ಮುಖೇಶ್-ನೀತಾ ಅಂಬಾನಿ ಸೊಸೆ ರಾಧಿಕಾಗೆ ನೀಡಿದ ಉಡುಗೊರೆಗಳಿವು !ವಿಶ್ವದ ದುಬಾರಿ ಗಿಫ್ಟ್ ಗಳೆಂದರೆ ಇವೇ !

Wed, 17 Jul 2024-9:34 am,

ಮಾಧ್ಯಮ ವರದಿಗಳ ಪ್ರಕಾರ, ನೀತಾ ಅಂಬಾನಿ ತನ್ನ ಸೊಸೆ ಮತ್ತು ಮಗನಿಗೆ ಮದುವೆಯ ಉಡುಗೊರೆಯಾಗಿ ದುಬೈ ಬಳಿಯ ಪಾಮ್ ಜುಮೇರಾದಲ್ಲಿ ನಿರ್ಮಿಸಲಾದ ಐಷಾರಾಮಿ ವಿಲ್ಲಾವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಲ್ಲಾ ದುಬೈ ಸಮೀಪದ ಐಷಾರಾಮಿ ಪ್ರದೇಶದಲ್ಲಿದೆ.  

ಪಾಮ್ ಜುಮೇರಾದಲ್ಲಿ ನಿರ್ಮಿಸಲಾದ ಈ ವಿಲ್ಲಾದ ವೆಚ್ಚ ಸುಮಾರು 640 ಕೋಟಿ ರೂಪಾಯಿ. ವಿಲ್ಲಾ ಸುಮಾರು 10 ಬೆಡ್ ರೂಂ ಮತ್ತು ಖಾಸಗಿ ಬೀಚ್ ಅನ್ನು ಹೊಂದಿದೆ.  

ಅಂಬಾನಿ ಕುಟುಂಬದ ಪ್ರತಿಯೊಬ್ಬ ಸದಸ್ಯರ ಬಳಿ ಕೂಡಾ ಅನೇಕ ಕಾರುಗಳ ಸಂಗ್ರಹವಿದೆ. ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಕಿರಿಯ ಪುತ್ರ ಅನಂತ್ ಗೆ ಬೆಂಟ್ಲಿ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ಕಾರನ್ನು ಮದುವೆ ಉಡುಗೊರೆಯಾಗಿ ನೀಡಿದ್ದಾರೆ. ಈ ಕಾರಿನ ಬೆಲೆ 5.42 ಕೋಟಿ.  

ನೀತಾ ಅಂಬಾ ನವ ವಧುವಿಗೆ ಕಸ್ಟಮ್ ಆಭರಣಗಳು ಮತ್ತು ಕಾರ್ಟಿಯರ್ ಬ್ರೂಚ್ ಅನ್ನು ಉಡುಗೊರೆಯಾಗಿ ನೀಡಿದರು.ಇದರ ಬೆಲೆ ಸುಮಾರು 21 ಕೋಟಿ 70 ಲಕ್ಷ ರೂಪಾಯಿ.  

ನೀತಾ ಅಂಬಾನಿ ಮತ್ತು ಮುಖೇಶ್ ಅಂಬಾನಿ ತಮ್ಮ ವಂಶದ ಕಿರಿಯ ಸೊಸೆ ರಾಧಿಕಾಗೆ 108 ಕೋಟಿ ಮೌಲ್ಯದ ಮುತ್ತು ಮತ್ತು ವಜ್ರದಿಂದ ಕೂಡಿದ ಚೋಕರ್ ನೆಕ್ಲೇಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link