ವಿಚಿತ್ರ ಆಚರಣೆ: ಈ ಧಾರ್ಮಿಕ ಸ್ಥಳದಲ್ಲಿ ಜೀವಂತ ಮಕ್ಕಳನ್ನು ಕತ್ತಿನವರೆಗೂ ಮಣ್ಣಿನಲ್ಲಿ ಹೂಳುತ್ತಾರೆ..!

Wed, 19 Jan 2022-2:55 pm,

ಜಲಂಧರ್‌ನ ಹಳ್ಳಿಯಲ್ಲಿರುವ ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾರದಲ್ಲಿ ಜನರು ಆಟಿಕೆ ವಿಮಾನಗಳನ್ನು ನೀಡುತ್ತಾರೆ. ಹೀಗೆ ಮಾಡುವುದರಿಂದ ವೀಸಾ ಬೇಗ ಸಿಗುತ್ತದೆ ಮತ್ತು ವಿದೇಶಕ್ಕೆ ಹೋಗುವ ಆಸೆ ಈಡೇರುತ್ತದೆ ಎಂಬ ನಂಬಿಕೆ ಇದೆ.

ಪೂಜೆ ಮಾಡುವ ಸ್ಥಳವು ಮನೆಯಲ್ಲಿರಲಿ ಅಥವಾ ದೇವಾಲಯದಲ್ಲಿರಲಿ ಅದನ್ನು ಯಾವಾಗಲೂ ಅತ್ಯಂತ ಸ್ವಚ್ಛವಾಗಿ ಇಡಲಾಗುತ್ತದೆ. ಪೂಜಾ ಸ್ಥಳದಲ್ಲಿ ಪೊರಕೆ ಇಟ್ಟುಕೊಳ್ಳುವುದು ಕಷ್ಟ, ಆದರೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಪಾತಾಳೇಶ್ವರ ಮಹಾದೇವ ದೇವಸ್ಥಾನದಲ್ಲಿ ಶಿವನಿಗೆ ಪೊರಕೆ ಅರ್ಪಿಸಲಾಗುತ್ತದೆ. ಶಿವನಿಗೆ ಪೊರಕೆ ಅರ್ಪಿಸಲು ದೂರದೂರುಗಳಿಂದ ಜನ ಇಲ್ಲಿಗೆ ಬರುತ್ತಾರೆ. ಹೀಗೆ ಮಾಡುವುದರಿಂದ ಚರ್ಮರೋಗಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ರಾಜಸ್ಥಾನದ ಬಿಕಾನೇರ್‌ನಲ್ಲಿರುವ ಕರ್ಣಿ ಮಾತಾ ದೇವಸ್ಥಾನದಲ್ಲಿ ಇಲಿಗಳಿಗೆ ದೇವತೆಯ ಸ್ಥಾನಮಾನವನ್ನು ನೀಡಲಾಗಿದೆ. ಇಲ್ಲಿ ಕಪ್ಪು ಇಲಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಭಕ್ತರು ಅವುಗಳಿಗೆ ಹಾಲು ಉಣಿಸುತ್ತಾರೆ. ಇಲ್ಲಿ ಇಲಿಯ ಪಾದದ ಕೆಳಗೆ ಬರುವುದು ಅಶುಭವೆಂದು ಪರಿಗಣಿಸಲಾಗಿದೆ.

ಗುಲ್ಬರ್ಗಾದ ಮೋಮಿನ್‌ಪುರದ ಸೆವೆನ್ ಗುಂಬಜ್ ಮಸೀದಿ ಬಹಳ ವಿಶಿಷ್ಟವಾಗಿದೆ. ಇಲ್ಲಿ ಚಿಕ್ಕ ಮಕ್ಕಳನ್ನು ಕತ್ತಿನವರೆಗೂ ಮಣ್ಣಿನಲ್ಲಿ ಹೂಳಲಾಗುತ್ತದೆ. ಇಲ್ಲಿನ ಮಣ್ಣಿನಲ್ಲಿ ವಿಶೇಷ ಮಕ್ಕಳನ್ನು ಕೊರಳಿನವರೆಗೂ ಹೂತುಹಾಕಿದರೆ ಅವರು ಸಾಮಾನ್ಯರಂತೆ ಆಗುತ್ತಾರೆಂಬ ವಿಶೇಷ ನಂಬಿಕೆ ಇದೆ.

ಉಜ್ಜಯಿನಿಯ ಕಾಲಭೈರವ ದೇವಾಲಯದಲ್ಲಿ ಮದ್ಯವನ್ನು ದೇವರಿಗೆ ಪ್ರಸಾದವಾಗಿ ಅರ್ಪಿಸಲಾಗುತ್ತದೆ. ಅಷ್ಟೇ ಅಲ್ಲ ಪ್ರಸಾದದ ಮದ್ಯವನ್ನು ಭಕ್ತರಿಗೆ ಹಂಚಲಾಗುತ್ತದೆ. ಹೀಗೆ ಮಾಡುವುದರಿಂದ ಕಾಲಭೈರವ ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ.

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link