ಕಿಚ್ಚನ ಬಳಿಕ ಇನ್ಮುಂದೆ ಬಿಗ್ ಬಾಸ್ ನಿರೂಪಕ ಇವರೇ! 3 ರಾಷ್ಟ್ರಪ್ರಶಸ್ತಿ ಗೆದ್ದ ಕನ್ನಡದ ಪ್ರಖ್ಯಾತ ನಟನಿಗೆ ಆಫರ್... ಸೀಸನ್ ಮುಗಿದ 2 ದಿನಕ್ಕೆ ಹೊಸ ಹೋಸ್ಟ್ ಹೆಸರು ಬಹಿರಂಗ!
)
ಕಿಚ್ಚ ಸುದೀಪ್ ಅವರು ಇದುವೇ ನಾನು ಹೋಸ್ಟ್ ಆಗಿ ನಡೆಸಿಕೊಡುವ ಕೊನೆಯ ಸೀಸನ್ ಎಂದು ಭಾವನಾತ್ಮಕ ಹೇಳಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಇನ್ಮುಂದೆ ಬಿಗ್ ಬಾಸ್ ನಡೆಸಿಕೊಡುವವರು ಯಾರು? ಎಂಬ ಕುತೂಹಲ ಎಲ್ಲಡೆ ಮನೆ ಮಾಡಿದೆ.
)
ಆದರೆ ಈಗ ಈ ಪಟ್ಟಿಯಲ್ಲಿ ಒಬ್ಬರಲ್ಲ ಇಬ್ಬರಲ್ಲ ಐವರ ಹೆಸರು ಮುಂಚೂಣಿಯಲ್ಲಿದೆ ಎಂಬ ಮಾತು ಕೇಳಿಬರುತ್ತಿದೆ. ರಮೇಶ್ ಅರವಿಂದ್, ಡಾ.ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ರಾಕಿಂಗ್ ಸ್ಟಾರ್ ಯಶ್ ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹೆಸರು ಮುಂದಿದೆ ಎನ್ನಲಾಗುತ್ತಿದೆ.
)
ವೀಕೆಂಡ್ ವಿತ್ ರಮೇಶ್ ನಡೆಸಿಕೊಟ್ಟಿದ್ದ ರಮೇಶ್ ಅವರು ಹೋಸ್ಟ್ ಮಾಡಬಹುದು ಎಂದು ಹೇಳಲಾಗುತ್ತಿದೆ. ಆದರೆ ಒಂದೊಮ್ಮೆ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ್ದ ಅವರು, "ನನಗೆ ಆ ರೀತಿಯ ಯಾವುದೇ ಆಫರ್ ಬಂದಿಲ್ಲ, ಆ ಬಗ್ಗೆ ಚರ್ಚೆ ಸಹ ನಡೆಸಲಾಗಿಲ್ಲ. ನನ್ನ ಹಾದಿ ಬೇರೆ ಇದೆ" ಎಂದು ಹೇಳಿದ್ದರು.
ರಮೇಶ್ ಅವರನ್ನು ಹೊರತುಪಡಿಸಿ, ಅವರ ನಂತರ ಕೇಳಿ ಬಂದ ಹೆಸರು ಶಿವಣ್ಣ ಅವರದ್ದು. ಆದರೆ ಸದ್ಯ ಕೊಂಚ ಆರೋಗ್ಯ ಸಮಸ್ಯೆ ಎದುರಿಸಿ ಚಿಕಿತ್ಸೆ ಪಡೆದು ಕಂಬ್ಯಾಕ್ ಮಾಡಿರುವ ಅವರು ಹೋಸ್ಟ್ ಮಾಡೋದು ಅನುಮಾನ.
ಇನ್ನು ಕನ್ನಡದ ಮತ್ತೋರ್ವ ಖಡಕ್ ನಟ ಅಂದ್ರೆ ಉಪೇಂದ್ರ. ತನ್ನ ನೇರಾ ನುಡಿಗಳಿಂದಲೇ ಪ್ರಸ್ತುತತೆಯನ್ನು ಪ್ರಸ್ತುತಪಡಿಸುವ ಉಪ್ಪಿ ಈ ಶೋಗೆ ಹೋಸ್ಟ್ ಆಗಬಹುದು ಎನ್ನಲಾಗುತ್ತಿದೆ. ಆದರೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ.
ಇನ್ನು ಕಿಚ್ಚ ಸುದೀಪ್ ಅವರಂತೆಯೇ ಖಡಕ್ ನುಡಿಗಳನ್ನಾಡುವ ನಟ ಯಶ್ ಅವರು ಕೂಡ ಬಿಗ್ ಬಾಸ್ ಹೋಸ್ಟ್ ಆಗಬಹುದು ಎನ್ನಲಾಗುತ್ತಿದೆ. ಆದರೆ ಸದ್ಯ ಸಿಕ್ಕಾಪಟ್ಟೆ ಬ್ಯುಸಿ ಆಗಿರುವ ಯಶ್, ರಿಯಾಲಿಟಿ ಶೋಗಳ ಹೋಸ್ಟ್ ಆಗುವ ಕೆಲಸಕ್ಕೆ ಕೈ ಹಾಕುವುದು ಅನುಮಾನ.
ಇವರೆಲ್ಲರನ್ನೂ ಹೊರತುಪಡಿಸಿ ಭಾರೀ ಚರ್ಚೆಗೆ ಕಾರಣವಾಗುತ್ತಿರುವುದು ‘ಕಾಂತಾರ’ ಸಿನಿಮಾದ ಬಳಿಕ ಸಖತ್ ಪ್ರಸಿದ್ಧಿ ಪಡೆದ ರಿಷಬ್ ಶೆಟ್ಟಿ. ಇವರಿಗೆ ಬಿಗ್ ಬಾಸ್ ಅದಾಗಲೇ ಆಫರ್ ನೀಡಿದೆ ಎನ್ನಲಾಗುತ್ತಿದೆ. ಆದರೆ ಕಾಂತಾರ 2 ಶೂಟಿಂಗ್ ಇದ್ದ ಕಾರಣ ಆಫರ್‌ನಿಂದ ಹಿಂದೆ ಸರಿದಿದ್ದರು ಎನ್ನಲಾಗಿದೆ. ಆದರೆ ಮುಂಬರುವ ಸೀಸನ್‌ಗೆ ಇವರೇ ಹೋಸ್ಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ರಿಷಬ್ ಶೆಟ್ಟಿಯವರು ಕನ್ನಡದ ಹೆಸರಾಂತ ನಟ-ನಿರ್ದೇಶಕ. ಕನ್ನಡಕ್ಕೆ ಮೂರು ರಾಷ್ಟ್ರಪ್ರಶಸ್ತಿಗಳನ್ನು ತಂದುಕೊಟ್ಟ ಧೀಮಂತ ನಟ ಎಂದೇ ಹೇಳಬಹುದು.