Parliament Attack Photos: ಶೂಗಳಲ್ಲಿ ಸ್ಮೋಕ್ ಕ್ರ್ಯಾಕರ್, ಕೈಯಲ್ಲಿ ಗ್ಯಾಸ್ ಸ್ಪ್ರೇ.. ಲೋಕಸಭೆಯ ದಾಳಿಯ ಚಿತ್ರಣ ಇಲ್ಲಿದೆ!
ಇಂದು ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪವಾಗಿದ್ದು, ಕಲಾಪ ನಡೆಯುತ್ತಿದ್ದ ವೇಳೆಯೇ ಇಬ್ಬರು ಅಪರಿಚಿತ ವ್ಯಕ್ತಿಗಳು ಸದನಕ್ಕೆ ನುಗ್ಗಿದ್ದಾರೆ.
ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಸುಮಾರು 20 ವರ್ಷ ವಯಸ್ಸಿನ ಇಬ್ಬರು ಯುವಕರು ಇದ್ದಕ್ಕಿದ್ದಂತೆ ಪ್ರೇಕ್ಷಕರ ಗ್ಯಾಲರಿಯಿಂದ ಸದನಕ್ಕೆ ಹಾರಿದರು ಮತ್ತು ಅವರ ಕೈಯಲ್ಲಿ ಸ್ಮೋಕ್ ಕ್ರ್ಯಾಕರ್ ಹೊಂದಿದ್ದರು. ಈ ಸ್ಮೋಕ್ ಕ್ರ್ಯಾಕರ್ ಗಳಿಂದ ಹಳದಿ ಹೊಗೆ ಹೊರಬರುತ್ತಿತ್ತು. ಅವರಲ್ಲಿ ಒಬ್ಬರು ಸ್ಪೀಕರ್ ಪೀಠದ ಕಡೆಗೆ ಓಡಲು ಪ್ರಯತ್ನಿಸುತ್ತಿದ್ದರು. ಕೆಲವು ಘೋಷಣೆಗಳನ್ನು ಕೂಗಿದರು. ಇದು ಭದ್ರತೆಯ ಗಂಭೀರ ಉಲ್ಲಂಘನೆಯಾಗಿದೆ ಎಂದರು.
ಈ ವೇಳೆ ಸದನದಲ್ಲಿದ್ದ ಸಂಸದರು ಇಬ್ಬರನ್ನೂ ಹಿಡಿಯಲು ಯತ್ನಿಸಿದಾಗ ಅವರು ಶೂನಿಂದ ಏನನ್ನೋ ತೆಗೆಯಲು ಯತ್ನಿಸಿದರು. ಇಬ್ಬರೂ ಯುವಕರು ಅಶ್ರುವಾಯು ಸಿಂಪಡಿಸಿದರು ಎಂದು ಹೇಳಲಾಗುತ್ತಿದೆ. ಆ ವೇಳೆ ಸದನದೊಳಗೆ ಹಳದಿ ಹೊಗೆ ಕಾಣಿಸಿಕೊಂಡಿತ್ತು ಎಂದು ಹಲವು ಸಂಸದರು ತಿಳಿಸಿದ್ದಾರೆ.
ನೂತನ ಸಂಸತ್ ಭವನದಲ್ಲಿ ಉಂಟಾದ ಈ ಭದ್ರತಾ ಲೋಪದ ಬಗ್ಗೆ ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆ ಬಳಿಕ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.
ಲೋಕಸಭಾ ಕಲಾಪ ನಡೆಯುತ್ತಿದ್ದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಸಂಸತ್ತಿನ ಒಳಗೆ ಪ್ರವೇಶಿಸಿದ ಈ ವ್ಯಕ್ತಿಗಳು ಬಣ್ಣದ ಅನಿಲ(ಕಲರ್ ಗ್ಯಾಸ್) ಸಿಡಿಸಿದ್ದಾರೆ.
ಅಪರಿಚಿತ ವ್ಯಕ್ತಿಗಳು ಗ್ಯಾಲರಿಯಿಂದ ಸದನಕ್ಕೆ ಜಿಗಿದರು. ಅವರು ಘೋಷಣೆಗಳನ್ನು ಕೂಗುತ್ತಾ ಗ್ಯಾಸ್ ಸಿಂಪಡಿಸಲು ಪ್ರಾರಂಭಿಸಿದರು ಎಂದು ತೃಣಮೂಲ ಕಾಂಗ್ರೆಸ್ ನಾಯಕಿ ಕಾಕೋಲಿ ದಸ್ತಿದಾರ್ ಹೇಳಿದ್ದಾರೆ.