Liver Disease: ಇವೇ ನೋಡಿ ಲಿವರ್ ಸಮಸ್ಯೆಯ ಆರಂಭಿಕ ಲಕ್ಷಣಗಳು
ಅತಿಯಾಗಿ ಮದ್ಯಪಾನ ಮಾಡುವುದು ಲಿವರ್ ಸಮಸ್ಯೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹೀಗಾಗಿ ಮದ್ಯಪಾನದಿಂದ ಆದಷ್ಟು ದೂರವಿರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
ಸ್ಥೂಲಕಾಯತೆ ಮತ್ತು ಅಧಿಕ ತೂಕವು ಸಹ ಲಿವರ್ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಅನೇಕರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಲಿವರ್ ಸಮಸ್ಯೆಗೆ ಕಾರಣವಾಗುತ್ತದೆ.
ಅಧಿಕ ರಕ್ತದ ಕೊಲೆಸ್ಟ್ರಾಲ್ ಮಟ್ಟವು ಸಮಸ್ಯೆ ನಿಮ್ಮ ಲಿವರ್‌ನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅಧಿಕ ರಕ್ತದ ಕೊಲೆಸ್ಟ್ರಾಲ್ ಮಟ್ಟದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು.
ಮಧುಮೇಹ ಹೆಪಟೈಟಿಸ್ ʼಸಿʼ ಸೋಂಕು ಸಹ ಲಿವರ್ ಡ್ಯಾಮೇಜ್ ಮಾಡುತ್ತದೆ. ಮಧುಮೇಹಿಗಳು ಇದರ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ರೆ ನಿಮ್ಮ ಪ್ರಾಣಕ್ಕೆ ಇದು ಕುತ್ತು ತರುತ್ತದೆ.
ನಿರಂತರ ಆಯಾಸ, ಧಣಿವು ಸಹ ಲಿವರ್ ಸಮಸ್ಯೆಯ ಸಂಕೇತ. ವಿಶ್ರಾಂತಿ ಪಡೆದ ನಂತರವೂ ನಿಮಗೆ ದಣಿವಾಗುವುದು ಲಿವರ್ ಹಾಳಾಗುತ್ತಿರುವ ಸಂಕೇತವಾಗಿರಬಹುದು. ಹೀಗಾಗಿ ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು.