Lok Sabha Election 2024: ಲೋಕಸಭೆ ಚುನಾವಣೆಯ ರಣಕಹಳೆ ಮೊಳಗಿಸಿದ EC, ಇದುವರೆಗಿನ ಅತ್ಯಂತ ದುಬಾರಿ ಚುನಾವಣೆ ಯಾವುದು ಗೊತ್ತಾ?

Sat, 16 Mar 2024-4:49 pm,

Sabha Elections In India 2024 Schedule: ಚುನಾವಣಾ ವೆಚ್ಚದ ವಿಷಯದಲ್ಲಿ 2014ರ ಲೋಕಸಭೆ ಚುನಾವಣೆ ಮೊದಲ ಸ್ಥಾನದಲ್ಲಿದೆ ಈ ಚುನಾವಣೆಯಲ್ಲಿ ಸರ್ಕಾರ 3,870 ಕೋಟಿ ರೂ.ಗಳ ವೆಚ್ಚ ಮಾಡಿತ್ತು. ಈ ವೆಚ್ಚದಲ್ಲಿ ಮತದಾರರ ಜಾಗೃತಿ ಅಭಿಯಾನ, ಮತದಾರರ ಚೀಟಿ ವಿತರಣೆ ಮತ್ತು ಮತದಾರರ ದೃಢೀಕೃತ ಕಾಗದದ ವೆಚ್ಚಗಳು ಶಾಮಿಲಾಗಿವೆ . ಈ ವರ್ಷದಲ್ಲಿ 83 ಕೋಟಿಗೂ ಹೆಚ್ಚು ಮತದಾರರು ತಮ್ಮ ಮತ ಚಲಾಯಿಸಿದ್ದರು. ಹಣದುಬ್ಬರ ಹೆಚ್ಚಳಕ್ಕೆ ಚುನಾವಣಾ ವೆಚ್ಚ ಹೆಚ್ಚಳವೇ ಕಾರಣ ಎಂದು ಚುನಾವಣಾ ಆಯೋಗವು (Biggest Democratic Festival) ಮತದಾನದ ಪ್ರಮಾಣ ಹೆಚ್ಚಿಸಲು ಕೈಗೊಂಡ ಕ್ರಮಗಳಲ್ಲಿ ಉಲ್ಲೇಖಿಸಿತ್ತು.  

ಸುಮಾರು 15 ವರ್ಷಗಳ ಹಿಂದೆ 2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಸರಕಾರದ ಖಜಾನೆಯಿಂದ 1114 ಕೋಟಿ ರೂ. ಖರ್ಚು ಮಾಡಲಾಗಿತ್ತು.  ಈ ಚುನಾವಣೆಯಲ್ಲಿ ಸುಮಾರು 72 ಕೋಟಿ ಮತದಾರರು ತಮ್ಮ ಅತ್ಯಮೂಲ್ಯ ಮತ ಚಲಾಯಿಸಿದ್ದರು. 2004 ರಲ್ಲಿ 1016 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಈ ವರ್ಷ 67 ಕೋಟಿ ಮತದಾರರು ತಮ್ಮ ಮತ ಚಲಾಯಿಸಿದ್ದರು.  

1999ರಲ್ಲಿ ಈ ಖರ್ಚು 947 ಕೋಟಿ ರೂ.ಗಳಾಗಿತ್ತು, ಆಗ 62 ಕೋಟಿ ಮತದಾರರು ಮತ ಚಲಾಯಿಸಿದ್ದರು. ಇದಕ್ಕೂ ಒಂದು ವರ್ಷದ ಹಿಂದೆಯೇ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿದ್ದು, ಅದು ಸರ್ಕಾರದ ಬೊಕ್ಕಸಕ್ಕೆ 666 ಕೋಟಿ ರೂಪಾಯಿ ಹೊರೆಯಾಗಿತ್ತು. 1998ರ ಚುನಾವಣೆಯಲ್ಲಿ 61 ಕೋಟಿ ಮತದಾರರು ಮತ ಚಲಾಯಿಸಿದ್ದರು.  

ಇದಕ್ಕೂ ಮುನ್ನ 1995ರ ಚುನಾವಣೆಯಲ್ಲಿ 597 ಕೋಟಿ ರೂ. ವೆಚ್ಚ ಮಾಡಲಾಗಿತ್ತು.  ಅದೇ ರೀತಿ 1991-92ರಲ್ಲಿ ಈ ವೆಚ್ಚ 359 ಕೋಟಿ ರೂ. ಗಳಾಗಿತ್ತು. ಆದರೆ 1989ರಲ್ಲಿ ಕೇವಲ 154 ಕೋಟಿ ರೂ.ವ್ಯಯಿಸಲಾಗಿತ್ತು ಮತ್ತು  1984ರಲ್ಲಿ ಈ ವೆಚ್ಚ ಕೇವಲ 81 ಕೋಟಿ ರೂ. ಆಗಿತ್ತು  

1980 ರ ಚುನಾವಣಾ ವೆಚ್ಚ - ರೂ 55 ಕೋಟಿ ಗಳಾಗಿತ್ತು, 1977 ರ ಚುನಾವಣಾ ವೆಚ್ಚ - ರೂ 23 ಕೋಟಿಗಳಾಗಿತ್ತು, 1971 ವೆಚ್ಚ ರೂ 11.6 ಕೋಟಿ ಗಳಾಗಿತ್ತು. 1967 ವೆಚ್ಚ - ರೂ 11 ಕೋಟಿಗಳಾಗಿತ್ತು, 1962 ವೆಚ್ಚ ರೂ 7.3 ಕೋಟಿಗಳಾಗಿತ್ತು, 1957 ರಲ್ಲಿ  ರೂ 5.52 ಕೋಟಿ ಮತ್ತು ರೂ 11952 ಕೋಟಿ ವೆಚ್ಚ ಮಾಡಲಾಗಿತ್ತು  

ZEENEWS TRENDING STORIES

By continuing to use the site, you agree to the use of cookies. You can find out more by Tapping this link