ಆಪರೇಶನ್ ಬೇಕಾಗಿಯೇ ಇಲ್ಲ! ಈ ಪುಟ್ಟ ಹಣ್ಣು ಸಾಕು ಕಣ್ಣ ಪೊರೆ ತೆಗೆದು ಹಾಕಲು! ಕನ್ನಡಕ್ಕದ ಅಗತ್ಯವೇ ಬಾರದಷ್ಟು ಚುರುಕಾಗುವುದು ದೃಷ್ಟಿ
ಕಣ್ಣಿನ ಪೊರೆ ಎಂದರೆ ಮಸೂರದ ಮೇಲೆ ಆವರಿಸುವ ಬಿಳಿ ಪದರ.ಕಣ್ಣಿನ ಮೇಲೆ ಪೊರೆ ಬಂದ್ರೆ ಕಣ್ಣ ಕಪ್ಪು ಸಂಪೂರ್ಣ ಬಿಳಿಯಾಗುತ್ತದೆ. ಹೀಗಾದ ಮೇಲೆ ಗೋಚರ ಕೂಡಾ ಅಸ್ಪಷ್ಟವೇ.
ವಯಸ್ಸಾದಂತೆ, ಕಣ್ಣಿನ ಪೊರೆ ಸಮಸ್ಯೆಗಳು ಹೆಚ್ಚಾಗಿ ಉದ್ಭವಿಸುತ್ತವೆ. ಕಣ್ಣಿನ ಪೊರೆ ಎದುರಾದರೆ ಶಸ್ತ್ರಚಿಕಿತ್ಸೆಯೇ ಪರಿಹಾರ ಎನ್ನುವ ಮಾತಿದೆ.
ಆದರೆ ಪೊರೆ ಆವರಿಸುವಾಗಲೇ ಅಂದರೆ ಆರಂಭ ಹಂತದಲ್ಲಿಯೇ ಈ ಪುಟ್ಟ ಹಣ್ಣನ್ನು ನಿತ್ಯ ಸೇವಿಸುವ ಮೂಲಕ ಕಣ್ಣಿನ ಪೊರೆ ಹೆಚ್ಚಾಗದಂತೆ ನೋಡಿಕೊಳ್ಳಬಹುದು. ಇದು ದೃಷ್ಟಿ ಮಂಜಾಗದಂತೆ ಕೂಡಾ ಕಾಪಾಡುತ್ತದೆ.
ಚಳಿಗಾಲದಲ್ಲಿ ಹೇರಳವಾಗಿ ಸಿಗುವ ಹಣ್ಣು ಬೆಟ್ಟದ ನೆಲ್ಲಿಕಾಯಿ. ಇದು ಕಣ್ಣ ಪೊರೆಗೆ ನೈಸರ್ಗಿಕ ಔಷಧಿಯಾಗಿ ಕೆಲಸ ಮಾಡಬಲ್ಲದು. ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಎ ಉತ್ತಮ ದೃಷ್ಟಿ ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ನೆಲ್ಲಿಕಾಯಿ ಕಣ್ಣಿನ ಪೊರೆಯನ್ನು ತಡೆಯುವುದಲ್ಲದೆ, ರಾತ್ರಿ ಕುರುಡುತನದ ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ. ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಸ್ಪಷ್ಟ ಮತ್ತು ತೀಕ್ಷ್ಣವಾದ ದೃಷ್ಟಿ ಪಡೆಯುವುದು ಸಾಧ್ಯವಾಗುತ್ತದೆ.
ಕಣ್ಣಿನ ಪೊರೆ ಇದ್ದವರು ನಿತ್ಯ ಯಾವುದೇ ಸಮಯದಲ್ಲಿಯಾದರೂ ಒಂದು ನೆಲ್ಲಿಕಾಯಿ ತಿನ್ನುತ್ತಾ ಬಂದರೆ ಪೊರೆ ಬೆಳೆಯದಂತೆ ತಡೆಯಬಹುದು. ಕಣ್ಣ ದೃಷ್ಟಿ ಮಂಜಾಗುವುದನ್ನು ಕೂಡಾ ತಪ್ಪಿಸಬಹ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.