆಲ್ಲಲೇಬೇಕೆಂಬ ಪಣತೊಟ್ಟ ಭಾರತ ಭರ್ಜರಿ ತಯಾರಿ ನಡೆಸಿದೆ. ನಾವಿಂದು ಈ ವರದಿಯಲ್ಲಿ ಅಧಿಕ ಏಕದಿನ ಪಂದ್ಯಗಳನ್ನಾಡಿದ್ದರೂ ಸಹ ಒಂದೇ ಒಂದು ವಿಶ್ವಕಪ್ ಗೆಲ್ಲಲು ಸಾಧ್ಯವಾಗದ ಐದು ಆಟಗಾರರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಶ್ರೀಲಂಕಾದ ಮಾಜಿ ದಿಗ್ಗಜ ನಾಯಕ ಮಹೇಲಾ ಜಯವರ್ಧನೆ, ತಮ್ಮ  17 ವರ್ಷಗಳ ವೃತ್ತಿಜೀವನದಲ್ಲಿ 448 ಏಕದಿನ ಪಂದ್ಯಗಳನ್ನಾಡಿದ್ದಾರೆ. ಆದರೆ ಇವರ ದುರಾದೃಷ್ಟ ಹೇಗಿದೆ ಎಂದರೆ ಇಡೀ ವೃತ್ತಿಜೀವನದಲ್ಲಿ ಒಂದೇ ಒಂದು ವಿಶ್ವಕಪ್ ಕೂಡ ಗೆಲ್ಲಲು ಸಾಧ್ಯವಾಗಿಲ್ಲ. ಜಯವರ್ಧನೆ ನಾಯಕತ್ವದಲ್ಲೇ ಶ್ರೀಲಂಕಾ 2007ರ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದರೂ ಸಹ ಆಸೀಸ್ ವಿರುದ್ಧ ಸೋಲು ಕಂಡಿತ್ತು.

ಶ್ರೀಲಂಕಾದ ಮತ್ತೊಬ್ಬ ಮಾಜಿ ನಾಯಕ, ವಿಕೆಟ್ ಕೀಪರ್ ಕುಮಾರ್ ಸಂಗಕ್ಕಾರ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಏಕದಿನದಲ್ಲಿ ಅಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ ಸಚಿನ್ ಬಳಿಕ 2ನೇ ಸ್ಥಾನದಲ್ಲಿರುವ ಸಂಗಕ್ಕಾರ, ವಿಶ್ವಕಪ್ ಟ್ರೋಫಿ ಮಾತ್ರ ಗೆಲ್ಲುವಲ್ಲಿ ವಿಫಲವಾಗಿದ್ದಾರೆ. ಒಟ್ಟು, 404 ಪಂದ್ಯಗಳನ್ನಾಡಿದ ಕುಮಾರ್ ಸಂಗಕ್ಕಾರ, 14234 ರನ್ ಗಳಿಸಿದ್ದಾರೆ ಇವರ ನಾಯಕತ್ವದಲ್ಲಿ ಶ್ರೀಲಂಕಾ ತಂಡವು 2011ರ ವಿಶ್ವಕಪ್‌ ಫೈನಲ್ ಪ್ರವೇಶಿಸಿತ್ತು. ಆದರೆ ಭಾರತ ಗೆದ್ದು ಇತಿಹಾಸ ನಿರ್ಮಿಸಿದ್ದು ಮಾತ್ರ ಮರೆಯಲಾಗದ ಸಂಗತಿ.

ಪಾಕಿಸ್ತಾನದ ಶ್ರೇಷ್ಠ ಆಲ್​ರೌಂಡರ್ ಶಾಹೀದ್ ಅಫ್ರಿದಿ 398 ಏಕದಿನ ಪಂದ್ಯಗಳನ್ನಾಡಿದ್ದರೂ ಸಹ ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ವಿಶ್ವಕಪ್ ಗೆದ್ದಿಲ್ಲ,

ಟೀಂ ಇಂಡಿಯಾದ ‘ದಿ ವಾಲ್’ ಎಂದೇ ಖ್ಯಾತಿ ಪಡೆದಿರುವ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು ತಮ್ಮ ವೃತ್ತಿಜೀವನದಲ್ಲಿ 300ಕ್ಕೂ ಅಧಿಕ ಪಂದ್ಯಗಳನ್ನಾಡಿದ್ದರೂ ಸಹ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಅಂದು ನಾಯಕನಾಗಿ ಸಾಧ್ಯವಾಗದ ಕನಸನ್ನು ಈ ಬಾರಿ ಕೋಚ್ ಆಗಿ ಈಡೇರಿಸಲು ರಾಹುಲ್ ಟೊಂಕಕಟ್ಟಿ ನಿಂತಿದ್ದಾರೆ.

ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ 344 ಏಕದಿನ ಪಂದ್ಯಗಳನ್ನಾಡಿದ್ದಾರೆ. ಆದರೆ ನಾಯಕನಾಗಿ 1999ರ ವಿಶ್ವಕಪ್‌’ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರೂ ಸಹ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ

ZEENEWS TRENDING STORIES

By continuing to use the site, you agree to the use of cookies. You can find out more by Tapping this link