ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕ ಯಾರು ಗೊತ್ತೇ? ಅನುಶ್ರೀಯೂ ಅಲ್ಲ... ಒಂದು ಎಪಿಸೋಡ್‌ಗೆ 3 ಲಕ್ಷ ಹಣ ಪಡೀತಾರೆ ಈ ಆಂಕರ್
)
ಕನ್ನಡ ಸಿನಿರಂಗದಲ್ಲಿ ಯಾವುದೇ ಕಾರ್ಯಕ್ರಮ ನಡೆಯಲಿ, ಹೆಚ್ಚಾಗಿ ಅಲ್ಲಿ ನಿರೂಪಣೆ ಮಾಡುವವರು ಆಂಕರ್ ಅನುಶ್ರೀ. ಕರ್ನಾಟಕದಲ್ಲೆಡೆ ಮನೆಮಾತಾಗಿರುವ ಈ ಮಾತಿನ ಮಲ್ಲಿಯ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೆ. ಆದರೆ ಈಕೆಗಿಂತಲೂ ಹೆಚ್ಚು ಸಂಭಾವನೆ ಪಡೆಯುವವ ಒಬ್ಬ ನಿರೂಪಕ ಇದ್ದಾರೆ.
)
ಕನ್ನಡದ ಖ್ಯಾತ ನಿರೂಪಕರಲ್ಲಿ ನಿರಂಜನ್ ದೇಶಪಾಂಡೆ ಕೂಡ ಒಬ್ಬರು. ನಿರೂಪಕರಾಗಿ ಪ್ರತಿ ಎಪಿಸೋಡ್‌ಗೆ 75 ಸಾವಿರ ಸಂಭಾವನೆಯನ್ನು ಪಡೆಯುತ್ತಾರೆ ಎನ್ನಲಾಗಿದೆ.
)
ಧಾರಾವಾಹಿ ಮೂಲಕ ಮನಗೆದ್ದಿದ್ದ ನಟಿ ಕಂ ಆಂಕರ್ ಶ್ವೇತಾ ಚೆಂಗಪ್ಪ ಎಪಿಸೋಡ್‌ವೊಂದಕ್ಕೆ 75 ಸಾವಿರ ರೂ. ಜಾರ್ಜ್ ಮಾಡುತ್ತಾರೆ ಎನ್ನಲಾಗಿದೆ.
ಸದ್ಯ ಅನುಶ್ರೀ ರೀತಿಯೇ ಮನೆಮಾತಾಗಿರುವ ನಿರೂಪಕರಲ್ಲಿ ಅನುಪಮಾ ಕೂಡ ಒಬ್ಬರು. ಇವರು ಪ್ರತಿ ಎಪಿಸೋಡ್‌ಗೆ 1 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.
ಬಾಲನಟನಾಗಿ ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದ ಮಾಸ್ಟರ್ ಆನಂದ್ ಅವರು ಪ್ರತಿ ಎಪಿಸೋಡ್‌ಗೆ 1.5 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ ಎಂದು ಮೂಲಗಳು ಹೇಳುತ್ತವೆ.
ಸಿನಿಮಾಗಳಲ್ಲಿ ಸಕ್ಸಸ್ ಕಾಣದ ಸೃಜನ್ ಲೋಕೇಶ್, ಮಜಾ ಟಾಕೀಸ್, ಛೋಟಾ ಚಾಂಪಿಯನ್, ಮಜಾ ವಿತ್ ಸೃಜಾ, ಫ್ಯಾಮಿಲಿ ಗ್ಯಾಂಗ್ ಸ್ಟಾರ್ಸ್ ಮೂಲಕ ಸಿಕ್ಕಾಪಟ್ಟೆ ಯಶಸ್ಸು ಕಂಡರು. ಆ ಬಳಿಕ ಟಾಕಿಂಗ್ ಸ್ಟಾರ್ ಎಂದೇ ಮನ್ನಣೆ ಪಡೆದ ಅವರು ಕಾರ್ಯಕ್ರಮದ ಎಪಿಸೋಡ್‌ವೊಂದಕ್ಕೆ 2 ಲಕ್ಷ ರೂಪಾಯಿ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ.
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್, ಪ್ಯಾಟೆ ಮಂದಿ ಕಾಡಿಗ್ ಬಂದ್ರು, ಹಳ್ಳಿ ಹೈದ ಪ್ಯಾಟೆಗ್ ಬಂದ ರಿಯಾಲಿಟಿ ಶೋ ಮೂಲಕ ಯಶಸ್ಸು ಕಂಡಿದ್ದ ಅಕುಲ್, ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ನಟನಾಗಿ, ನಿರೂಪಕರಾಗಿ ಕೆಲಸ ಮಾಡುತ್ತಾರೆ. ಇವರು ಕರ್ನಾಟಕದಾದ್ಯಂತ ಜನಮನ್ನಣೆ ಗಳಿಸಿರುವ ನಿರೂಪಕನಾಗಿದ್ದು, ಪ್ರತಿ ಎಪಿಸೋಡ್‌ಗೆ 3 ಲಕ್ಷ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.
ಕನ್ನಡ ಕಿರುತೆರೆಯ ಅತಿ ಪ್ರತಿಭಾನ್ವಿತ ನಿರೂಪಕಿ. ಈಕೆ ಯಾವುದೇ ಕಾರ್ಯಕ್ರಮಕ್ಕೆ ಬಂದರೂ ಸಾಕು ಅಲ್ಲಿ ಮಜಾ ಇದ್ದೇ ಇರುತ್ತದೆ. ಅಂದಹಾಗೆ ಅನುಶ್ರೀ ಅವರು ಎಪಿಸೋಡ್‌ವೊಂದಕ್ಕೆ 2.5 ರಿಂದ 3 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ