ಗಣಪತಿಗೆ ಅತ್ಯಂತ ಪ್ರಿಯ ಈ ರಾಶಿಯವರು! ಇವರ ಪ್ರತಿ ಹೆಜ್ಜೆಗೂ ಬೆನಕನೇ ಬೆಳಕಾಗುವನು; ಪ್ರತಿಹೆಜ್ಜೆಯಲ್ಲೂ ಕೈಹಿಡಿದು ಮುನ್ನಡೆಸುವ ಸಿದ್ಧಿವಿನಾಯಕ
ಹಿಂದೂ ಧರ್ಮದಲ್ಲಿ ಗಣೇಶನನ್ನು ಪ್ರಥಮ ಪೂಜಿತ ಎಂದು ಪರಿಗಣಿಸಲಾಗಿದೆ. ಯಾವುದೇ ಶುಭ ಮಂಗಳಕರ ಕೆಲಸವನ್ನು ಪ್ರಾರಂಭಿಸುವ ಮೊದಲು, ಗಣೇಶನ ಪ್ರಾರ್ಥನೆ ಮಾಡುವುದು ಧರ್ಮದ ಪದ್ಧತಿ. ಅಂದರೆ ವಿಧಿವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ. ಅದರಲ್ಲೂ ಭಾದ್ರಪದ ಮಾಸದಲ್ಲಿ ಗಣೇಶನ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.
ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಗಣಪತಿಗೆ ಕೆಲವು ರಾಶಿಗಳೆಂದ ಬಹಳ ಪ್ರಿಯ. ಈ ರಾಶಿಯ ಮೇಲೆ ಗಣಪತಿ ಯಾವಾಗಲೂ ದಯೆ ತೋರುತ್ತಾರೆ ಎಂದು ನಂಬಲಾಗಿದೆ. ಹಾಗಾದರೆ ಆ ರಾಶಿಗಳ ಬಗ್ಗೆ ತಿಳಿಯೋಣ.
ಮೇಷ: ಮೇಷ ರಾಶಿಯ ಅಧಿಪತಿ ಮಂಗಳನಾಗಿದ್ದು, ಈ ರಾಶಿಯ ಜನರು ಧೈರ್ಯಶಾಲಿಗಳು ಮತ್ತು ಬುದ್ಧಿಶಾಲಿಗಳೂ ಆಗಿರುತ್ತಾರೆ. ಇದಲ್ಲದೆ, ಇದು ಗಣೇಶನ ನೆಚ್ಚಿನ ರಾಶಿ ಎಂದು ಪರಿಗಣಿಸಲಾಗಿದೆ. ಇವರ ಮೇಲೆ ಗಣಪಯ್ಯನ ಕೃಪೆ ಇರುವುದರಿಂದಲೇ ಮೇಷ ರಾಶಿಯ ಜನರು ಬುದ್ಧಿವಂತರಾಗಿರುತ್ತಾರೆ.
ಮಿಥುನ ರಾಶಿಯು ಗಣೇಶನ ನೆಚ್ಚಿನ ರಾಶಿಗಳಲ್ಲಿ ಒಂದಾಗಿದೆ. ಇವರ ಮೇಲೂ ಗಣೇಶನ ಕರುಣಾಮಯಿ ದೃಷ್ಟಿ ಇದ್ದು, ಆಶೀರ್ವಾದವೂ ಇರುತ್ತದೆ.
ಮಕರ ರಾಶಿಯವರಿಗೆ ಗಣೇಶನ ವಿಶೇಷ ಆಶೀರ್ವಾದವಿರುತ್ತದೆ. ಇವರು ತಪ್ಪೆಸಗಿದರೂ ಕ್ಷಮೆ ನೀಡಿ, ಇವರನ್ನು ಕಾಯುತ್ತಾನೆ. ಅಷ್ಟೇ ಅಲ್ಲದೆ, ಪ್ರತಿಯೊಂದು ಕ್ಷೇತ್ರದಲ್ಲೂ ಇವರಿಗೆ ಯಶಸ್ಸು ಸಿಗುತ್ತದೆ. ವ್ಯಾಪಾರ ಮತ್ತು ಶಿಕ್ಷಣ ಕ್ಷೇತ್ರದಲ್ಲೂ ವಿಶೇಷ ಲಾಭವನ್ನು ಪಡೆಯುತ್ತಾರೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.