ವಿಶ್ವದ ಅತ್ಯುತ್ತಮ ಕ್ರಿಕೆಟ್ ನಾಯಕ ಯಾರು ಗೊತ್ತಾ? ಟಾಪ್ 5ರಲ್ಲಿ ಭಾರತದ ಈತನೇ ಅಗ್ರಸ್ಥಾನಿ
ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ದೇಶದ ಬಿಲಿಯನ್-ಪ್ಲಸ್ ಜನಸಂಖ್ಯೆಯ ಜನರು ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದಾರೆ. ನಾವಿಂದು ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ರಿಕೆಟ್ ನಾಯಕರ ಪಟ್ಟಿಯನ್ನು ನಿಮ್ಮ ಮುಂದಿಡಲಿದ್ದೇವೆ.
ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2007 ರಿಂದ 2018ರ ವರೆಗೆ ನಾಯಕನಾಗಿ ಆಡಿದ 332 ಪಂದ್ಯಗಳಲ್ಲಿ 178 ಗೆಲುವು ಕಂಡರೆ, 120 ಪಂದ್ಯ ಸೋತಿದ್ದಾರೆ.
ಇನ್ನು ಆಸ್ಟ್ರೇಲಿಯಾ ತಂಡದ ರಿಕಿ ಪಾಂಟಿಂಗ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2002 ರಿಂದ 2012ರವರೆಗೆ ನಾಯಕನಾಗಿ ಆಡಿದ 324 ಪಂದ್ಯಗಳಲ್ಲಿ 220 ಗೆಲುವು ಮತ್ತು 77 ಸೋಲುಗಳನ್ನು ಅನುಭವಿಸಿದ್ದಾರೆ.
ನ್ಯೂಜಿಲೆಂಡ್ ತಂಡದ ಸ್ಟೀಫನ್ ಫ್ಲೆಮಿಂಗ್ ಮೂರನೇ ಸ್ಥಾನದಲ್ಲಿದ್ದು 1997-2007 ರವರೆಗೆ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು, ಇವರು 303 ಪಂದ್ಯಗಳನ್ನಾಡಿದ್ದು 128 ಗೆದ್ದರೆ, 135 ಪಂದ್ಯಗಳಲ್ಲಿ ಸೋತಿದ್ದಾರೆ.
ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ 4ನೇ ಸ್ಥಾನದಲ್ಲಿದ್ದಾರೆ. ಇವರು 2003-2014 ರವರೆಗೆ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದು, 286 ಪಂದ್ಯಗಳಲ್ಲಿ 163 ಗೆಲುವು ಮತ್ತು 89 ಪಂದ್ಯ ಸೋತಿದ್ದಾರೆ.
ಆಸ್ಟ್ರೇಲಿಯಾದ ಅಲನ್ ಬಾರ್ಡರ್ 5ನೇ ಸ್ಥಾನದಲ್ಲಿದ್ದಾರೆ. 1984-1994ರವರೆಗೆ ತಂಡದ ನಾಯಕನಾಗಿದ್ದ ಬಾರ್ಡರ್, 271 ಪಂದ್ಯಗಳನ್ನಾಡಿದ್ದು, ಅದರಲ್ಲಿ 139 ಪಂದ್ಯ ಗೆದ್ದರೆ 89 ಪಂದ್ಯ ಸೋತಿದ್ದಾರೆ.