Lok Sabha Election 2024: ಚುನಾವಣೆಗೂ ಮುನ್ನ ಆನ್‌ಲೈನ್‌ನಲ್ಲಿ ವೋಟರ್ ಐಡಿ ವಿಳಾಸವನ್ನು ಸುಲಭವಾಗಿ ಅಪ್ಡೇಟ್ ಮಾಡಿ
ಲೋಕಸಭಾ ಚುನಾವಣೆ ದೇಶದ ಅತಿದೊಡ್ಡ ಸಾರ್ವತ್ರಿಕ ಚುನಾವಣೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ 2024ರ ಲೋಕಸಭೆ ಚುನಾವಣೆ ನಡೆಯಲಿದೆ. ಯಾವುದೇ ಚುನಾವಣೆಯಲ್ಲಿ ಮತದಾನ ಮಾಡಲು ನಾಗರೀಕರು ಮತದಾರರ ಗುರುತಿನ ಚೀಟಿಯನ್ನು ಹೊಂದಿರಬೇಕು. ಒಂದೊಮ್ಮೆ ನಿಮ್ಮ ವೋಟರ್ ಐಡಿಯಲ್ಲಿ ವಿಳಾಸ ಬದಲಾಗಿದ್ದರೆ ನೀವು ಸುಲಭವಾಗಿ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ವಿಳಾಸವನ್ನು ನವೀಕರಿಸಬಹುದು. ಇದರ ಸುಲಭ ಪ್ರಕ್ರಿಯೆ ಇಲ್ಲಿದೆ.
ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿ ವಿಳಾಸ ಬದಲಾಯಿಸಲು ಮೊದಲು ನೀವು ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‌ಗೆ www.nvsp.in ಗೆ ಭೇಟಿ ನೀಡಿ ಲಾಗ್ ಇನ್ ಆಗಬೇಕು. ನಂತರ ವೆಬ್‌ಸೈಟ್‌ನ ಮುಖಪುಟದಲ್ಲಿ ಗೋಚರಿಸುವ 'ಚುನಾವಣಾ ಪಟ್ಟಿಯಲ್ಲಿನ ನಮೂದುಗಳ ತಿದ್ದುಪಡಿ' ವಿಭಾಗ ಎಂಬ ಆಯ್ಕೆಯನ್ನು ಆರಿಸಿ.
ಈ ವಿಭಾಗದಲ್ಲಿ ಕಾಣುವ ಫಾರ್ಮ್ -8 ಬಟನ್ ಅನ್ನು ಆಯ್ಕೆ ಮಾಡಿ. ನಂತರ ಅದು ನಿಮ್ಮನ್ನು ಹೊಸ ಪುಟಕ್ಕೆ ಕರೆದೊಯ್ಯುತ್ತದೆ. ಇಲ್ಲಿ ನಿಗದಿತ ಜಾಗದಲ್ಲಿ ಅಗತ್ಯವಿರುವ ವಿವರಗಳನ್ನು ನಮೂದಿಸುವ ಮೂಲಕ ನೀವು ಸ್ವಯಂ ಆಯ್ಕೆಯನ್ನು ಆರಿಸಿ ಮತ್ತು ಸಲ್ಲಿಸು ಬಟನ್ ಕ್ಲಿಕ್ ಮಾಡಿ.
ನಂತರ ಇಲ್ಲಿ ಕಾಣುವ ಶಿಫ್ಟಿಂಗ್ ಆಫ್ ರೆಸಿಡೆನ್ಸ್ ಆಯ್ಕೆಯನ್ನು ಆರಿಸಿ, ನಿಮ್ಮ ವಿಳಾಸ ಯಾವ ವಿಧಾನಸಭಾ ಕ್ಷೇತ್ರದ ಒಳಗೆ ಅಥವಾ ಹೊರಗೆ ನಿಮ್ಮ ವಿಳಾಸ ಬದಲಾಗುತ್ತಿದೆಯೇ ಎಂಬುದನ್ನು ಸಹ ನೀವು ಆಯ್ಕೆ ಮಾಡಿ ಸಲ್ಲಿಸಬೇಕು.
ನಂತರ ನೀವು ನಿಮ್ಮ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರ, ಸಂಸದೀಯ ಕ್ಷೇತ್ರದ ಮಾಹಿತಿಯನ್ನು ಭರ್ತಿ ಮಾಡಬೇಕು ಮತ್ತು ಮುಂದಿನ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಇದರ ನಂತರ, ನಿಮ್ಮ ಆಧಾರ್ ಸಂಖ್ಯೆ, ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಮುಂದಿನ ಆಯ್ಕೆಯನ್ನು ಟ್ಯಾಪ್ ಮಾಡಿ.
ಮೇಲಿನ ಹಂತಗಳು ಪೂರ್ಣಗೊಂಡ ನಂತರ ನಿಮ್ಮ ಹೊಸ ವಿಳಾಸವನ್ನು ನಮೂದಿಸಿ ಮತ್ತು ಮತದಾರರ ಗುರುತಿನ ಚೀಟಿಯಲ್ಲಿ ಅದನ್ನು ನವೀಕರಿಸಲು ಪೋಷಕ ದಾಖಲೆಗಳ ಮೇಲೆ ಕ್ಲಿಕ್ ಮಾಡಿ.
ಬಳಿಕ ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿದ ನಂತರ, ಮುಂದಿನ ಆಯ್ಕೆಯನ್ನು ಕ್ಲಿಕ್ ಮಾಡಿ. ಇದರ ನಂತರ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
ನೀವು ಸಲ್ಲಿಸಿದ ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ. ಪರಿಶೀಲನೆಯ ಸಮಯದಲ್ಲಿ ನಿಮ್ಮ ಅರ್ಜಿಯು ಸರಿಯಾಗಿದೆ ಎಂದು ನಿಮಗೆ ಕಂಡು ಬಂದರೆ ಹೊಸ ವಿಳಾಸವನ್ನು ನಿಮ್ಮ ವೋಟರ್ ಐಡಿಯಲ್ಲಿ ನವೀಕರಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ಹೊಸ ನವೀಕೃತಗೊಂಡ ವೋಟರ್ ಐಡಿ ನಿಮ್ಮ ವಿಳಾಸಕ್ಕೆ ತಲುಪುತ್ತದೆ.