ಕುಬೇರ ದೇವನ ನೆಚ್ಚಿನ ರಾಶಿಗಳಿವು... ಜೀವನದಲ್ಲಿ ಎಂದಿಗೂ ಹಣದ ಕೊರತೆ ಇರದಂತೆ ಸುಖ ಸಂಪತ್ತು ಕೊಟ್ಟು ಕಾಯುವನು, ಅದೃಷ್ಟವಂತರೆಂದರೆ ಅದು ನೀವೇ !
)
ಕುಬೇರ ದೇವನ ನೆಚ್ಚಿನ ರಾಶಿ: ಕುಬೇರನ ಆಶೀರ್ವಾದದಿಂದ ಈ ರಾಶಿಗಳ ಜೀವನದಲ್ಲಿ ಎಂದಿಗೂ ಸಂಪತ್ತು ಮತ್ತು ಐಶ್ವರ್ಯಕ್ಕೆ ಯಾವುದೇ ಕೊರತೆಯಿರುವುದಿಲ್ಲ.
)
ವೃಶ್ಚಿಕ ರಾಶಿ - ಬಹಳ ಬುದ್ಧಿವಂತರು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೆಲಸದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ.
)
ವೃಷಭ ರಾಶಿ - ಪ್ರತಿ ಕೆಲಸದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಸಮಾಜದಲ್ಲಿ ಗೌರವ ಮತ್ತು ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ಹಣದ ಕೊರತೆ ಇವರಿಗೆ ಎಂದಿಗೂ ಬರುವುದಿಲ್ಲ.
ತುಲಾ ರಾಶಿ - ಹಿಡಿದ ಕೆಲಸವನ್ನು ಪೂರ್ಣಗೊಳಿಸದೆ ಬಿಡಲಾರರು. ಎಷ್ಟೇ ಬಡತನದಲ್ಲಿ ಹುಟ್ಟಿದರು ಈ ರಾಶಿಯವರು ಶ್ರೀಮಂತರಾಗುತ್ತಾರೆ. ಕುಬೇರ ದೇವನ ವಿಶೇಷ ದಯೆ ಇವರ ಮೇಲಿರುತ್ತದೆ.
ಕಟಕ ರಾಶಿ - ಕಠಿಣ ಪರಿಶ್ರಮದಿಂದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಕುಬೇರನ ಆಶೀರ್ವಾದದಿಂದ ಹಣ ಸಂಪಾದಿಸುವ ಸುಲಭದ ದಾರಿ ಸಿಗುತ್ತದೆ. ಲಕ್ಷ್ಮಿ ಕುಬೇರ ಪೂಜೆಯಿಂದ ಜೀವನದಲ್ಲಿ ಉನ್ನತಿ ಗಳಿಸುವಿರಿ.
ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.