ತಮ್ಮ ಇಡೀ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್‌ ಎಸೆದಿಲ್ಲ ಈ ಕ್ರಿಕೆಟಿಗ! ಈತ ಟೀಂ ಇಂಡಿಯಾದ ದಿಗ್ಗಜನೂ ಹೌದು.. ಯಾರೆಂದು ಗೆಸ್‌ ಮಾಡಿ

Tue, 03 Sep 2024-2:37 pm,

ಕ್ರಿಕೆಟ್ ಎಂಬುದು ಭಾರತದಲ್ಲಿ ವಿಶೇಷ ಸ್ಥಾನಮಾನ ಪಡೆದ ಕ್ರೀಡೆ ಎಂದೇ ಹೇಳಬಹುದು. ಎಲ್ಲಾ ಕ್ರೀಡೆಗಳಿಗಿಂತ ಕೊಂಚ ಭಿನ್ನವಾಗಿಯೇ ಭಾರತದಲ್ಲಿ ಅಭಿಮಾನ ಗಳಿಸಿರುವ ಕ್ರಿಕೆಟ್‌ʼನಲ್ಲಿ ಅದೆಷ್ಟೋ ದಿಗ್ಗಜರಿದ್ದಾರೆ. ನಾವಿಂದು ಈ ವರದಿಯಲ್ಲಿ, ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್‌ ಎಸೆಯದ ಐವರು ಶ್ರೇಷ್ಠರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ವೆಸ್ಟ್ ಇಂಡೀಸ್ ದಂತಕಥೆ ಲ್ಯಾನ್ಸ್ ಗಿಬ್ಸ್ 79 ಟೆಸ್ಟ್ ಮತ್ತು 3 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 300 ವಿಕೆಟ್‌ʼಗಳ ಗಡಿಯನ್ನು ತಲುಪಿದ ಮೊದಲ ಸ್ಪಿನ್ನರ್ ಇವರು. ಅಂದಹಾಗೆ, ಅವರ ಸುದೀರ್ಘ ಆಟದ ವೃತ್ತಿಜೀವನದಲ್ಲಿ, ಗಿಬ್ಸ್ ಎಂದಿಗೂ ನೋ-ಬಾಲ್ ಬೌಲ್ ಮಾಡಿಲ್ಲ.

 

ಇಂಗ್ಲೆಂಡಿನ ಶ್ರೇಷ್ಠ ಆಲ್‌ರೌಂಡರ್ ಇಯಾನ್ ಬೋಥಮ್ ತಮ್ಮ 16 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಒಂದೇ ಒಂದು ನೋ-ಬಾಲ್ ಬೌಲ್ ಮಾಡಲಿಲ್ಲ. ಇವರು ಇಂಗ್ಲೆಂಡ್ ಪರ 102 ಟೆಸ್ಟ್ ಮತ್ತು 116 ODIಗಳನ್ನು ಆಡಿದ್ದಾರೆ.

 

ಆಸ್ಟ್ರೇಲಿಯಾದ ವೇಗದ ಬೌಲರ್ ಡೆನ್ನಿಸ್ ಲಿಲ್ಲಿ ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್‌ʼಗಳಲ್ಲಿ ಒಬ್ಬರು. ಕ್ರಿಕೆಟ್‌ ಆಡಿದ ಅತ್ಯಂತ ಶಿಸ್ತಿನ ವೇಗದ ಬೌಲರ್‌ʼಗಳಲ್ಲಿ ಒಬ್ಬರು ಎಂದು ಕರೆಯುತ್ತಾರೆ. ಇವರು ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ ಎಂದಿಗೂ ನೋ-ಬಾಲ್ ಬೌಲ್ ಮಾಡಲಿಲ್ಲ. ಲಿಲ್ಲಿ ತಮ್ಮ ತಂಡಕ್ಕಾಗಿ 70 ಟೆಸ್ಟ್ ಮತ್ತು 63 ODI ಪಂದ್ಯಗಳನ್ನು ಆಡಿದ್ದಾರೆ.

 

ಪಾಕಿಸ್ತಾನದ ವೇಗದ ಬೌಲರ್ ಇಮ್ರಾನ್ ಖಾನ್ ವಿಶ್ವದ ಅತ್ಯುತ್ತಮ ಬೌಲರ್‌ʼಗಳಲ್ಲಿ ಒಬ್ಬರು. 88 ಟೆಸ್ಟ್‌, 175 ಏಕದಿನ ಪಂದ್ಯಗಳನ್ನು ಆಡಿರುವ ಅವರು, 1992 ರಲ್ಲಿ ಪಾಕಿಸ್ತಾನವನ್ನು ಮೊದಲ ವಿಶ್ವಕಪ್‌ʼನತ್ತ ಮನ್ನಡೆಯುವಂತೆ ಮಾಡಿದರು. ಇನ್ನು ಇವರ ಸಂಪೂರ್ಣ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್‌ ಎಸೆದಿಲ್ಲ.

 

ಭಾರತದ ಅತ್ಯುತ್ತಮ ಆಲ್ ರೌಂಡರ್ ಕಪಿಲ್ ದೇವ್ ಅವರು 1983 ರಲ್ಲಿ ಭಾರತ ಮೊದಲ ವಿಶ್ವಕಪ್ ಗೆಲ್ಲುವಂತೆ ಮಾಡಿದ ನಾಯಕ. 131 ಟೆಸ್ಟ್ ಮತ್ತು 225 ಏಕದಿನ ಪಂದ್ಯಗಳನ್ನು ಆಡಿದ ಕಪಿಲ್‌, ತಮ್ಮ ಸಂಪೂರ್ಣ ವೃತ್ತಿಜೀವನದಲ್ಲಿ ಎಂದಿಗೂ ನೋ-ಬಾಲ್ ಎಸೆದಿಲ್ಲ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link