ಜಗತ್ತಿನ ಅತೀ ಚಿಕ್ಕ ಕ್ರಿಕೆಟ್ ಸ್ಟೇಡಿಯಂ ಯಾವುದು ಗೊತ್ತಾ? ಈ ಪಟ್ಟಿಯಲ್ಲಿದೆಯೇ ಭಾರತದ ಕ್ರೀಡಾಂಗಣ?
ಜಗತ್ತಿನ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಂದರೆ ಅದು ನಮ್ಮ ದೇಶದ ಹೆಮ್ಮೆಯ ಕ್ರೀಡಾಂಗಣವೇ ಅಹಮದಾಬಾದ್’ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ. ಸರಿ ಸುಮಾರು 1.32000 ಮಂದಿ ಏಕಕಾಲಕ್ಕೆ ಕುಳಿತು ಪಂದ್ಯ ವೀಕ್ಷಣೆ ಮಾಡಬಹುದು.
ಆದರೆ ನಾವಿಂದು ಜಗತ್ತಿನ ಅತೀ ಪುಟ್ಟ ಕ್ರಿಕೆಟ್ ಸ್ಟೇಡಿಯಂ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಸ್ಟೇಡಿಯಂನಲ್ಲಿ ಕಡಿಮೆ ಎಂದರೆ ಕೇವಲ 5 ಸಾವಿರ ಮಂದಿ ಪಂದ್ಯ ನೋಡಬಹುದು ಅಷ್ಟೇ… ಅಂತಹ ಸ್ಟೇಡಿಯಂಗಳು ಯಾವುದೆಂದು ಮುಂದೆ ನೋಡೋಣ.
ಸ್ಕಾಟ್’ಲ್ಯಾಂಡ್’ನ ಈಡನ್ಬರ್ಗ್’ನಲ್ಲಿರುವ ಗ್ರೇಂಜ್ ಕ್ಲಬ್ ಸಾಮರ್ಥ್ಯ 5,000
ಐರ್ಲೆಂಡ್ ಬೆಲ್‌ಫಾಸ್ಟ್’ನಲ್ಲಿರುವ ಸ್ಟೋರ್‌ಮಾಂಟ್ ಕ್ರಿಕೆಟ್ ಗ್ರೌಂಡ್ ಸಾಮರ್ಥ್ಯ 6000
ಕೆನಡಾ ಒಂಟಾರಿಯೊದಲ್ಲಿರುವ ಮ್ಯಾಪಲ್ ಲೀಫ್ ಕ್ರಿಕೆಟ್ ಕ್ಲಬ್ ಸಾಮರ್ಥ್ಯ 7000
ಆಸ್ಟ್ರೇಲಿಯಾದ ಟೈಗರ್ ಪಾರ್ಕ್ ಕ್ರಿಕೆಟ್ ಸ್ಟೇಡಿಯಂ ಸಾಮಾರ್ಥ್ಯ 7,200
ಜಿಂಬಾಬ್ವೆಯ ಬುಲವಾಯೊದಲ್ಲಿರುಬ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಸಾಮಾರ್ಥ್ಯ 12,497
ದಕ್ಷಿಣ ಆಫ್ರಿಕಾದಲ್ಲಿರುವ ಬೋಲ್ಯಾಂಡ್ ಪಾರ್ಕ್ ಸಾಮಾರ್ಥ್ಯ 10,000
ಆಸ್ಟ್ರೇಲಿಯಾದಲ್ಲಿರುವ ರಿವರ್‌ವೇ ಸ್ಟೇಡಿಯಂ ಸಾಮಾರ್ಥ್ಯ 10,000
ವೆಸ್ಟ್ ಇಂಡೀಸ್’ನ ಆಂಟಿಗುವಾದಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ ಸಾಮಾರ್ಥ್ಯ 10,000