ODI ಏಷ್ಯಾಕಪ್ ಇತಿಹಾಸದಲ್ಲಿ ಅತೀ ಹೆಚ್ಚು ಸ್ಕೋರ್ ಗಳಿಸಿದ ಆಟಗಾರ ಯಾರು? ಅಗ್ರ 10ರಲ್ಲಿ ಮೂವರು ನಮ್ಮವರೇ

Thu, 10 Aug 2023-8:43 am,

ಏಷ್ಯಾ ಕಪ್ ODI ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರ್ ಕಲೆಹಾಕಿದ ಬ್ಯಾಟ್ಸ್’ಮನ್ ಯಾರೆಂದು ನಿಮಗೆ ಮಾಹಿತಿ ನೀಡಲಿದ್ದೇವೆ. ಭಾರತದ ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿಯಿಂದ ಪಾಕಿಸ್ತಾನದ ಶೋಯೆಬ್ ಮಲಿಕ್ ಮತ್ತು ಯೂನಿಸ್ ಖಾನ್ ವರೆಗೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು 2012 ರಲ್ಲಿ ಮೀರ್‌’ಪುರದಲ್ಲಿ ಪಾಕಿಸ್ತಾನದ ವಿರುದ್ಧ 183 ರನ್ ಗಳಿಸಿ ಏಷ್ಯಾ ಕಪ್ ODI ಪಂದ್ಯಗಳಲ್ಲಿ ಅತ್ಯಧಿಕ ಸ್ಕೋರ್ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.

ಪಾಕಿಸ್ತಾನದ ಮಾಜಿ ನಾಯಕ ಯೂನಿಸ್ ಖಾನ್ ಏಷ್ಯಾಕಪ್ ಏಕದಿನ ಪಂದ್ಯಗಳಲ್ಲಿ 2ನೇ ಗರಿಷ್ಠ ಸ್ಕೋರ್ ಹೊಂದಿದ್ದಾರೆ. ಏಷ್ಯಾ ಕಪ್ 2004 ರಲ್ಲಿ ಹಾಂಗ್ ಕಾಂಗ್ ವಿರುದ್ಧ ಯೂನಿಸ್ 122 ಎಸೆತಗಳಲ್ಲಿ 144 ರನ್ ಗಳಿಸಿದರು.

ಬಾಂಗ್ಲಾದೇಶದ ಮಾಜಿ ನಾಯಕ ಮುಶ್ಫಿಕರ್ ರಹೀಮ್ ಏಷ್ಯಾಕಪ್ ಏಕದಿನ ಪಂದ್ಯಗಳಲ್ಲಿ ಮೂರನೇ ಗರಿಷ್ಠ ಸ್ಕೋರ್ ಹೊಂದಿದ್ದಾರೆ. ರಹೀಮ್ ಏಷ್ಯಾ ಕಪ್ 2018 ರಲ್ಲಿ ಶ್ರೀಲಂಕಾ ವಿರುದ್ಧ 150 ಎಸೆತಗಳಲ್ಲಿ 144 ರನ್ ಗಳಿಸಿದರು.

ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶೋಯೆಬ್ ಮಲಿಕ್ ಏಷ್ಯಾ ಕಪ್ ಏಕದಿನ ಪಂದ್ಯಗಳಲ್ಲಿ 4ನೇ ಗರಿಷ್ಠ ಸ್ಕೋರ್ ಹೊಂದಿದ್ದಾರೆ. ಮಲಿಕ್ 2004 ರ ಏಷ್ಯಾ ಕಪ್‌ನಲ್ಲಿ ಭಾರತದ ವಿರುದ್ಧ 127 ಎಸೆತಗಳಲ್ಲಿ 143 ರನ್ ಗಳಿಸಿದರು.

ಏಷ್ಯಾಕಪ್ ಏಕದಿನ ಪಂದ್ಯಗಳಲ್ಲಿ 5ನೇ ಗರಿಷ್ಠ ಸ್ಕೋರ್ ಕೂಡ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಏಷ್ಯಾ ಕಪ್ 2014 ರಲ್ಲಿ ಬಾಂಗ್ಲಾದೇಶ ವಿರುದ್ಧ ಕೊಹ್ಲಿ 122 ಎಸೆತಗಳಲ್ಲಿ 136 ರನ್ ಗಳಿಸಿದರು.

ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಏಷ್ಯಾಕಪ್ ಏಕದಿನ ಪಂದ್ಯಗಳಲ್ಲಿ 6ನೇ ಗರಿಷ್ಠ ಸ್ಕೋರ್ ಹೊಂದಿದ್ದಾರೆ. ಏಷ್ಯಾಕಪ್ 2000ದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗಂಗೂಲಿ 124 ಎಸೆತಗಳಲ್ಲಿ ಔಟಾಗದೆ 135 ರನ್ ಸಿಡಿಸಿದ್ದರು.

ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗ ಏಷ್ಯಾಕಪ್ ಏಕದಿನ ಪಂದ್ಯಗಳಲ್ಲಿ 7ನೇ ಗರಿಷ್ಠ ಸ್ಕೋರ್ ಹೊಂದಿದ್ದಾರೆ. ಏಷ್ಯಾಕಪ್ 1997ರ ಪಂದ್ಯದಲ್ಲಿ ಭಾರತದ ವಿರುದ್ಧ ರಣತುಂಗಾ 131 ರನ್ ಗಳಿಸಿದ್ದರು.

ಶ್ರೀಲಂಕಾದ ಮಾಜಿ ಆಲ್‌ರೌಂಡರ್ ಸನತ್ ಜಯಸೂರ್ಯ ಏಷ್ಯಾಕಪ್ ಏಕದಿನ ಪಂದ್ಯಗಳಲ್ಲಿ 8 ಮತ್ತು 9ನೇ ಗರಿಷ್ಠ ಸ್ಕೋರ್ ಹೊಂದಿದ್ದಾರೆ. ಜಯಸೂರ್ಯ ಅವರು ಏಷ್ಯಾ ಕಪ್ 2004 ಮತ್ತು 2008 ರಲ್ಲಿ ಭಾರತ ಮತ್ತು ಬಾಂಗ್ಲಾದೇಶ ವಿರುದ್ಧ ಕ್ರಮವಾಗಿ ತಲಾ 130 ರನ್ ಗಳಿಸಿದ್ದರು.

ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಏಷ್ಯಾಕಪ್ ಏಕದಿನ ಪಂದ್ಯಗಳಲ್ಲಿ 10ನೇ ಗರಿಷ್ಠ ಸ್ಕೋರ್ ಹೊಂದಿದ್ದಾರೆ. ಧವನ್ ಏಷ್ಯಾಕಪ್ 2018 ರಲ್ಲಿ ಹಾಂಗ್ ಕಾಂಗ್ ವಿರುದ್ಧ 120 ಎಸೆತಗಳಲ್ಲಿ 127 ರನ್ ಗಳಿಸಿದರು

ZEENEWS TRENDING STORIES

By continuing to use the site, you agree to the use of cookies. You can find out more by Tapping this link