ODI Asia Cup ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಗೆಲುವು ಕಂಡ Team India ನಾಯಕ ಯಾರು ಗೊತ್ತಾ?
ಏಷ್ಯಾ ಕಪ್ 2023 ಪಾಕಿಸ್ತಾನ ಮತ್ತು ಶ್ರೀಲಂಕಾ ನೆಲದಲ್ಲಿ ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ಈ ವರ್ಷ ಏಷ್ಯಾಕಪ್ ಏಕದಿನ ಮಾದರಿಯಲ್ಲಿ ನಡೆಯಲಿದೆ. ಇನ್ನು ಈ ಸಂದರ್ಭದಲ್ಲಿ ಟೀಂ ಇಂಡಿಯಾದ ಕೆಲವೊಂದು ದಾಖಲೆಗಳನ್ನು ನಿಮ್ಮ ಮುಂದೆ ಇಡಲಿದ್ದೇವೆ.
ಇಂದು ಈ ವರದಿಯಲ್ಲಿ ಏಕದಿನ ಏಷ್ಯಾಕಪ್ ಇತಿಹಾಸದಲ್ಲಿ ಹೆಚ್ಚು ಬಾರಿ ಟ್ರೋಫಿ ಗೆದ್ದ ಟೀಂ ಇಂಡಿಯಾದ ನಾಯಕರು ಯಾರೆಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಲಿದ್ದೇವೆ.
ಎಂಎಸ್ ಧೋನಿ: ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಏಷ್ಯಾ ಕಪ್ ನಲ್ಲಿ 14 ಪಂದ್ಯಗಳನ್ನಾಡಿದ್ದು, ಅದರಲ್ಲಿ 9 ಗೆಲುವು, 4 ಸೋಲು ಮತ್ತು 1 ಟೈ ಆಗಿದೆ. 2008-2018ರವರೆಗೆ ಧೋನಿ ಏಷ್ಯಾ ಕಪ್ ಆಡಿದ್ದಾರೆ.
ಸೌರವ್ ಗಂಗೂಲಿ - ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ 9 ಏಷ್ಯಾ ಕಪ್ ಪಂದ್ಯ ಆಡಿದ್ದಾರೆ. ಅದರಲ್ಲಿ 4 ಪಂದ್ಯ ಗೆದ್ದರೆ, 5 ಪಂದ್ಯ ಸೋಲು ಕಂಡಿದ್ದಾರೆ. 2000-2004ರವರೆಗೆ ಆಡಿದ್ದಾರೆ.
ಮೊಹಮ್ಮದ್ ಅಜರುದ್ದೀನ್ 7 ಪಂದ್ಯಗಳಲ್ಲಿ 5 ಗೆಲುವಾಗಿದ್ದರೆ, 2ರಲ್ಲಿ ಸೋಲು ಕಂಡಿದ್ದಾರೆ. 1990-1995ರವರೆಗೆ ಏಷ್ಯಾಕಪ್ ಆಡಿದ್ದಾರೆ.
ರೋಹಿತ್ ಶರ್ಮಾ: ಸದ್ಯ ಟೀಂ ಇಂಡಿಯಾದ ನಾಯಕನಾಗಿರುವ ಶರ್ಮಾ 5 ಏಷ್ಯಾಕಪ್ ಪಂದ್ಯಗಳಲ್ಲಿ 5ನ್ನೂ ಗೆದ್ದುಬೀಗಿದ್ದಾರೆ. 2018ರಿಂದ ಏಷ್ಯಾಕಪ್ ಆಡುತ್ತಿದ್ದು, ಈ ಬಾರಿಯೂ ಕಣಕ್ಕಿಳಿಯಲಿದ್ದಾರೆ.
ವಿರಾಟ್ ಕೊಹ್ಲಿ: ಟೀಂ ಇಂಡಿಯಾದ ಡ್ಯಾಶಿಂಗ್ ಬ್ಯಾಟ್ಸ್ ಮನ್ ಮತ್ತು ಮಾಜಿ ನಾಯಕ ಕಿಂಗ್ ಕೊಹ್ಲಿ ಏಷ್ಯಾಕಪ್ ನಲ್ಲಿ 4 ಪಂದ್ಯಗಳನ್ನಾಡಿದ್ದು, ಅದರಲ್ಲಿ 2 ಗೆಲುವು, 2 ಸೋಲು ಅನುಭವಿಸಿದ್ದಾರೆ,
ಸಚಿನ್ ತೆಂಡೂಲ್ಕರ್: ಗಾಡ್ ಆಫ್ ಕ್ರಿಕೆಟ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಕೂಡ 4 ಪಂದ್ಯವನ್ನು ಆಡಿದ್ದು, ಅದರಲ್ಲಿ ಒಂದು ಗೆಲುವು, 2 ಸೋಲು ಅನುಭವಿಸಿದ್ದಾರೆ. ಮತ್ತೊಂದು ಪಂದ್ಯ ಫಲಿತಾಂಶವಿಲ್ಲದೆ ಮುಕ್ತಾಯಗೊಂಡಿದೆ.