ಈ ರಾಶಿಯವರ ಮೇಲಿರುತ್ತದೆ ಗಣೇಶನ ಆಶೀರ್ವಾದ ! ಯಾವ ಕೆಲಸ ಮಾಡಿದರೂ ವಿಘ್ನ ಎದುರಾಗುವುದೇ ಇಲ್ಲ
ಮೇಷ ರಾಶಿಯವರ ಮೇಲೆ ಗಣೇಶನ ವಿಶೇಷ ಕೃಪೆ ಇರುತ್ತದೆ. ಮಂಗಳನ ಪ್ರಭಾವದಿಂದಾಗಿ, ಅವರು ಸಾಕಷ್ಟು ಧೈರ್ಯ ಮತ್ತು ಶಕ್ತಿಯನ್ನು ಹೊಂದಿರುತ್ತಾರೆ. ಹೀಗಾಗಿ ಯಾವುದೇ ಕೆಲಸವನ್ನು ಮಾಡಬೇಕಾದರೂ ಹಿಂದೆ ಮುಂದೆ ಯೋಚನೆ ಮಾಡದೇ ಮುನ್ನುಗ್ಗುತ್ತಾರೆ. ಆ ಕಾರ್ಯದಲ್ಲಿ ಯಶಸ್ಸು ಕೂಡಾ ಪಡೆಯುತ್ತಾರೆ. ಇವರು ಯಾವ ಕೆಲ್ಸಕ್ಕೆ ಕೈ ಹಾಕಿದರೂ ಆ ಕೆಲಸ ಸುಲಭವಾಗಿ ಕೈ ಗೂಡುತ್ತದೆ. ಗಣೇಶನ ಆಶೀರ್ವಾದದಿಂದ ಈ ರಾಶಿಯವರು ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ.
ಜೋತಿಷ್ಯದಲ್ಲಿ ಬುಧ ಗ್ರಹವು ಗಣೇಶನಿಗೆ ಸಂಬಂಧಿಸಿದ್ದಾಗಿದೆ. ಈ ಕಾರಣದಿಂದಾಗಿ ಗಣಪತಿಯ ವಿಶೇಷ ಅನುಗ್ರಹ ಈ ರಾಶಿಯವರ ಮೇಲಿರುತ್ತದೆ. ಈ ರಾಶಿಯವರು ಬಹಳ ಬುದ್ದಿವಂತರಾಗಿರುತ್ತಾರೆ. ವ್ಯಾಪಾರ ಆರಂ ಭಿಸಿದರೆ ಅದರಲ್ಲಿ ಹೆಚ್ಚಿನ ಯಶಸ್ಸು ಪಡೆಯುತ್ತಾರೆ. ಉದ್ಯೋಗಕ್ಕೆ ಸೇರಿದರೂ ಉತ್ತಮ ಸ್ಥಾನವನ್ನು ಪಡೆಯುತ್ತಾರೆ. ಗಣೇಶನ ಕೃಪೆಯಿಂದ ಈ ರಾಶಿಯವರು ಮಾಡುವ ಕೆಲಸಗಳು ಯಶಸ್ಸು ಪಡೆಯುತ್ತವೆ.
ಮಕರ ರಾಶಿಯ ಅಧಿಪತಿ ಶನಿ ದೇವರು. ಈ ರಾಶಿಯವರ ಮೇಲೆ ಶನಿ ದೇವನ ಜೊತೆಗೆ, ಗಣೇಶನ ಕೃಪೆಯೂ ಅಧಿಕವಾಗಿರುತ್ತದೆ. ಈ ರಾಶಿಯವರು ತುಂಬಾ ಶ್ರಮಶೀಲರಾಗದ್ದು, ತಮ್ಮ ಬುದ್ಧಿವಂತಿಕೆ ಮತ್ತು ಕೌಶಲ್ಯದಿಂದ ಏನೇ ಸವಾಲುಗಳು ಎದುರಾದರೂ ಅದನ್ನು ಎದುರಿಸಿ ಜಯಿಸುತ್ತಾರೆ. ತಮ್ಮ ಜೀವನದಲ್ಲಿ ಭಾರೀ ಯಶಸ್ಸು ಪಡೆಯುತ್ತಾರೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)